ಇದಲ್ಲದೆ ಕರ್ತನು ಮೋಶೆಗೆ ಹೇಳಿದ್ದೇನಂದರೆ--ಇಸ್ರಾಯೇಲ್ ಮಕ್ಕಳಲ್ಲಿರುವ ಚೊಚ್ಚಲು ಗಂಡಸರನ್ನೆಲ್ಲಾ ಅವರು ಒಂದು ತಿಂಗಳೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರ ಲೆಕ್ಕವನ್ನು ತೆಗೆದುಕೋ.
Cross references
ಅವನು ಪಾಳೆಯದ ಬಾಗಿಲಲ್ಲಿ ನಿಂತುಕೊಂಡು--ಕರ್ತನ ಪಕ್ಷದವನು ಯಾರು ಅವನು ನನ್ನ ಬಳಿಗೆ ಬರಲಿ ಅಂದನು. ಆಗ ಲೇವಿಯ ಕುಮಾರರೆಲ್ಲರು ಅವನ ಬಳಿಗೆ ಕೂಡಿ ಬಂದರು.
ನಾನು ಇಗೋ, ನಾನೇ ಇಸ್ರಾ ಯೇಲ್ ಮಕ್ಕಳಲ್ಲಿ ಗರ್ಭ ತೆರೆಯುವಂಥ ಎಲ್ಲಾ ಚೊಚ್ಚಲಾದವುಗಳಿಗೆ ಬದಲಾಗಿ ಲೇವಿಯರನ್ನು ಇಸ್ರಾಯೇಲ್ ಮಕ್ಕಳೊಳಗಿಂದ ತೆಗೆದುಕೊಂಡಿ ದ್ದೇನೆ. ಆದದರಿಂದ ಲೇವಿಯರು ನನ್ನವರಾಗಿರುವರು.
ಲೇವಿಯ ಕುಮಾರರನ್ನು ಅವರ ತಂದೆಗಳ ಮನೆಯ ಪ್ರಕಾರ ವಾಗಿಯೂ ಅವರ ಕುಟುಂಬಗಳ ಪ್ರಕಾರವಾಗಿಯೂ ಎಣಿಸು. ಒಂದು ತಿಂಗಳು ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳ ಗಂಡಸರೆಲ್ಲರನ್ನೂ ನೀನು ಎಣಿಸು ಅಂದನು.
ಇಸ್ರಾಯೇಲ್ ಮಕ್ಕಳಲ್ಲಿ ಚೊಚ್ಚಲಾದ ವರೆಲ್ಲರಿಗೆ ಬದಲಾಗಿ ಲೇವಿಯರನ್ನೂ ಅವರ ದನ ಗಳಿಗೆ ಬದಲಾಗಿ ಲೇವಿಯರ ದನಗಳನ್ನೂ ತೆಗೆದುಕೋ, ಲೇವಿಯರು ನನ್ನವರಾಗಿರುವರು; ನಾನೇ ಕರ್ತನು.
ಕರ್ತನು ಜನಸಂಖ್ಯೆ ಬರೆಯುವಾಗ ಇವನು ಅಲ್ಲಿ ಹುಟ್ಟಿದ ನೆಂದು ಎಣಿಸುವನು ಸೆಲಾ.ಹಾಡುವವರೂ ವಾದ್ಯ ಗಳನ್ನು ಬಾರಿಸುವವರೂ ಇದ್ದಾರೆ; ನನ್ನ ಬುಗ್ಗೆಗಳೆಲ್ಲಾ ನಿನ್ನಲ್ಲಿಯೇ.
ಹೀಗಿರುವಲ್ಲಿ ಚೀಯೋನಿನಲ್ಲಿ ಬಿಡಲ್ಪಟ್ಟವರು, ಯೆರೂಸಲೇಮಿನಲ್ಲಿ ಉಳಿದವರು, ಹಾಗೂ ಯೆರೂ ಸಲೇಮಿನಲ್ಲಿ ವಾಸಿಸುವವರೊಳಗೆ ಬರೆದಿರುವ ಪ್ರತಿ ಯೊಬ್ಬ ಮನುಷ್ಯನು ಪರಿಶುದ್ಧನೆಂದು ಕರೆಯಲ್ಪಡು ವನು.
ಆದಾಗ್ಯೂ ದುರಾತ್ಮಗಳು ನಿಮಗೆ ಅಧೀನವಾದವೆಂದು ಸಂತೋಷಪಡಬೇಡಿರಿ; ಆದರೆ ನಿಮ್ಮ ಹೆಸರುಗಳು ಪರಲೋಕದಲ್ಲಿ ಬರೆಯಲ್ಪಟ್ಟಿರು ವದರಿಂದಲೇ ಸಂತೋಷಿಸಿರಿ ಅಂದನು.
ನಿಜ ಜೊತೆಗಾರನೇ, ನೀನು ಆ ಸ್ತ್ರೀಯರಿಗೆ ಸಹಾಯಕ ನಾಗಿರಬೇಕೆಂದು ನಿನ್ನನ್ನೂ ಕೇಳಿಕೊಳ್ಳುತ್ತೇನೆ. ಅವರು ಕ್ಲೇಮೆನ್ಸ್ ಮುಂತಾದ ನನ್ನ ಜೊತೆಕೆಲಸದವರ ಸಹಿತವಾಗಿ ನನ್ನ ಕೂಡ ಸುವಾರ್ತೆಗೋಸ್ಕರ ಪ್ರಯಾಸ ಪಟ್ಟವರು. ಅವರ ಹೆಸರುಗಳು ಜೀವಗ್ರಂಥದಲ್ಲಿ ಬರೆದವೆ.
ಆದರೂ ದೇವರ ಅಸ್ತಿವಾರವು ಖಂಡಿತವಾಗಿ ನಿಲ್ಲುತ್ತದೆ. ಅದರ ಮೇಲೆ--ತನ್ನವರು ಯಾರಾರೆಂಬದನ್ನು ಕರ್ತನು ತಿಳಿದಿದ್ದಾನೆಂತಲೂ ಮತ್ತು ಕ್ರಿಸ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರು ದುಷ್ಟತ್ವವನ್ನು ಬಿಟ್ಟುಬಿಡ ಬೇಕೆಂತಲೂ ಮುದ್ರೆ ಉಂಟು.
ಪರ ಲೋಕದಲ್ಲಿ ಹೆಸರು ಬರೆಸಿಕೊಂಡಿರುವ ಸಾರ್ವತ್ರಿಕ ಸಂಘಕ್ಕೂ ಚೊಚ್ಚಲ ಮಕ್ಕಳ ಸಭೆಗೂ ಎಲ್ಲರಿಗೆ ನ್ಯಾಯಾ ಧಿಪತಿಯಾಗಿರುವ ದೇವರ ಬಳಿಗೂ ಸಿದ್ದಿಗೆ ಬಂದಿರುವ ನೀತಿವಂತರ ಆತ್ಮಗಳ ಬಳಿಗೂ
ಜಯಹೊಂದುವ ಇವನೇ ಬಿಳೀ ವಸ್ತ್ರದಿಂದ ಹೊದಿಸಲ್ಪಡುವನು; ಜೀವದ ಪುಸ್ತಕದಿಂದ ನಾನು ಅವನ ಹೆಸರನ್ನು ಅಳಿಸಿ ಬಿಡುವದೇ ಇಲ್ಲ, ಆದರೆ ನನ್ನ ತಂದೆಯ ಮುಂದೆಯೂ ಆತನ ದೂತರ ಮುಂದೆಯೂ ಅವನ ಹೆಸರನ್ನು ಒಪ್ಪಿಕೊಳ್ಳುವೆನು.
ಸ್ತ್ರೀಯ ರೊಂದಿಗೆ ಮಲಿನರಾಗದವರು ಇವರೇ. ಯಾಕಂದರೆ ಇವರು ಕನ್ನಿಕೆಯರು. ಕುರಿಮರಿಯಾದಾತನು ಎಲ್ಲಿಗೆ ಹೋದರೂ ಆತನ ಹಿಂದೆ ಹೋಗುವವರು ಇವರೇ. ದೇವರಿಗೂ ಕುರಿಮರಿಯಾದಾತನಿಗೂ ಪ್ರಥಮ ಫಲ ವಾಗಿರುವ ಇವರು ಮನುಷ್ಯರೊಳಗಿಂದ ವಿಮೋಚಿಸ ಲ್ಪಟ್ಟವರು.