Home Bibles ಅಂಕೆಗಳ ಪುಸ್ತಕ 5:22 · ಕನ್ನಡ ಬೈಬಲ್
ಅಂಕೆಗಳ ಪುಸ್ತಕ 5:22 · ಕನ್ನಡ ಬೈಬಲ್

ಶಪಿಸುವಂಥ ಈ ನೀರು ಹೊಟ್ಟೆಯನ್ನು ಉಬ್ಬಿಸುವದಕ್ಕೂ ತೊಡೆಯನ್ನು ಕ್ಷೀಣಿಸುವದಕ್ಕೂ ನಿನ್ನ ಕರುಳುಗಳ ಒಳಗೆ ಹೋಗು ವದು; ಈ ಪ್ರಕಾರ ಯಾಜಕನು ಆ ಸ್ತ್ರೀಯನ್ನು ಶಾಪದ ಪ್ರಮಾಣದಿಂದ ಪ್ರಮಾಣ ಮಾಡಿಸಬೇಕು. ಅದಕ್ಕೆ ಆ ಸ್ತ್ರೀಯು--ಹಾಗೆಯೇ ಆಗಲಿ ಅನ್ನಬೇಕು.

Cross references

ಅಂಕೆಗಳ ಪುಸ್ತಕ 5:27

ಆಕೆಗೆ ಆ ನೀರನ್ನು ಕುಡಿಸಿದ ಮೇಲೆ ಆಕೆಯು ಅಶುದ್ಧಳಾಗಿ ತನ್ನ ಗಂಡನಿಗೆ ಅಪರಾಧ ಮಾಡಿದ್ದಾಗಿದ್ದರೆ ಶಪಿಸುವ ನೀರು ಆಕೆ ಯೊಳಗೆ ಸೇರಿ ಕಹಿಯಾಗುವದು; ಅವಳ ಹೊಟ್ಟೆ ಉಬ್ಬಿ ತೊಡೆ ಕ್ಷೀಣವಾಗುವದು. ಆಗ ಆ ಸ್ತ್ರೀ ತನ್ನ ಜನರ ಮಧ್ಯದಲ್ಲಿ ಶಾಪವಾಗಿರುವಳು.

ದ್ವಿತೀಯೋಪದೇಶಕಾಂಡ 27:15

ಕರ್ತನಿಗೆ ಅಸಹ್ಯ ವಾಗಿರುವ ವಿಗ್ರಹವನ್ನಾಗಲಿ ಎರಕ ಹೊಯಿದದ್ದ ನ್ನಾಗಲಿ ಮಾಡಿಕೊಂಡು ಶಿಲ್ಪಿಯ ಕೈಯಿಂದ ಮಾಡಿಸಿಗುಪ್ತವಾಗಿ ನಿಲ್ಲಿಸುವವನಿಗೆ ಶಾಪ. ಜನವೆಲ್ಲಾ ಉತ್ತರ ಕೊಟ್ಟು ಆಮೆನ್‌ ಎಂದು ಹೇಳಲಿ.

ಯೋಬ 31:21

ದ್ವಾರ ದಲ್ಲಿ ನನ್ನ ಸಹಾಯವನ್ನು ಕಂಡು ನಾನು ದಿಕ್ಕಿಲ್ಲದ ವನ ಮೇಲೆ ನನ್ನ ಕೈಚಾಚಿದ್ದರೆ,

ಯೋಬ 31:39

ಅದರ ಫಲವನ್ನು ನಾನು ಹಣಕೊಡದೆ ತಿಂದಿದ್ದರೆ, ಅದರ ಯಾಜಮಾನರ ಪ್ರಾಣವನ್ನು ತೆಗೆದುಬಿಟ್ಟಿದ್ದರೆ,ಗೋಧಿಗೆ ಬದಲಾಗಿ ಮುಳ್ಳೂ ಜವೆಗೋಧಿಗೆ ಬದಲಾಗಿ ಕಳೆಯೂ ಬೆಳೆಯಲಿ. ಯೋಬನ ನುಡಿಗಳು ಮುಗಿದವು.

ಕೀರ್ತನೆಗಳು 7:4

ಹೌದು, ನನ್ನೊಂದಿಗೆ ಸಮಾಧಾನದಿಂದ ಇದ್ದವನಿಗೆ ನಾನು ಕೇಡು ಮಾಡಿದ್ದರೆ, ಯಾವ ಕಾರಣವಿಲ್ಲದೆ ನನಗೆ ವೈರಿಯಾಗಿರುವವನನ್ನು ನಾನು ಶತ್ರುವಿಗೆ ತಪ್ಪಿಸಿಬಿಟ್ಟೆನಲ್ಲಾ,

ಕೀರ್ತನೆಗಳು 41:13

ಇಸ್ರಾಯೇಲಿನ ದೇವರಾದ ಕರ್ತನಿಗೆ ಯುಗಯುಗಕ್ಕೂ ಕೊಂಡಾಟ ವಾಗಲಿ. ಆಮೆನ್‌. ಆಮೆನ್‌.

ಕೀರ್ತನೆಗಳು 72:19

ಆತನ ಮಹಿಮೆಯುಳ್ಳ ಹೆಸರಿಗೆ ಎಂದೆಂದಿಗೂ ಸ್ತೋತ್ರವಾಗಲಿ; ಆತನ ಮಹಿ ಮೆಯು ಭೂಮಿಯನ್ನೆಲ್ಲಾ ತುಂಬಲಿ. ಆಮೆನ್‌. ಆಮೆನ್‌.ಇಷಯನ ಮಗನಾದ ದಾವೀದನ ಪ್ರಾರ್ಥನೆಗಳು ಮುಗಿದವೆ.

ಕೀರ್ತನೆಗಳು 89:52

ಕರ್ತನಿಗೆ ಯುಗಯುಗಕ್ಕೂ ಸ್ತುತಿಯಾಗಲಿ. ಆಮೆನ್‌, ಅಮೆನ್‌.

ಕೀರ್ತನೆಗಳು 109:18

ಅವನು ತನ್ನ ವಸ್ತ್ರದಂತೆ ಶಾಪವನ್ನು ಹೊದ್ದುಕೊಂಡನು; ಅದು ನೀರಿನಂತೆ ಅವನ ಅಂತರಂಗದಲ್ಲಿಯೂ ಎಣ್ಣೆಯಂತೆ ಅವನ ಎಲುಬುಗಳಲ್ಲಿಯೂ ಸೇರಲಿ.

ಸಾಮೇತಿಗಳು 1:31

ಅವರು ತಮ್ಮ ಸ್ವಂತ ನಡತೆಯ ಫಲವನ್ನು ಅನುಭವಿಸಿ ತಮ್ಮ ಸ್ವಂತ ಕುಯುಕ್ತಿಗಳಿಂದಲೇ ತುಂಬಿಕೊಳ್ಳುವರು.

ಯೆಹೆಜ್ಕೇಲ 3:3

ಆಗ ಆತನು ನನಗೆ ಹೇಳಿದ್ದೇನಂದರೆ--ಮನುಷ್ಯ ಪುತ್ರನೇ, ನಾನು ಕೊಡುವ ಈ ಸುರಳಿಯನ್ನು ತಿಂದು ಹೊಟ್ಟೆಯ ಕರುಳುಗಳನ್ನು ತುಂಬಿಸಿಕೋ ಅಂದನು. ಆಗ ನಾನು ಅದನ್ನು ತಿನ್ನಲು ಅದು ನನ್ನ ಬಾಯಲ್ಲಿ ಜೇನಿನ ಹಾಗೆ ಸಿಹಿಯಾಗಿತ್ತು.

ಯೋಹಾನ 3:3

ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ಒಬ್ಬನು ತಿರಿಗಿ ಹುಟ್ಟದಿದ್ದರೆ ಅವನು ದೇವರ ರಾಜ್ಯವನ್ನು ನೋಡಲಾರನು ಅಂದನು.

ಯೋಹಾನ 3:11

ನಾನು ನಿನಗೆ ನಿಜನಿಜ ವಾಗಿ ಹೇಳುತ್ತೇನೆ, ನಾವು ಅರಿತಿರುವದನ್ನು ಮಾತನಾಡುತ್ತೇವೆ ಮತ್ತು ನೋಡಿ ದ್ದಕ್ಕೆ ಸಾಕ್ಷೀಕರಿಸುತ್ತೇವೆ; ಆದರೆ ನೀವು ನಮ್ಮ ಸಾಕ್ಷಿ ಯನ್ನು ಅಂಗೀಕರಿಸುವದಿಲ್ಲ.

ಯೋಹಾನ 5:24

ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನ ವಾಕ್ಯವನ್ನು ಕೇಳಿ ನನ್ನನ್ನು ಕಳುಹಿಸಿ ದಾತನನ್ನು ನಂಬುವವನು ನಿತ್ಯಜೀವವನ್ನು ಹೊಂದಿ ದ್ದಾನೆ. ಅವನು ತೀರ್ಪಿಗೆ ಗುರಿಯಾಗುವದಿಲ್ಲ; ಆದರೆ ಮರಣದಿಂದ ಜೀವಕ್ಕೆ ದಾಟಿದ್ದಾನೆ.

ಯೋಹಾನ 6:53

ಆಗ ಯೇಸು ಅವರಿಗೆ--ನಿಮಗೆ ನಿಜ ನಿಜವಾಗಿ ಹೇಳುತ್ತೇನೆ, ನೀವು ಮನುಷ್ಯಕುಮಾರನ ಮಾಂಸವನ್ನು ತಿಂದು ಆತನ ರಕ್ತವನ್ನು ಕುಡಿಯದ ಹೊರತು ನಿಮ್ಮೊಳಗೆ ಜೀವವಿಲ್ಲ.

Interlinear

Choose Theme