ಅಂಕೆಗಳ ಪುಸ್ತಕ 35:27 · ಕನ್ನಡ ಬೈಬಲ್
ರಕ್ತದ ಸೇಡು ತೀರಿಸು ವವನು ಅವನನ್ನು ತನ್ನ ಆಶ್ರಯ ಪಟ್ಟಣದ ಮೇರೆಯ ಹೊರಗೆ ಕಂಡುಕೊಂಡು ಕೊಂದರೆ ಅವನಿಗೆ ರಕ್ತಾಪ ರಾಧವಿಲ್ಲ.
Cross references
ನಿರ್ಗಮಕಾಂಡ 22:2
ಒಬ್ಬ ಕಳ್ಳನು ಕನ್ನ ಕೊರೆಯುವಾಗ ಸಿಕ್ಕಿದರೆ ಅವನನ್ನು ಹೊಡೆದು ಸಾಯಿಸುವವನ ರಕ್ತಸುರಿಸಬಾರದು.
ದ್ವಿತೀಯೋಪದೇಶಕಾಂಡ 19:6
ರಕ್ತ ವಿಚಾರಕನು ತನ್ನ ಹೃದಯದಲ್ಲಿ ಕೋಪ ಉರಿಯುತ್ತಿರುವಾಗ ಕೊಲೆಪಾತಕನನ್ನು ಹಿಂದಟ್ಟಿ, ಮಾರ್ಗ ದೂರವಾಗಿರುವ ಕಾರಣ ಅವನನ್ನು ಹಿಡಿದು ಪೂರ್ವಕಾಲದಲ್ಲಿ ಹಗೆಮಾಡದೆ ಇದ್ದದರಿಂದ ಮರ ಣಕ್ಕೆ ಪಾತ್ರನಾಗದ ಇವನನ್ನು ಕೊಂದುಹಾಕದ ಹಾಗೆ ಅವನು ಆ ಪಟ್ಟಣಗಳಲ್ಲಿ ಒಂದಕ್ಕೆ ಓಡಿಹೋಗಿ ಬದುಕಬೇಕು.
ದ್ವಿತೀಯೋಪದೇಶಕಾಂಡ 19:10
ನಿನ್ನ ದೇವರಾದ ಕರ್ತನು ನಿನಗೆ ಸ್ವಾಸ್ತ್ಯವಾಗಿ ಕೊಡುವ ನಿನ್ನ ದೇಶದಲ್ಲಿ ಅಪರಾಧವಿಲ್ಲದ ರಕ್ತವು ಚೆಲ್ಲಲ್ಪಟ್ಟದ್ದರಿಂದ ರಕ್ತಾಪ ರಾಧವು ನಿನ್ನ ಮೇಲೆ ಬಾರದ ಹಾಗೆ ನೀನು ಈ ಮೂರು ಪಟ್ಟಣಗಳಿಗೆ ಇನ್ನೂ ಮೂರು ಪಟ್ಟಣಗಳನ್ನು ಕೂಡಿಸಬೇಕು.