Home Bibles ಅಂಕೆಗಳ ಪುಸ್ತಕ 28:2 · ಕನ್ನಡ ಬೈಬಲ್
ಅಂಕೆಗಳ ಪುಸ್ತಕ 28:2 · ಕನ್ನಡ ಬೈಬಲ್

ನೀನು ಇಸ್ರಾಯೇಲ್‌ ಮಕ್ಕಳಿಗೆ ಆಜ್ಞಾಪಿಸಿ ಅವರಿಗೆ--ನನ್ನ ಸುವಾಸನೆಗೋಸ್ಕರ ಬೆಂಕಿ ಯಿಂದ ಮಾಡಿದ ಬಲಿಗಳಿಗೋಸ್ಕರವಾಗಿರುವ ನನ್ನ ರೊಟ್ಟಿಯ ಅರ್ಪಣೆಯನ್ನು ಅದರ ನೇಮಕವಾದ ಸಮಯದಲ್ಲಿ ನನಗೆ ಅರ್ಪಿಸುವದಕ್ಕೆ ನೀವು ನೋಡಿ ಕೊಳ್ಳಿರಿ.

Cross references

ಆದಿಕಾಂಡ 8:21

ಆಗ ಕರ್ತನಿಗೆ ಅದರ ಸುವಾಸನೆಯು ಗಮಗಮಿಸಲು ತನ್ನ ಹೃದಯದಲ್ಲಿ--ಇನ್ನು ಮೇಲೆ ನಾನು ಮನುಷ್ಯನಿಗೋಸ್ಕರ ಭೂಮಿಯನ್ನು ಶಪಿಸುವ ದಿಲ್ಲ; ಯಾಕಂದರೆ ಮನುಷ್ಯನ ಹೃದಯದ ಕಲ್ಪನೆಯು ಅವನ ಚಿಕ್ಕತನದಿಂದಲೇ ಕೆಟ್ಟದ್ದು. ನಾನು ಈಗ ಮಾಡಿದ ಪ್ರಕಾರ ಇನ್ನು ಮೇಲೆ ಜೀವಿಗಳನ್ನೆಲ್ಲಾ ಸಂಹರಿಸುವದಿಲ್ಲ.ಭೂಮಿಯು ಇರುವ ವರೆಗೆ ಬಿತ್ತುವ ಕಾಲವೂ ಕೊಯ್ಯುವ ಕಾಲವೂ ತಂಪೂ ಶೆಕೆಯೂ ಬೇಸಿಗೆಯೂ ಚಳಿಗಾಲವೂ ಹಗಲೂ ರಾತ್ರಿಯೂ ನಿಂತು ಹೋಗವು ಎಂದು ಅಂದು ಕೊಂಡನು.

ನಿರ್ಗಮಕಾಂಡ 23:15

ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಆಚರಿಸಬೇಕು; (ಅಬೀಬ್‌ ತಿಂಗಳಿನ ನೇಮಕವಾದ ಸಮಯದಲ್ಲಿ ಏಳು ದಿನಗಳ ವರೆಗೆ ನಾನು ನಿನಗೆ ಆಜ್ಞಾಪಿಸಿದ ಪ್ರಕಾರ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಯಾಕಂದರೆ ನೀನು ಆ ತಿಂಗಳಲ್ಲೇ ಐಗುಪ್ತ ದಿಂದ ಹೊರಗೆ ಬಂದಿದ್ದಿ. ಒಬ್ಬರೂ ಬರೀಗೈಯಿಂದ ನನ್ನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಬಾರದು.)

ನಿರ್ಗಮಕಾಂಡ 29:18

ಆ ಟಗರನ್ನು ಯಜ್ಞವೇದಿಯ ಮೇಲೆ ಸುಡಬೇಕು, ಅದು ಕರ್ತನಿಗೆ ದಹನಬಲಿಯಾಗಿದೆ. ಅದು ಕರ್ತನಿಗೆ ಸುವಾಸನೆಯ ದಹನಬಲಿಯಾಗಿದೆ.

ಲೇವ್ಯಕಾಂಡ 1:9

ಅದರ ಕರುಳುಗಳನ್ನೂ ಕಾಲುಗಳನ್ನೂ ಅವನು ನೀರಿನಲ್ಲಿ ತೊಳೆಯಬೇಕು; ಯಾಜಕನು ಎಲ್ಲವನ್ನೂ ಯಜ್ಞವೇದಿಯ ಮೇಲೆ ಬೆಂಕಿಯಿಂದ ಸಮರ್ಪಿಸುವ ದಹನಬಲಿಯಂತೆಯೂ ಕರ್ತನಿಗೆ ಸುವಾಸನೆಯಾಗು ವಂತೆಯೂ ಸುಡಬೇಕು.

ಲೇವ್ಯಕಾಂಡ 1:13

ಆದರೆ ಅವನು ಕರುಳುಗಳನ್ನೂ ಕಾಲುಗಳನ್ನೂ ನೀರಿನಿಂದ ತೊಳೆಯಬೇಕು; ಆಗ ಯಾಜಕನು ಅವೆಲ್ಲವುಗಳನ್ನು ತಂದು ಯಜ್ಞವೇದಿಯ ಮೇಲೆ ಸುಡಬೇಕು. ಬೆಂಕಿಯಿಂದ ಸಮರ್ಪಿಸುವ ದಹನಬಲಿಯ ಹಾಗೆಯೂ ಕರ್ತನಿಗೆ ಸುವಾಸನೆ ಯಾಗುವಂತೆಯೂ ಸುಡಬೇಕು.

ಲೇವ್ಯಕಾಂಡ 1:17

ಅವನು ಅದನ್ನು ರೆಕ್ಕೆಗಳೊಂದಿಗೆ ಹರಿಯಬೇಕು, ಆದರೆ ಬೇರೆಬೇರೆ ಯಾಗಿ ವಿಭಾಗಿಸಬಾರದು; ಆಗ ಯಾಜಕನು ಅದನ್ನು ಯಜ್ಞವೇದಿಯ ಬೆಂಕಿಮೇಲಿರುವ ಕಟ್ಟಿಗೆಯ ಮೇಲೆ ಸಮರ್ಪಿಸುವ ದಹನಬಲಿ ಹಾಗೆಯೂ ಕರ್ತನಿಗೆ ಸುವಾಸನೆಯಾಗುವಂತೆಯೂ ಸುಡಬೇಕು.

ಲೇವ್ಯಕಾಂಡ 3:11

ಯಾಜಕನು ಅದನ್ನು ಯಜ್ಞವೇದಿಯ ಮೇಲೆ ಸುಡಬೇಕು; ಅದು ಕರ್ತನಿಗೆ ಬೆಂಕಿಯಿಂದ ಮಾಡಿದ ಸಮರ್ಪಣೆಯ ಆಹಾರವಾಗಿರುತ್ತದೆ.

ಲೇವ್ಯಕಾಂಡ 21:6

ಅವರು ತಮ್ಮ ಕರ್ತನಿಗೆ ಅಗ್ನಿಯಿಂದ ಮಾಡಿದ ಸಮರ್ಪಣೆಗಳನ್ನು ಮತ್ತು ತಮ್ಮ ದೇವರ ರೊಟ್ಟಿಯನ್ನು ಅರ್ಪಿಸುವದರಿಂದ ಅವರು ತಮ್ಮ ದೇವರ ಹೆಸರನ್ನು ಅಪವಿತ್ರಪಡಿಸದೆ ತಮ್ಮ ದೇವರಿಗೆ ಪರಿಶುದ್ಧರಾಗಿರಬೇಕು; ಆದಕಾರಣ ಅವರು ಪರಿಶುದ್ಧ ರಾಗಿರುವರು.

ಲೇವ್ಯಕಾಂಡ 21:8

ಅವನು ನಿನ್ನ ದೇವರಿಗೆ ರೊಟ್ಟಿಯನ್ನು ಸಮರ್ಪಿಸುವ ಕಾರಣ ನೀನು ಅವನನ್ನು ಶುದ್ಧೀಕರಿಸ ಬೇಕು, ಅವನು ನನಗೆ ಪರಿಶುದ್ಧನಾಗಿರುವನು. ನಿನ್ನನ್ನು ಶುದ್ಧೀಕರಿಸುವ ಕರ್ತನಾದ ನಾನು ಪರಿಶುದ್ಧನು.

ಅಂಕೆಗಳ ಪುಸ್ತಕ 9:2

ಇಸ್ರಾಯೇಲ್‌ ಮಕ್ಕಳು ಪಸ್ಕವನ್ನು ನೇಮಿಸಿದ ಸಮಯ ದಲ್ಲಿ ಆಚರಿಸಬೇಕು.

ಅಂಕೆಗಳ ಪುಸ್ತಕ 9:7

ಆ ಮನುಷ್ಯರು ಅವನ ಸಂಗಡ ಮಾತನಾಡಿ--ನಾವು ಸತ್ತ ಮನುಷ್ಯನ ದೇಹವನ್ನು ಮುಟ್ಟಿದ್ದರಿಂದ ಅಶುದ್ಧರಾದೆವು; ಆದದರಿಂದ ನಾವು ಇಸ್ರಾಯೇಲ್‌ ಮಕ್ಕಳ ಮಧ್ಯದಲ್ಲಿ ಕರ್ತನ ಅರ್ಪಣೆ ಯನ್ನು ಅದರ ಸಮಯದಲ್ಲಿ ಅರ್ಪಿಸದ ಹಾಗೆ ನಮಗೆ ಯಾಕೆ ಅಡ್ಡಿಯಾಗಬೇಕು ಅಂದರು.

ಅಂಕೆಗಳ ಪುಸ್ತಕ 9:13

ಆದರೆ ಶುದ್ಧನಾದ ಮನುಷ್ಯನೂ ಪ್ರಯಾಣಮಾಡದವನೂ ಪಸ್ಕವನ್ನು ಆಚರಿಸುವದಕ್ಕೆ ತಪ್ಪಿದರೆ ಅವನನ್ನು ಅವನ ಜನರೊಳಗಿಂದ ತೆಗೆದುಹಾಕಬೇಕು; ಅವನು ಕರ್ತನ ಅರ್ಪಣೆಯನ್ನು ಅದರ ಸಮಯದಲ್ಲಿ ತಾರದಿದ್ದ ಕಾರಣ ಆ ಮನುಷ್ಯನು ತನ್ನ ಪಾಪವನ್ನು ಹೊತ್ತುಕೊಳ್ಳಬೇಕು.

ಅಂಕೆಗಳ ಪುಸ್ತಕ 15:3

ಪಶುಗಳಿಂದಲಾದರೂ ಕುರಿಗಳಿಂದಲಾ ದರೂ ಕರ್ತನಿಗೆ ಸುವಾಸನೆಯನ್ನುಂಟುಮಾಡುವ ದಹನಬಲಿಯಾಗಲಿ ಪ್ರಮಾಣವನ್ನು ಈಡೇರಿಸುವ ಬಲಿಯಾಗಲಿ ಉಚಿತವಾದ ಅರ್ಪಣೆಯಾಗಲಿ ನಿಮ್ಮ ಪವಿತ್ರ ಹಬ್ಬಗಳಲ್ಲಾಗಲಿ ಕರ್ತನಿಗೆ ಬೆಂಕಿಯಿಂದ ಅರ್ಪಿಸಲಿ ಅಂದನು.

ಅಂಕೆಗಳ ಪುಸ್ತಕ 15:7

ಪಾನದ ಅರ್ಪಣೆಯನ್ನು ಕರ್ತನಿಗೆ ಸುವಾಸನೆಗಾಗಿ ಹಿನ್ನಿನ ಮೂರನೇ ಪಾಲು ದ್ರಾಕ್ಷಾರಸವನ್ನು ಅರ್ಪಿಸ ಬೇಕು.

ಅಂಕೆಗಳ ಪುಸ್ತಕ 15:24

ಅದು ಸಭೆಗೆ ತಿಳಿಯದೆ ತಪ್ಪು ಆಗಿರುವ ಪಕ್ಷದಲ್ಲಿ ಸಭೆಯು ಕರ್ತನಿಗೆ ಸುವಾಸನೆಯಾದ ದಹನ ಬಲಿಗಾಗಿ ಒಂದು ಎಳೇ ಹೋರಿಯನ್ನೂ ಕ್ರಮದ ಪ್ರಕಾರ ಅದರ ಆಹಾರದ ಅರ್ಪಣೆಯನ್ನೂ ಪಾನದ ಅರ್ಪಣೆಯನ್ನೂ ಪಾಪ ಬಲಿಯಾಗಿ ಮೇಕೆಗಳಿಂದ ಒಂದು ಹೋತವನ್ನೂ ಅರ್ಪಿಸಬೇಕು.

ಅಂಕೆಗಳ ಪುಸ್ತಕ 29:39

ಇದಲ್ಲದೆ ನಿಮ್ಮ ಪ್ರಮಾಣಗಳನ್ನೂ ಉಚಿತವಾದ ಬಲಿಗಳನ್ನೂ ದಹನಬಲಿಗಳನ್ನೂ ಆಹಾರ ಪಾನದ ಅರ್ಪಣೆಗಳನ್ನೂ ಸಮಾಧಾನ ಬಲಿಗಳನ್ನೂ ನೀವು ನಿಮ್ಮ ಹಬ್ಬಗಳಲ್ಲಿ ಕರ್ತನಿಗೆ ಮಾಡತಕ್ಕ ಅರ್ಪಣೆಗಳು ಇವೇ ಎಂದುಕರ್ತನು ತನಗೆ ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ಮೋಶೆಯು ಇಸ್ರಾಯೇಲ್‌ ಮಕ್ಕಳಿಗೆ ಹೇಳಿದನು.

1 ದಿನವೃತ್ತಾಂತ 23:31

ಕಟ್ಟಳೆಯ ಪ್ರಕಾರವಾಗಿ ಸಬ್ಬತ್‌ ದಿವಸಗಳಲ್ಲಿಯೂ ಅಮವಾಸ್ಯೆ ಗಳಲ್ಲಿಯೂ ನೇಮಕವಾದ ಹಬ್ಬಗಳಲ್ಲಿಯೂ ಲೆಕ್ಕದ ಪ್ರಕಾರ ಎಲ್ಲಾ ದಹನಬಲಿಗಳನ್ನು ಅರ್ಪಿಸುವದಕ್ಕೂಕರ್ತನ ಮನೆಯ ಸೇವೆಯಲ್ಲಿ ಸಭೆಯ ಗುಡಾರದ ಕಾವಲಿಯನ್ನೂ ಪರಿಶುದ್ಧಸ್ಥಾನದ ಕಾವಲಿಯನ್ನೂ ತಮ್ಮ ಸಹೋದರರಾದ ಆರೋನನ ಕುಮಾರರ ಆಜ್ಞೆಯನ್ನೂ ಕೈಕೊಳ್ಳುವದಕ್ಕೆ ಅವರಿಗೆ ನೇಮಕವಾಗಿತ್ತು.

2 ದಿನವೃತ್ತಾಂತ 23:18

ಇದಲ್ಲದೆ ಯೆಹೋ ಯಾದನು ಕರ್ತನ ಆಲಯದ ಪರಿಚಾರಕರನ್ನು ನೇಮಿ ಸಿದನು. ಮೋಶೆಯ ನ್ಯಾಯಪ್ರಮಾಣದಲ್ಲಿ ಬರೆದಿ ರುವ ಹಾಗೆ ಸಂತೋಷದಿಂದಲೂ ಸಂಗೀತದಿಂದಲೂ ದಾವೀದನಿಂದ ನೇಮಿಸಲ್ಪಟ್ಟ ಹಾಗೆ ದಾವೀದನು ಕರ್ತನ ದಹನಬಲಿಗಳನ್ನು ಅರ್ಪಿಸುವದಕ್ಕೆ ಕರ್ತನ ಆಲಯ ದಲ್ಲಿ ವಿಭಾಗಿಸಿದ ಲೇವಿಯರಾದ ಯಾಜಕರಿಂದ ಅವರನ್ನು ನೇಮಿಸಿದನು.

2 ದಿನವೃತ್ತಾಂತ 31:3

ಅವನು ಕರ್ತನ ನ್ಯಾಯಪ್ರಮಾಣದಲ್ಲಿ ಬರೆದ ಪ್ರಕಾರ ಉದಯಕಾಲದ ಸಾಯಂಕಾಲದ ದಹನ ಬಲಿಗಳಿಗೋಸ್ಕರವೂ ಸಬ್ಬತ್ತುಗಳಲ್ಲಿಯೂ ಅಮವಾಸ್ಯೆ ಗಳಲ್ಲಿಯೂ ನೇಮಿಸಿದ ಹಬ್ಬಗಳಲ್ಲಿಯೂ ಬೇಕಾದ ದಹನಬಲಿಗಳಿಗೋಸ್ಕರವೂ ಅರಸನ ಸ್ಥಿತಿಯಿಂದ ಅವನ ಭಾಗವನ್ನು ನೇಮಿಸಿದನು.

ಎಜ್ರಾ 3:2

ಆಗ ಯೋಚಾದಾಕನ ಮಗನಾದ ಯೇಷೂವನೂ ಅವನ ಸಹೋದರರಾದ ಯಾಜಕರೂ ಶೆಯಲ್ತೀಯೇಲನ ಮಗನಾದ ಜೆರುಬ್ಬಾಬೆಲನೂ ಅವನ ಸಹೋದರರೂ ಎದ್ದು ದೇವರ ಮನುಷ್ಯನಾದ ಮೋಶೆಯ ನ್ಯಾಯ ಪ್ರಮಾಣದಲ್ಲಿ ಬರೆದಿರುವ ಹಾಗೆ ದಹನಬಲಿಗಳನ್ನು ಅರ್ಪಿಸುವದಕ್ಕೆ ಇಸ್ರಾಯೇಲ್‌ ದೇವರ ಬಲಿಪೀಠವನ್ನು ಕಟ್ಟಿಸಿದರು.

ನೆಹೆಮ್ಯ 10:34

ನ್ಯಾಯಪ್ರಮಾಣದಲ್ಲಿ ಬರೆದ ಹಾಗೆ, ನಮ್ಮ ದೇವರಾಗಿರುವ ಕರ್ತನ ಬಲಿಪೀಠದ ಮೇಲೆ ಸುಡು ವದಕ್ಕೆ ನೇಮಿಸಲ್ಪಟ್ಟ ಕಾಲಗಳಲ್ಲಿ ವರುಷ ವರುಷಕ್ಕೆ ನಮ್ಮ ಪಿತೃಗಳ ಮನೆಗಳ ಪ್ರಕಾರ ನಮ್ಮ ದೇವರ ಆಲಯದೊಳಗೆ ತಕ್ಕೊಂಡು ಬರಬೇಕಾದ ಸೌದೆಯ ಅರ್ಪಣೆಗೋಸ್ಕರ ಯಾಜಕರಿಗೂ ಲೇವಿಯರಿಗೂ ಜನರಿಗೂ ಚೀಟುಗಳನ್ನು ಹಾಕಿದೆವು.

ಕೀರ್ತನೆಗಳು 81:3

ಅಮಾವಾಸ್ಯೆಯಲ್ಲಿಯೂ ನೇಮಕವಾದ ಪರಿಶುದ್ಧ ಹಬ್ಬದ ದಿವಸದಲ್ಲಿಯೂ ತುತೂರಿಯನ್ನು ಊದಿರಿ.

ಯೆಹೆಜ್ಕೇಲ 16:19

ನಾನು ನಿನಗೆ ನನ್ನ ಆಹಾರವನ್ನೂ ನಿನಗೆ ನಯವಾದ ಹಿಟ್ಟನ್ನೂ ಎಣ್ಣೆ ಮತ್ತು ಜೇನುಗಳನ್ನೂ ಸುವಾಸನೆಗಾಗಿ ಕೊಟ್ಟೆ. ಆದರೆ ನೀನು ಅವುಗಳನ್ನು ಅವರ ಮುಂದೆ ಇಟ್ಟೆ ಎಂದು ದೇವರಾದ ಕರ್ತನು ಹೇಳುತ್ತಾನೆ.

ಯೆಹೆಜ್ಕೇಲ 20:41

ನಾನು ನಿಮ್ಮನ್ನು ಜನರಿಂದ ಹೊರತಂದು ನೀವು ಚದರಿರುವ ದೇಶಗಳೊಳಗಿಂದ ನಿಮ್ಮನ್ನು ಕೂಡಿಸುವಾಗ ನಿಮ್ಮ ಸುವಾಸನೆಯ ಸಂಗಡ ನಾನು ನಿಮ್ಮನ್ನು ಅಂಗೀಕರಿಸುವೆನು, ನಾನು ಅನ್ಯ ಜನಾಂಗಗಳ ಮುಂದೆ ನಿಮ್ಮಲ್ಲಿ ಪರಿಶುದ್ಧವೆನಿಸಿಕೊಳ್ಳು ವೆನು.

ಯೆಹೆಜ್ಕೇಲ 45:17

ಹಬ್ಬಗಳಲ್ಲಿಯೂ ಅಮಾ ವಾಸ್ಯೆಗಳಲ್ಲಿಯೂ ಸಬ್ಬತ್ತುಗಳಲ್ಲಿಯೂ ಇಸ್ರಾಯೇಲಿನ ಮನೆತನದವರ ಎಲ್ಲಾ ಸಭೆಗಳಲ್ಲಿಯೂ ಹೋಮ ಗಳನ್ನು ಅರ್ಪಣೆಗಳನ್ನು ನೈವೇದ್ಯಗಳನ್ನು ಕೊಡುವದು ಪ್ರಭುವಿನ ಕೆಲಸವಾಗಿರುವದು; ಅವನೇ ಇಸ್ರಾಯೇ ಲಿನ ಮನೆತನದವರಿಗಾಗಿ ಸಮಾಧಾನಕ್ಕಾಗಿ ಪಾಪಬಲಿ ಯನ್ನೂ ಅರ್ಪಣೆಯನ್ನೂ ದಹನಬಲಿಯನ್ನೂ ಸಮಾಧಾನ ಯಜ್ಞವನ್ನೂ ಸಿದ್ಧಮಾಡಬೇಕು.

ಮಲಾಕಿ 1:7

ನನ್ನ ಬಲಿಪೀಠದ ಮೇಲೆ ಅಪವಿತ್ರವಾದ ರೊಟ್ಟಿಯನ್ನು ಅರ್ಪಿಸಿ--ಯಾವದರಲ್ಲಿ ನಿನ್ನನ್ನು ನಾವು ಅಪವಿತ್ರ ಮಾಡಿದ್ದೇವೆಂದು ಹೇಳುತ್ತೀರಿ. ಕರ್ತನ ಮೇಜು ಹೀನವಾದದ್ದೆಂದು ನೀವು ಹೇಳುವದರಿಂದಲೇ.

ಮಲಾಕಿ 1:12

ಆದರೆ ನೀವು--ಕರ್ತನ ಮೇಜು ಅಶುದ್ಧವಾ ದದ್ದೆಂದೂ ಅದರ ಫಲವೂ ಅದರ ಊಟವೂ ಹೀನ ವಾದದ್ದೆಂದೂ ಹೇಳಿ ಅದನ್ನು ಅಪವಿತ್ರಮಾಡಿದ್ದೀರಿ.

2 ಕೊರಿಂಥದವರಿಗೆ 2:15

ರಕ್ಷಣೆ ಹೊಂದಿದವರಲ್ಲಿಯೂ ನಾಶವಾಗುವವರಲ್ಲಿಯೂ ನಾವು ದೇವರಿಗಾಗಿ ಕ್ರಿಸ್ತನ ಪರಿಮಳವಾಗಿದ್ದೇವೆ.

ಎಫೆಸದವರಿಗೆ 5:2

ಕ್ರಿಸ್ತನು ನಮ್ಮನ್ನು ಪ್ರೀತಿಸಿ ನಮಗೋಸ್ಕರ ತನ್ನನ್ನೇ ದೇವರಿಗೆ ಸುಗಂಧವಾಸನೆಯಾದ ಕಾಣಿಕೆ ಯಾಗಿಯೂ ಯಜ್ಞವಾಗಿಯೂ ಸಮರ್ಪಿಸಿಕೊಂಡ ಪ್ರಕಾರ ನೀವೂ ಪ್ರೀತಿಯಲ್ಲಿ ನಡೆದುಕೊಳ್ಳಿರಿ.

ಫಿಲಿಪ್ಪಿಯವರಿಗೆ 4:18

ಎಪಫ್ರೊದೀತನ ಕೈಯಿಂದ ನೀವು ಕೊಟ್ಟು ಕಳುಹಿಸಿದ್ದು ನನಗೆ ತಲುಪಲಾಗಿ ನಾನು ತುಂಬಿತುಳುಕಿದವನಾಗಿದ್ದೇನೆ. ಅದು ದೇವರಿಗೆ ಮೆಚ್ಚಿಕೆ ಯಾದದ್ದು; ಸುಗಂಧವಾಸನೆಯೇ, ಇಷ್ಟಯಜ್ಞವೇ

Interlinear

Choose Theme