Home Bibles ಅಂಕೆಗಳ ಪುಸ್ತಕ 8:17 · ಕನ್ನಡ ಬೈಬಲ್
ಅಂಕೆಗಳ ಪುಸ್ತಕ 8:17 · ಕನ್ನಡ ಬೈಬಲ್

ಇಸ್ರಾಯೇಲ್‌ ಮಕ್ಕಳಲ್ಲಿ ಮನುಷ್ಯರಲ್ಲಾ ದರೂ ಪಶುಗಳಲ್ಲಾದರೂ ಚೊಚ್ಚಲಾದದ್ದೆಲ್ಲಾ ನನ್ನದು; ಐಗುಪ್ತ ದೇಶದಲ್ಲಿ ಎಲ್ಲಾ ಚೊಚ್ಚಲಾದವುಗಳನ್ನು ಹೊಡೆದ ದಿವಸದಲ್ಲಿ ನಾನು ಅವರನ್ನು ನನಗಾಗಿ ಪರಿಶುದ್ಧ ಮಾಡಿಕೊಂಡೆನು.

Cross references

ನಿರ್ಗಮಕಾಂಡ 12:29

ಮಧ್ಯರಾತ್ರಿಯಲ್ಲಿ ನಡೆದದ್ದೇನಂದರೆ, ಸಿಂಹಾ ಸನದ ಮೇಲೆ ಕೂತುಕೊಂಡ ಫರೋಹನ ಚೊಚ್ಚಲು ಮಗನು ಮೊದಲುಗೊಂಡು ಸೆರೆಯಲ್ಲಿದ್ದ ಸೆರೆಯವನ ಚೊಚ್ಚಲು ಮಗನ ವರೆಗೂ ಅಂದರೆ ಐಗುಪ್ತದೇಶ ದಲ್ಲಿದ್ದ ಎಲ್ಲಾ ಚೊಚ್ಚಲು ಮಕ್ಕಳನ್ನೂ ಪಶುಗಳಲ್ಲಿ ಚೊಚ್ಚಲಾದವುಗಳೆಲ್ಲವನ್ನೂ ಕರ್ತನು ಸಂಹರಿಸಿದನು.

ನಿರ್ಗಮಕಾಂಡ 13:2

ಇಸ್ರಾಯೇಲ್‌ ಮಕ್ಕಳಲ್ಲಿ ಗಂಡಸರಲ್ಲಿಯೂ ಪಶುಗಳಲ್ಲಿಯೂ ಗರ್ಭ ತೆರೆಯುವ ಚೊಚ್ಚಲಾದದ್ದನ್ನೆಲ್ಲಾ ನನಗಾಗಿ ಪರಿಶುದ್ಧ ಮಾಡು; ಅದು ನನ್ನದೇ ಅಂದನು.

ನಿರ್ಗಮಕಾಂಡ 13:12

ಗರ್ಭ ತೆರೆಯುವದೆಲ್ಲಾ ಅಂದರೆ ನಿನಗಿರುವ ಪಶುಗಳಲ್ಲಿ ಮೊದಲು ಹುಟ್ಟಿದ್ದನ್ನೆಲ್ಲಾ ಪ್ರತ್ಯೇಕಿಸಬೇಕು. ಗಂಡಾದವುಗಳು ಕರ್ತನವುಗಳೇ.

ನಿರ್ಗಮಕಾಂಡ 29:44

ಸಭೆಯ ಗುಡಾರವನ್ನೂ ಯಜ್ಞವೇದಿಯನ್ನೂ ಪರಿಶುದ್ಧಮಾಡುವೆನು. ಆರೋನನನ್ನೂ ಅವನ ಕುಮಾರರನ್ನೂ ನನಗೆ ಯಾಜಕ ಸೇವೆಮಾಡುವಂತೆ ಪವಿತ್ರಮಾಡುವೆನು.

ಲೇವ್ಯಕಾಂಡ 27:14

ಒಬ್ಬನು ತನ್ನ ಮನೆಯನ್ನು ಕರ್ತನಿಗೆ ಪರಿಶುದ್ಧ ವಾಗಿರಲೆಂದು ಅದನ್ನು ಪರಿಶುದ್ಧ ಮಾಡಿದರೆ ಯಾಜ ಕನು ಅದಕ್ಕೆ ಒಳ್ಳೇದಾಗಲಿ ಕೆಟ್ಟದ್ದಾಗಲಿ ಕ್ರಯವನ್ನು ಕಟ್ಟಬೇಕು; ಯಾಜಕನು ಕ್ರಯಕಟ್ಟುವ ಪ್ರಕಾರವೇ ಅದು ಸ್ಥಿರವಾಗಿರಬೇಕು.

ಲೇವ್ಯಕಾಂಡ 27:26

ಪಶುಗಳಲ್ಲಿ ಮೊದಲಾಗಿ ಹುಟ್ಟಿದ್ದು ಮಾತ್ರವೇ ಕರ್ತನ ಚೊಚ್ಚಲಾಗಿರುವದು. ಅದನ್ನು ಯಾವನೂ ಪ್ರತಿಷ್ಠೆಮಾಡಲಾರನು. ಅದು ಎತ್ತಾಗಲಿ ಇಲ್ಲವೆ ಕುರಿ ಯಾಗಲಿ ಅದು ಕರ್ತನದೇ.

ಅಂಕೆಗಳ ಪುಸ್ತಕ 3:13

ಚೊಚ್ಚಲಾದವರೆಲ್ಲರೂ ನನ್ನವರೇ. ನಾನು ಐಗುಪ್ತ ದೇಶದಲ್ಲಿ ಚೊಚ್ಚಲಾದವುಗಳನ್ನೆಲ್ಲಾ ಹೊಡೆದ ದಿನ ದಲ್ಲಿ ನಾನು ಇಸ್ರಾಯೇಲಿನಲ್ಲಿ ಮನುಷ್ಯರಲ್ಲಿಯೂ ಪಶುಗಳಲ್ಲಿಯೂ ಚೊಚ್ಚಲಾದದ್ದನ್ನೆಲ್ಲಾ ಪರಿಶುದ್ಧ ಮಾಡಿಕೊಂಡಿದ್ದೇನೆ. ಅವರು ನನ್ನವರಾಗಿರಬೇಕು. ನಾನೇ ಕರ್ತನು.

ಕೀರ್ತನೆಗಳು 78:51

ಐಗುಪ್ತದಲ್ಲಿ ಚೊಚ್ಚಲವಾದವರೆಲ್ಲರನ್ನೂ ಹಾಮನ ಗುಡಾರಗಳಲ್ಲಿ ಶಕ್ತಿಯ ಪ್ರಥಮ ಫಲವನ್ನೂ ಹೊಡೆದನು.

ಕೀರ್ತನೆಗಳು 105:36

ಅವರ ದೇಶದಲ್ಲಿಯ ಎಲ್ಲಾ ಚೊಚ್ಚಲುಗಳನ್ನೂ ಬಲವುಳ್ಳ ಎಲ್ಲಾ ಪ್ರಮುಖರನ್ನೂ ಹೊಡೆದನು.

ಕೀರ್ತನೆಗಳು 135:8

ಆತನು ಐಗುಪ್ತದ ಚೊಚ್ಚಲಾದವುಗಳನ್ನು, ಮನು ಷ್ಯರು ಮೊದಲುಗೊಂಡು ಪಶುಗಳ ವರೆಗೂ ಹೊಡೆ ದನು.

ಯೆಹೆಜ್ಕೇಲ 20:12

ಇದಲ್ಲದೆ ಅವರನ್ನು ಪರಿಶುದ್ಧ ಮಾಡುವ ಕರ್ತನು ನಾನೇ ಎಂದು ಅವರು ತಿಳಿಯುವ ಹಾಗೆ ನನಗೂ ಅವರಿಗೂ ಗುರುತಾಗಿರುವದಕ್ಕೆ ನನ್ನ ಸಬ್ಬತ್‌ ದಿನಗಳನ್ನು ನಾನು ಅವರಿಗೆ ಕೊಟ್ಟೆನು.

ಲೂಕ 2:23

(ಕರ್ತನ ನ್ಯಾಯ ಪ್ರಮಾಣದಲ್ಲಿ ಬರೆದಿರುವಂತೆ--ಪ್ರತಿಯೊಂದು ಚೊಚ್ಚಲು ಗಂಡುಮಗು ಕರ್ತನಿಗೆ ಪರಿಶುದ್ಧವೆಂದು ಕರೆಯಲ್ಪಡಬೇಕು).

ಯೋಹಾನ 10:36

ತಂದೆಯು ಪ್ರತಿಷ್ಠೆಮಾಡಿ ಲೋಕಕ್ಕೆ ಕಳುಹಿಸಿಕೊಟ್ಟವನಾದ ನಾನು ದೇವರ ಮಗನಾಗಿದ್ದೇನೆಂದು ಹೇಳಿದ್ದಕ್ಕೆ--ನೀನು ದೇವ ದೂಷಣೆ ಮಾಡುತ್ತೀ ಎಂದು ನೀವು ಅನ್ನುತ್ತೀರೋ?

ಯೋಹಾನ 17:19

ಅವರು ಸತ್ಯದಲ್ಲಿ ಪ್ರತಿಷ್ಠಿಸಲ್ಪಡುವಂತೆ ನಾನು ನನ್ನನ್ನು ಅವರಿ ಗೋಸ್ಕರ ಪ್ರತಿಷ್ಠಿಸಿಕೊಳ್ಳುತ್ತೇನೆ.

ಹೆಬ್ರಿಯರಿಗೆ 10:29

ಯಾವನು ದೇವ ಕುಮಾರನನ್ನು ತುಳಿದು ತನ್ನನ್ನು ಪವಿತ್ರಮಾಡಿದಂಥ ಒಡಂಬಡಿಕೆಯ ರಕ್ತವನ್ನು ಅಶುದ್ಧವೆಂದೆಣಿಸಿ ಕೃಪೆಯ ಆತ್ಮನನ್ನು ತಿರಸ್ಕಾರ ಮಾಡಿದ್ದಾನೋ ಅವನು ಇನ್ನೂ ಎಷ್ಟೋ ಕ್ರೂರವಾದ ದಂಡನೆಗೆ ಪಾತ್ರನಾಗಬೇಕೆಂಬ ದನ್ನು ಯೋಚಿಸಿರಿ.

ಹೆಬ್ರಿಯರಿಗೆ 11:28

ಇಸ್ರಾಯೇಲ್ಯರ ಚೊಚ್ಚಲಮಕ್ಕಳನ್ನು ಸಂಹರಿಸುವವನು ಅವರನ್ನು ಮುಟ್ಟದಂತೆ ಅವನು ಪಸ್ಕವನ್ನೂ ರಕ್ತ ಪ್ರೋಕ್ಷಣೆಯನ್ನೂ ಆಚರಿಸಿದ್ದು ನಂಬಿಕೆಯಿಂದಲೇ.

ಯಾಕೋಬ 1:18

ಆತನು ತನ್ನ ಚಿತ್ತದ ಪ್ರಕಾರ ಸತ್ಯವಾಕ್ಯದಿಂದ ನಮ್ಮನ್ನು ಹುಟ್ಟಿಸಿರಲಾಗಿ ನಾವು ಆತನ ಸೃಷ್ಟಿಗಳಲ್ಲಿ ಒಂದು ತರಹದ ಪ್ರಥಮ ಫಲ ಗಳಂತಾದೆವು.

Interlinear

Choose Theme