Home Bibles ಅಂಕೆಗಳ ಪುಸ್ತಕ 23:27 · ಕನ್ನಡ ಬೈಬಲ್
ಅಂಕೆಗಳ ಪುಸ್ತಕ 23:27 · ಕನ್ನಡ ಬೈಬಲ್

ಆಗ ಬಾಲಾಕನು ಬಿಳಾಮನಿಗೆ--ದಯಮಾಡಿ ಬಾ, ನಾನು ನಿನ್ನನ್ನು ಬೇರೆ ಒಂದು ಸ್ಥಳಕ್ಕೆ ಕರಕೊಂಡು ಹೋಗುವೆನು. ನೀನು ಅಲ್ಲಿಂದ ನನಗೋಸ್ಕರ ಅವ ರನ್ನು ಶಪಿಸುವದು ಒಂದು ವೇಳೆ ದೇವರಿಗೆ ಯುಕ್ತವಾಗಿ ದ್ದೀತು ಅಂದನು.

Cross references

ಅಂಕೆಗಳ ಪುಸ್ತಕ 22:6

ಈಗ ನೀನು ದಯಮಾಡಿ ಬಂದು ಈ ಜನವನ್ನು ನನಗಾಗಿ ಶಪಿಸು; ಅವರು ನನಗಿಂತ ಬಲಿಷ್ಠರಾಗಿದ್ದಾರೆ. ಒಂದು ವೇಳೆ ನಾನು ಗೆದ್ದೇನು, ನಾವು ಅವರನ್ನು ಹೊಡೆದೇವು; ನಾನು ಅವರನ್ನು ದೇಶದೊಳಗಿಂದ ಹೊರಡಿಸೇನು; ನೀನು ಯಾವನನ್ನು ಆಶೀರ್ವದಿಸು ತ್ತೀಯೋ ಅವನು ಆಶೀರ್ವದಿಸಲ್ಪಟ್ಟವನೇ; ನೀನು ಯಾವನನ್ನು ಶಪಿಸುತ್ತೀಯೋ ಅವನು ಶಪಿಸಲ್ಪಟ್ಟವನೇ ಎಂದು ನಾನು ಬಲ್ಲೆನು.

ಅಂಕೆಗಳ ಪುಸ್ತಕ 23:13

ಬಾಲಾಕನು ಅವನಿಗೆ--ನೀನು ಅವರನ್ನು ನೋಡತಕ್ಕ ಮತ್ತೊಂದು ಸ್ಥಳಕ್ಕೆ ನನ್ನೊಂದಿಗೆ ಬಾ; ಅವರನ್ನೆಲ್ಲಾ ನೋಡದೆ ಅವರ ಅಂತ್ಯ ಭಾಗವನ್ನು ಮಾತ್ರ ನೋಡುವಿ;

ಅಂಕೆಗಳ ಪುಸ್ತಕ 23:19

ಸುಳ್ಳಾಡುವ ಹಾಗೆ ದೇವರು ಮನುಷ್ಯನಲ್ಲ, ಪಶ್ಚಾತ್ತಾಪಪಡುವ ಹಾಗೆ ನರಪುತ್ರನಲ್ಲ; ಆತನು ನುಡಿದದ್ದನ್ನು ಮಾಡದಿರುವನೇ? ಮಾತನಾಡಿದ್ದನ್ನು ಆತನು ಸ್ಥಾಪಿಸನೇ?

ಯೋಬ 23:13

ಆದರೆ ಆತನು ಒಂದೇ ಮನಸ್ಸುಳ್ಳವನು, ಆತ ನನ್ನು ತಿರುಗಿಸುವವನ್ಯಾರು? ತನ್ನ ಪ್ರಾಣವು ಅಪೇ ಕ್ಷಿಸುವ ಪ್ರಕಾರವೇ ಮಾಡುತ್ತಾನೆ.

ಸಾಮೇತಿಗಳು 19:21

ಮನುಷ್ಯನ ಹೃದಯದಲ್ಲಿ ಅನೇಕ ಕಲ್ಪನೆಗಳಿವೆ; ಆದರೂ ಕರ್ತನ ಸಂಕಲ್ಪವೇ ಈಡೇರು ವದು.

ಸಾಮೇತಿಗಳು 21:30

ಕರ್ತನಿಗೆ ವಿರೋಧವಾಗಿ ಯಾವ ಜ್ಞಾನವೂ ವಿವೇಕವೂ ಆಲೋಚನೆಯೂ ಇಲ್ಲ.ಯುದ್ಧದ ದಿನಕ್ಕಾಗಿ ಕುದುರೆಯು ಸಿದ್ಧವಾಗಿರುತ್ತದೆ; ಭದ್ರತೆಯು ಕರ್ತನಿಂದಲೇ.

ಯೆಶಾಯ 14:27

ಸೈನ್ಯಗಳ ಕರ್ತನುಉದ್ದೇಶಿಸಿ ದ್ದಾನೆ; ಅದನ್ನು ಯಾರು ವ್ಯರ್ಥಪಡಿಸುವರು. ಆತನ ಕೈಚಾಚಿದೆ, ಹಿಂದಕ್ಕೆ ತಳ್ಳುವವರು ಯಾರು ಎಂಬದೇ.

ಯೆಶಾಯ 46:10

ಆರಂಭದಲ್ಲಿಯೇ ಅಂತ್ಯವನ್ನೂ ಪೂರ್ವಕಾಲದಿಂದ ಇನ್ನೂ ನಡೆಯದ ಸಂಗತಿಗಳನ್ನೂ ಪ್ರಕಟಿಸಿದ್ದೇನೆ; ನನ್ನ ಆಲೋಚನೆಯು ನಿಲ್ಲುವ ದೆಂದೂ ನಾನು ಮೆಚ್ಚಿದ್ದನ್ನೆಲ್ಲಾ ಮಾಡುವೆನೆಂದೂ ಅರುಹಿದ್ದೇನೆ.

ಮಲಾಕಿ 3:6

ನಾನು ಕರ್ತನು, ನಾನು ಬದಲಾಗುವದಿಲ್ಲ; ಆದದರಿಂದ ಓ ಯಾಕೋಬಿನ ಕುಮಾರರೇ, ನೀವು ನಾಶವಾಗಲಿಲ್ಲ.

ರೋಮಾಪುರದವರಿಗೆ 11:29

ದೇವರ ದಾನಗಳೂ ಕರೆಯುವಿಕೆಯೂ ಪಶ್ಚಾತ್ತಾಪವಿಲ್ಲದವು ಗಳಾಗಿವೆ.

Interlinear

Choose Theme