ನಾನು ದೇಶವನ್ನು ನೋಡುವದಕ್ಕೆ ಕಾದೇಶ್‌ಬರ್ನೇಯದಿಂದ ಅವರನ್ನು ಕಳುಹಿಸಿದಾಗ ನಿಮ್ಮ ಪಿತೃಗಳು ಹಾಗೆಯೇ ಮಾಡಿದರು.
Cross references
ನಾನು ಇಸ್ರಾಯೇಲ್ ಮಕ್ಕಳಿಗೆ ಕೊಡುವ ಕಾನಾನ್ ದೇಶವನ್ನು ಪರೀಕ್ಷಿಸುವ ಹಾಗೆ ನೀನು ಮನುಷ್ಯರನ್ನು ಕಳುಹಿಸು. ಅವರವರ ಪಿತೃಗಳ ಗೋತ್ರದ ಪ್ರಕಾರ ಅವರೊಳಗೆ ಅಧಿಕಾರಿಯಾಗಿರುವ ಪ್ರತಿಯೊಬ್ಬನನ್ನು ಕಳುಹಿಸು ಅಂದನು.
ಅವರು ಹೋಗಿ ಮೋಶೆ ಆರೋನರ ಬಳಿಗೂ ಇಸ್ರಾಯೇಲ್ ಮಕ್ಕಳ ಸಮಸ್ತ ಸಭೆಯ ಬಳಿಗೂ ಪಾರಾನ್ ಅರಣ್ಯದಲ್ಲಿರುವ ಕಾದೇಶಿಗೂ ಬಂದು ಅವರಿಗೂ ಸಮಸ್ತ ಸಭೆಗೂ ವಿಷಯವನ್ನು ವಿವರಿಸಿ ಆ ದೇಶದ ಫಲಗಳನ್ನು ಅವರಿಗೆ ತೋರಿಸಿದರು.
ಇಸ್ರಾಯೇಲ್ ಮಕ್ಕಳೆಲ್ಲರೂ ಮೋಶೆಗೂ ಆರೋನ ರಿಗೂ ವಿರೋಧವಾಗಿ ಗುಣುಗುಟ್ಟಿದರು. ಸಭೆಯಲ್ಲಾ ಅವರಿಗೆ--ನಾವು ಐಗುಪ್ತ ದೇಶದಲ್ಲಿ ಸತ್ತಿದ್ದರೆ ಇಲ್ಲವೆ ಈ ಅರಣ್ಯದಲ್ಲಿ ಸತ್ತರೆ ನಮಗೆ ಒಳ್ಳೇದಾಗಿತ್ತು.
ಆಗ ನೀವು ಹೋರೇಬಿನಿಂದ ಹೊರಟು ನಮ್ಮ ದೇವರಾದ ಕರ್ತನು ನಮಗೆ ಆಜ್ಞಾಪಿಸಿದ ಪ್ರಕಾರ ನೀವು ಅಮೋರಿಯರ ಬೆಟ್ಟದ ಮಾರ್ಗದಲ್ಲಿ ನೋಡಿದ ಆ ದೊಡ್ಡ ಭಯಂಕರವಾದ ಅರಣ್ಯವನ್ನೆಲ್ಲಾ ದಾಟಿ ಕಾದೇಶ್‌ಬರ್ನೇಯಕ್ಕೆ ಬಂದೆವು.
ಆಗ ನೀವೆಲ್ಲರೂ ನನ್ನ ಬಳಿಗೆ ಬಂದು--ನಮ್ಮ ಮುಂದಾಗಿ ಮನುಷ್ಯರನ್ನು ಕಳುಹಿಸೋಣ, ಅವರು ನಮಗೆ ಆ ದೇಶವನ್ನು ಪರಿಶೀಲಿಸಿ ನೋಡಿ ನಾವು ಮೇಲೆ ಹೋಗತಕ್ಕ ಮಾರ್ಗದ ವಿಷಯದಲ್ಲಿಯೂ ನಾವು ಪ್ರವೇಶಿಸುವ ಪಟ್ಟಣಗಳ ವಿಷಯದಲ್ಲಿಯೂ ನಮಗೆ ಸಮಾಚಾರವನ್ನು ತಿಳಿಸಲಿ ಅಂದಿರಿ.
ಆ ಮಾತು ನನಗೆ ಒಳ್ಳೇದೆಂದು ತೋಚಿತು; ನಾನು ನಿಮ್ಮಲ್ಲಿ ಕುಲಕ್ಕೆ ಒಬ್ಬನ ಪ್ರಕಾರ ಹನ್ನೆರಡು ಮಂದಿ ಯನ್ನು ತಕ್ಕೊಂಡೆನು.
ಯೂದನ ಮಕ್ಕಳು ಗಿಲ್ಗಾಲಿನಲ್ಲಿ ಯೆಹೋಶುವನ ಬಳಿಗೆ ಸೇರಿದರು. ಆಗ ಕೆನೆಜ್ಜೀಯನೂ ಯೆಫುನ್ನೆಯ ಮಗನೂ ಆದ ಕಾಲೇಬನು ಅವನಿಗೆ--ಕಾದೇಶ್ ಬರ್ನೇಯದಲ್ಲಿ ಕರ್ತನು ನನ್ನನ್ನೂ ನಿನ್ನನ್ನೂ ಕುರಿತು ದೇವರ ಮನುಷ್ಯನಾದ ಮೋಶೆಗೆ ಹೇಳಿದ ಮಾತನ್ನು ನೀನು ಬಲ್ಲೆ;