ಸಭೆಯು ಕೊಂದವನನ್ನು ರಕ್ತದ ಸೇಡು ತೀರಿಸು ವವನ ಕೈಯಿಂದ ತಪ್ಪಿಸಿ ಅವನು ಓಡಿಹೋದ ಆಶ್ರಯದ ಪಟ್ಟಣಕ್ಕೆ ತಿರಿಗಿ ಸೇರಿಸಬೇಕು; ಪರಿಶುದ್ಧ ಎಣ್ಣೆಯಿಂದ ಅಭಿಷೇಕಿಸಲ್ಪಟ್ಟ ಪ್ರಧಾನಯಾಜಕನು ಸಾಯುವ ವರೆಗೂ ಅವನು ಅಲ್ಲೇ ವಾಸಮಾಡಲಿ.
Cross references
ಅಭಿಷೇಕಿಸುವ ಎಣ್ಣೆಯನ್ನು ತೆಗೆದು ಕೊಂಡು ಅವನ ತಲೆಯ ಮೇಲೆ ಹೊಯ್ದು ಅವನನ್ನು ಅಭಿಷೇಕಿಸಬೇಕು.
ಜನರು ಪಾಪಮಾಡುವ ಹಾಗೆ ಅಭಿಷಿಕ್ತನಾದ ಯಾಜಕನು ಪಾಪಮಾಡಿದರೆ ಅವನು ತನ್ನ ಪಾಪಕ್ಕಾಗಿ ದೋಷವಿಲ್ಲದ ಒಂದು ಎಳೇ ಹೋರಿಯನ್ನು ಪಾಪದ ಬಲಿಗಾಗಿ ಕರ್ತನಿಗೆ ತರಬೇಕು.
ಅವನು ಆರೋನನ ತಲೆಯ ಮೇಲೆ ಅಭಿಷೇಕ ತೈಲವನ್ನು ಸುರಿದು ಅವನನ್ನು ಪವಿತ್ರ ಮಾಡುವದಕ್ಕಾಗಿ ಅಭಿಷೇಕಿಸಿದನು.
ಅವನ ಸಹೋದರರೊಳಗೆ ಮಹಾಯಾಜಕ ನಾಗಿದ್ದು ಯಾವನ ತಲೆಯ ಮೇಲೆ ಅಭಿಷೇಕ ತೈಲವು ಸುರಿಯಲ್ಪಟ್ಟಿದೆಯೋ ಮತ್ತು ಯಾವನು ಉಡುಪು ಗಳನ್ನು ಧರಿಸಿಕೊಳ್ಳುವದಕ್ಕೆ ಪ್ರತಿಷ್ಠಿಸಲ್ಪಟ್ಟಿದ್ದಾನೋ ಅವನು ತನ್ನ ತಲೆಯನ್ನು ಮುಚ್ಚಿಕೊಳ್ಳಲೂಬಾರದು ಮತ್ತು ತನ್ನ ಬಟ್ಟೆಗಳನ್ನು ಹರಿದುಕೊಳ್ಳಲೂಬಾರದು;
ಅವನು ತನ್ನ ಆಶ್ರಯದ ಪಟ್ಟಣದ ಪ್ರಧಾನಯಾಜಕನು ಸಾಯುವ ವರೆಗೂ ವಾಸಮಾಡ ಬೇಕಾಗಿತ್ತು; ಪ್ರಧಾನ ಯಾಜಕನ ಮರಣದ ತರು ವಾಯ ಕೊಲೆಪಾತಕನು ತನ್ನ ಸ್ವಾಸ್ತ್ಯದ ದೇಶಕ್ಕೆ ಹೋಗಬಹುದು.
ಇದಲ್ಲದೆ ಅವನು ನ್ಯಾಯವಿಚಾರಣೆಗೋಸ್ಕರ ಸಭೆಯ ಮುಂದೆ ಬಂದು ನಿಲ್ಲುವವರೆಗೂ ಆಗಿನ ಪ್ರಧಾನ ಯಾಜಕನು ಮರಣ ಹೊಂದುವ ವರೆಗೂ ಆ ಪಟ್ಟಣದಲ್ಲೇ ವಾಸವಾಗಿರ ಬೇಕು. ತರುವಾಯ ಕೊಂದವನು ತಾನು ಬಿಟ್ಟು ಓಡಿಹೋದ ತನ್ನ ಪಟ್ಟಣಕ್ಕೂ ಮನೆಗೂ ತಿರುಗಿ ಬರಬಹುದು.
ಅವರು ನೀತಿವಂತರೆಂದು ನಿರ್ಣಯ ಹೊಂದುವದು ಆತನ ಉಚಿತಾರ್ಥವಾದ ಕೃಪೆ ಯಿಂದಲೇ. ಇದು ಕ್ರಿಸ್ತ ಯೇಸುವಿನಿಂದಾದ ವಿಮೋ ಚನೆಯ ಮೂಲಕವಾಗಿ ಆಗುವದು.
ಇದ್ದ ದ್ವೇಷವನ್ನು ತನ್ನ ಶಿಲುಬೆಯ ಮೇಲೆ ಕೊಂದು ಅದರಿಂದ ಉಭಯರನ್ನು ಒಂದೇ ದೇಹದಂತಾಗ ಮಾಡಿ ದೇವರೊಂದಿಗೆ ಸಮಾಧಾನ ಪಡಿಸಿದ್ದಾನೆ.
ಆಕಾಶಗಳನ್ನು ದಾಟಿಹೋದ ದೇವಕುಮಾರ ನಾದ ಯೇಸುವೆಂಬ ಶ್ರೇಷ್ಠ ಮಹಾಯಾಜಕನು ನಮಗಿರುವದರಿಂದ ನಾವು ಮಾಡಿರುವ ಅರಿಕೆಯನ್ನು ಬಿಗಿಯಾಗಿ ಹಿಡಿಯೋಣ.
ಆದಕಾರಣ ಆತನು ತನ್ನ ಮೂಲಕ ದೇವರ ಬಳಿಗೆ ಬರುವವರನ್ನು ಸಂಪೂರ್ಣವಾಗಿ ರಕ್ಷಿಸುವದಕ್ಕೆ ಶಕ್ತನಾಗಿದ್ದಾನೆ; ಅವರಿ ಗೋಸ್ಕರ ವಿಜ್ಞಾಪನೆಮಾಡುವದಕ್ಕೆ ಯಾವಾಗಲೂ ಬದುಕವವನಾಗಿದ್ದಾನೆ.
ಹೋತಗಳ ಮತ್ತು ಕರುಗಳ ರಕ್ತವನ್ನು ತೆಗೆದುಕೊಳ್ಳದೆ ತನ್ನ ಸ್ವಂತ ರಕ್ತವನ್ನೇ ತೆಗೆದುಕೊಂಡು ನಮಗೋಸ್ಕರ ನಿತ್ಯವಿಮೋಚನೆಯನ್ನು ಸಂಪಾದಿಸಿಕೊಂಡವನಾಗಿ ಒಂದೇ ಸಾರಿ ಪರಿಶುದ್ಧ ಸ್ಥಳದೊಳಗೆ ಪ್ರವೇಶಿಸಿದನು.
ಹೀಗಿರುವಲ್ಲಿ ಸಹೋದರರೇ, ಯೇಸುವಿನ ರಕ್ತದ ಮೂಲಕ ಅತಿಪರಿಶುದ್ಧ ಸ್ಥಳದಲ್ಲಿ ಪ್ರವೇಶಿಸುವದಕ್ಕೆ ನಮಗೆ ಧೈರ್ಯವುಂಟಾಯಿತು.