Home Bibles ಅಂಕೆಗಳ ಪುಸ್ತಕ 26:29 · ಕನ್ನಡ ಬೈಬಲ್
ಅಂಕೆಗಳ ಪುಸ್ತಕ 26:29 · ಕನ್ನಡ ಬೈಬಲ್

ಮಾಕೀರನು ಗಿಲ್ಯಾದನನ್ನು ಪಡೆದನು; ಗಿಲ್ಯಾದ ನಿಂದ ಗಿಲ್ಯಾದ್ಯರ ಕುಟುಂಬ;

Cross references

ಆದಿಕಾಂಡ 48:14

ಆಗ ಇಸ್ರಾಯೇಲನು ತನ್ನ ಬಲಗೈಯನ್ನು ಚಾಚಿ ಚಿಕ್ಕವನಾದ ಎಫ್ರಾಯಾಮನ ತಲೆಯ ಮೇಲೆಯೂ ತನ್ನ ಎಡಗೈಯನ್ನು ಮನಸ್ಸೆಯ ತಲೆಯ ಮೇಲೆಯೂ ಇಟ್ಟನು. ಮನಸ್ಸೆಯು ಹಿರಿಯವನಾಗಿದ್ದರೂ ಬೇಕೆಂದೇ ಅವನು ತನ್ನ ಕೈಗಳನ್ನು ಹಾಗೆ ಇಟ್ಟನು.

ಅಂಕೆಗಳ ಪುಸ್ತಕ 32:39

ಮನಸ್ಸೆಯ ಮಗನಾದ ಮಾಕೀರನ ಮಕ್ಕಳು ಗಿಲ್ಯಾದ್‌ ದೇಶಕ್ಕೆ ಹೋಗಿ ಅದನ್ನು ತಕ್ಕೊಂಡು, ಅದರಲ್ಲಿದ್ದ ಅಮೋರಿಯರನ್ನು ಹೊರಡಿಸಿದರು.

ಅಂಕೆಗಳ ಪುಸ್ತಕ 36:1

ಆಗ ಯೋಸೇಫನ ಕುಮಾರರ ಕುಟುಂಬ ದವರಾದ ಮನಸ್ಸೆಯ ಮಗನಾಗಿರುವ ಮಾಕೀರನ ಮಗನಾದ ಗಿಲ್ಯಾದನ ಮಕ್ಕಳ ಕುಟುಂಬ ಗಳ ಮುಖ್ಯ ಯಜಮಾನರು ಸವಿಾಪಕ್ಕೆ ಬಂದು ಮೋಶೆಯ ಮುಂದೆಯೂ

ದ್ವಿತೀಯೋಪದೇಶಕಾಂಡ 3:15

ಗಿಲ್ಯಾದನ್ನು ಮಾಕೀರನಿಗೆ ಕೊಟ್ಟೆನು.

ಯೆಹೋಶುವ 17:1

ಇದಲ್ಲದೆ ಮನಸ್ಸೆಯ ಗೋತ್ರಕ್ಕೂ ಭಾಗಸಿಕ್ಕಿತು. ಯಾಕಂದರೆ ಅವನು ಯೋಸೇಫ ನಿಗೆ ಚೊಚ್ಚಲ ಮಗನಾಗಿದ್ದನು. ಮನಸ್ಸೆಯ ಹಿರಿಯ ಮಗನಾದ ಗಿಲ್ಯಾದನ ತಂದೆಯಾದ ಮಾಕೀರನು ಶೂರನಾದದರಿಂದ ಗಿಲ್ಯಾದು ಬಾಷಾನು ಅವನ ಪಾಲಿಗೆ ಬಂದವು;

ನ್ಯಾಯಾಧಿಪತಿಗಳು 5:14

ಅಮಾಲೇಕ್ಯರಿಗೆ ವಿರೋಧ ಮಾಡಿದವರ ಬೇರು ಎಫ್ರಾಯಾಮಿನಿಂದ ಉಂಟಾ ಯಿತು. ನಿನ್ನ ಹಿಂದೆ ನಿನ್ನ ಜನರಲ್ಲಿ ಬೆನ್ಯಾವಿಾನನೂ; ಮಾಕೀರನಲ್ಲಿಂದ ಅಧಿಪತಿಗಳೂ ಜೆಬುಲೂನನಲ್ಲಿಂದ ಬರಹಗಾರನ ಲೇಖನಿಯನ್ನು ಉಪಯೋಗಿಸುವ ವರೂ ಬಂದರು.

1 ದಿನವೃತ್ತಾಂತ 2:21

ತರುವಾಯ ಹೆಚ್ರೋನನು ಗಿಲ್ಯಾದನ ತಂದೆಯಾದ ಮಾಕೀರನ ಮಗಳ ಬಳಿಗೆ ಹೋದನು; ಅವನು ಅರವತ್ತು ವರುಷದವನಾಗಿರು ವಾಗ ಅವಳನ್ನು ಮದುವೆಯಾದನು. ಅವಳು ಅವನಿಗೆ ಸೆಗೂಬನನ್ನು ಹೆತ್ತಳು.

1 ದಿನವೃತ್ತಾಂತ 7:14

ಮನಸ್ಸೆಯ ಕುಮಾರರು--ಅವನ ಹೆಂಡತಿಯು ಹೆತ್ತ ಅಷ್ರೀಯೇಲನು; ಅರಾಮ್ಯಳಾದ ಉಪಪತ್ನಿಯು ಗಿಲ್ಯಾದನಿಗೆ ತಂದೆಯಾದ ಮಾಕೀರನನ್ನು ಹೆತ್ತಳು.

Interlinear

Choose Theme