Home Bibles ಅಂಕೆಗಳ ಪುಸ್ತಕ 25:8 · ಕನ್ನಡ ಬೈಬಲ್
ಅಂಕೆಗಳ ಪುಸ್ತಕ 25:8 · ಕನ್ನಡ ಬೈಬಲ್

ಇಸ್ರಾಯೇಲಿನವನಾದ ಆ ಮನುಷ್ಯನ ಹಿಂದೆ ಡೇರೆಯೊಳಗೆ ಪ್ರವೇಶಿಸಿ ಇಸ್ರಾಯೇಲಿನವನನ್ನೂ ಆ ಸ್ತ್ರೀಯನ್ನೂ ಇಬ್ಬರ ಹೊಟ್ಟೆಯನ್ನು ತಿವಿದನು; ಹೀಗೆ ಇಸ್ರಾಯೇಲ್‌ ಮಕ್ಕಳಿಗೆ ಉಂಟಾಗಿದ್ದ ವ್ಯಾಧಿಯು ನಿಂತುಹೋಯಿತು.

Cross references

ಅಂಕೆಗಳ ಪುಸ್ತಕ 16:46

ಮೋಶೆಯು ಆರೋನನಿಗೆ--ನೀನು ಧೂಪದ ಪಾತ್ರೆಯನ್ನು ತೆಗೆದುಕೊಂಡು ಅದರ ಮೇಲೆ ಬಲಿಪೀಠದ ಬೆಂಕಿಯನ್ನು ಇಟ್ಟು ಧೂಪ ಹಾಕಿ ಶೀಘ್ರವಾಗಿ ಸಭೆಯೊಳಗೆ ಹೋಗಿ ಅವರಿ ಗೋಸ್ಕರ ಪ್ರಾಯಶ್ಚಿತ್ತಮಾಡು. ಯಾಕಂದರೆ ಕರ್ತನ ಸಮ್ಮುಖದಿಂದ ಕೋಪವು ಹೊರಟು ಅವರೊಳಗೆ ವ್ಯಾಧಿಯು ಪ್ರಾರಂಭವಾಯಿತು ಎಂದು ಹೇಳಿದನು.

ಅಂಕೆಗಳ ಪುಸ್ತಕ 17:13

ಕರ್ತನ ಗುಡಾರದ ಸವಿಾಪಕ್ಕೆ ಬರುವವರೆಲ್ಲರೂ ಸಾಯುವರು. ಸಾಯುವದರಿಂದ ನಾವು ನಾಶವಾಗಬೇಕೋ ಎಂದು ಹೇಳಿದರು.

ಅಂಕೆಗಳ ಪುಸ್ತಕ 25:5

ಮೋಶೆ ಇಸ್ರಾಯೇ ಲಿನ ನ್ಯಾಯಾಧಿಪತಿಗಳಿಗೆ--ನಿಮ್ಮಲ್ಲಿ ಒಬ್ಬೊಬ್ಬನು ಬಾಳ್ಪೆಯೋರಿಗೆ ಕೂಡಿಕೊಂಡಿರುವ ತನ್ನ ಮನುಷ್ಯರನ್ನು ಕೊಲ್ಲಬೇಕು ಅಂದನು.

ಅಂಕೆಗಳ ಪುಸ್ತಕ 25:11

ಆರೋನನ ಮೊಮ್ಮಗನೂ ಎಲ್ಲಾಜಾರನ ಮಗನಾದ ಯಾಜಕ ನಾಗಿರುವ ಫೀನೆಹಾಸನು ಇಸ್ರಾಯೇಲಿನ ಮಕ್ಕಳಲ್ಲಿ ನನಗೋಸ್ಕರ ಆಸಕ್ತನಾಗಿದ್ದು ನಾನು ನನ್ನ ರೋಷದಿಂದ ಅವರನ್ನು ನಾಶಮಾಡದ ಹಾಗೆ ನನ್ನ ಕೋಪವನ್ನು ಅವರ ಮೇಲಿನಿಂದ ತಿರುಗಿಸಿ ಬಿಟ್ಟಿದ್ದಾನೆ.

ಯೆಹೋಶುವ 7:26

ಅವರ ಮೇಲೆ ಕಲ್ಲು ಕುಪ್ಪೆ ಕೂಡಿಸಿದರು. ಅದು ಈ ದಿನದ ವರೆಗೂ ಇದೆ. ಆಗ ಕರ್ತನು ತನ್ನ ಕೋಪದ ಉರಿಯನ್ನು ಬಿಟ್ಟು ತಿರುಗಿದನು; ಆದದರಿಂದ ಆ ಸ್ಥಳವು ಈ ವರೆಗೂ ಆಕೋರಿನ ತಗ್ಗೆಂದು ಕರೆಯಲ್ಪಡುವದು.

2 ಸಮುವೇಲ 21:14

ಸೌಲನ ಮತ್ತು ಅವನ ಮಗನಾದ ಯೋನಾತಾನನ ಎಲುಬುಗಳನ್ನು ಬೆನ್ಯಾವಿಾನನ ದೇಶದ ಚೇಲಾದಲ್ಲಿರುವ ಅವನ ತಂದೆಯಾದ ಕೀಷನ ಸಮಾಧಿಯಲ್ಲಿ ಹೂಣಿಟ್ಟರು. ಅವರು ಅರಸನು ಆಜ್ಞಾ ಪಿಸಿದ್ದನ್ನೆಲ್ಲಾ ತೀರಿಸಿದ ತರುವಾಯ ದೇಶಕ್ಕೋಸ್ಕರ ದೇವರಿಗೆ ವಿಜ್ಞಾಪನೆ ಮಾಡಿದರು.

2 ಸಮುವೇಲ 24:25

ಆಗ ದಾವೀದನು ಕರ್ತನಿಗೆ ಅಲ್ಲಿ ಬಲಿಪೀಠವನ್ನು ಕಟ್ಟಿಸಿ ದಹನಬಲಿಗಳನ್ನೂ ಸಮಾ ಧಾನದಬಲಿಗಳನ್ನೂ ಅರ್ಪಿಸಿದನು. ಹೀಗೆ ಕರ್ತನು ದೇಶಕ್ಕೋಸ್ಕರ ಬಿನ್ನಹವನ್ನು ಕೇಳಿದ್ದರಿಂದ ಇಸ್ರಾ ಯೇಲಿನ ಕಡೆಯಿಂದ ಆ ಬಾಧೆಯು ನಿಂತಿತು.

1 ದಿನವೃತ್ತಾಂತ 21:22

ಆಗ ದಾವೀದನು ಒರ್ನಾನನಿಗೆ--ಈ ಬಾಧೆಯು ಜನರನ್ನು ಬಿಟ್ಟು ಹೋಗುವ ಹಾಗೆ ನಾನು ಕರ್ತನಿಗೆ ಬಲಿ ಪೀಠವನ್ನು ಕಟ್ಟಿಸುವದಕ್ಕೆ ಈ ಕಣದ ಸ್ಥಳವನ್ನು ಪೂರ್ಣ ಕ್ರಯಕ್ಕೆ ನನಗೆ ಕೊಡು ಅಂದನು.

ಕೀರ್ತನೆಗಳು 106:29

ತಮ್ಮ ಕ್ರಿಯೆಗಳಿಂದ ಆತನಿಗೆ ಕೋಪವನ್ನು ಎಬ್ಬಿಸಿದರು; ಆದದರಿಂದ ವ್ಯಾಧಿಯು ಅವರಲ್ಲಿ ಹೊಕ್ಕಿತು.

Interlinear

Choose Theme