Home Bibles ಅಂಕೆಗಳ ಪುಸ್ತಕ 30:12 · ಕನ್ನಡ ಬೈಬಲ್
ಅಂಕೆಗಳ ಪುಸ್ತಕ 30:12 · ಕನ್ನಡ ಬೈಬಲ್

ಆದರೆ ಅವಳ ಗಂಡನು ಅವುಗಳನ್ನು ಕೇಳಿದ ದಿವಸದಲ್ಲೇ ಅವುಗಳನ್ನು ಪೂರ್ಣವಾಗಿ ನಿರರ್ಥಕಮಾಡಿದ ಪಕ್ಷ ದಲ್ಲಿ ಅವಳ ಪ್ರಮಾಣಗಳಿಗೋಸ್ಕರವೂ ಅವಳ ಪ್ರಾಣದ ಕಟ್ಟಳೆಗೋಸ್ಕರವೂ ಅವಳ ತುಟಿಗಳಿಂದ ಹೊರಟದ್ದು ಯಾವದಾಗಲಿ ನಿಲ್ಲದು, ಅವಳ ಗಂಡನು ಅವುಗಳನ್ನು ನಿರರ್ಥಕಮಾಡಿದ್ದಾನೆ; ಕರ್ತನು ಅವಳನ್ನು ಕ್ಷಮಿಸುವನು.

Cross references

ಅಂಕೆಗಳ ಪುಸ್ತಕ 15:25

ಯಾಜಕನು ಇಸ್ರಾಯೇಲ್‌ ಮಕ್ಕಳ ಸಮಸ್ತ ಸಭೆಗೋಸ್ಕರ ಅವರಿಗೆ ಕ್ಷಮೆಯಾಗುವ ಹಾಗೆ ಪ್ರಾಯಶ್ಚಿತ್ತಮಾಡಬೇಕು; ಅದು ತಿಳಿಯದೆ ಮಾಡಲಾಗಿತ್ತು. ಆದಾಗ್ಯೂ ಅವರು ಕರ್ತ ನಿಗೆ ದಹನ ಬಲಿಯಾಗಿ ತಮ್ಮ ಅರ್ಪಣೆಯನ್ನೂ ತಮ್ಮ ತಪ್ಪಿಗೋಸ್ಕರ ಪಾಪ ಬಲಿಯನ್ನೂ ಕರ್ತನ ಮುಂದೆ ತರಬೇಕು.

ಅಂಕೆಗಳ ಪುಸ್ತಕ 15:28

ತಿಳಿಯದೆ ಪಾಪಮಾಡಿ ದಂಥ ಆ ಪಾಪಮಾಡಿದವನಿಗೋಸ್ಕರ ಯಾಜಕನು ಕರ್ತನ ಮುಂದೆ ಪ್ರಾಯಶ್ಚಿತ್ತಮಾಡಬೇಕು. ಅದು ಪರಿಹಾರವಾಗುವ ಹಾಗೆ ಅದಕ್ಕೋಸ್ಕರ ಪ್ರಾಯಶ್ಚಿತ್ತ ಮಾಡಬೇಕು.

ಅಂಕೆಗಳ ಪುಸ್ತಕ 30:5

ಆದರೆ ಅವಳ ತಂದೆ ಕೇಳಿದ ದಿವಸದಲ್ಲಿ ಅವಳನ್ನು ತಡೆದರೆ ಅವಳ ಎಲ್ಲಾ ಪ್ರಮಾಣಗಳೂ ಅವಳು ತನ್ನ ಪ್ರಾಣದ ಮೇಲೆ ಇಟ್ಟುಕೊಂಡ ಎಲ್ಲಾ ಬಂಧನಗಳೂ ನಿಲ್ಲವು; ಅವಳ ತಂದೆ ಅವಳಿಗೆ ತಡೆದ ಕಾರಣ ಕರ್ತನು ಅವಳನ್ನು ಕ್ಷಮಿಸುವನು.

ಅಂಕೆಗಳ ಪುಸ್ತಕ 30:8

ಆದರೆ ಅವಳ ಗಂಡನು ಅದನ್ನು ಕೇಳಿದ ದಿವಸದಲ್ಲಿ ಅವಳನ್ನು ತಡೆದು ಅವಳ ಮೇಲೆ ಇರುವ ಅವಳ ಪ್ರಮಾಣವನ್ನೂ ಪ್ರಾಣದ ಮೇಲೆ ಅವಳು ಬಂಧಿಸಿ ಕೊಂಡ ಬಾಯಿಂದ ಬಂದ ಮಾತನ್ನೂ ನಿರರ್ಥಕ ಮಾಡಿದ ಪಕ್ಷದಲ್ಲಿ ಕರ್ತನು ಅವಳಿಗೆ ಕ್ಷಮಿಸುವನು.

1 ಸಮುವೇಲ 1:23

ಅದಕ್ಕೆ ಅವಳ ಗಂಡನಾದ ಎಲ್ಕಾನನು ಅವಳಿಗೆ--ನೀನು ನಿನ್ನ ಕಣ್ಣುಗಳಿಗೆ ಒಳ್ಳೇದಾಗಿ ತೋರುವ ಹಾಗೆ ಮಾಡು. ಅವನು ಮೊಲೆ ಬಿಡುವವರೆಗೂ ಕಾದುಕೊಂಡಿರು. ಕರ್ತನು ತನ್ನ ವಾಕ್ಯವನ್ನು ಸ್ಥಿರಮಾಡಲಿ ಅಂದನು. ಹಾಗೆಯೇ ಅವಳು ಉಳಿದು ತನ್ನ ಮಗುವು ಮೊಲೆ ಬಿಡುವವರೆಗೂ ಅವನಿಗೆ ಮೊಲೆ ಕೊಡುತ್ತಿದ್ದಳು.

1 ಕೊರಿಂಥದವರಿಗೆ 11:3

ಕಟ್ಟಳೆಗಳನ್ನು ಅನುಸರಿಸಿ ನಡೆಯುತ್ತೀರೆಂದು ನಿಮ್ಮನ್ನು ಹೊಗಳುತ್ತೇನೆ.

Interlinear

Choose Theme