ಇಸ್ರಾಯೇಲ್ ಮಕ್ಕಳು ಹೊರಟು ಯೊರ್ದನಿಗೆ ಈಚೆಯಲ್ಲಿರುವ ಮೋವಾ ಬಿನ ಬೈಲುಗಳಲ್ಲಿ ಯೆರಿಕೋ ಪಟ್ಟಣಕ್ಕೆದುರಾಗಿ ಇಳುಕೊಂಡರು.
Cross references
ಬಾಮೋತಿನಿಂದ ಮೋವಾಬ್ ದೇಶದಲ್ಲಿ ರುವ ಕಣಿವೆಯಿಂದ ಪಿಸ್ಗಾವೆಂಬ ಬೆಟ್ಟದ ತುದಿಗೆ ಬಂದರು; ಇದು ಯೇಷೀಮೋನಿನ ಕಡೆಗೆ ಕಾಣಿಸುತ್ತದೆ.
ಆಗ ಮೋಶೆಯೂ ಯಾಜಕನಾದ ಎಲ್ಲಾಜಾರನೂ ಮೋವಾಬಿನ ಬೈಲುಗಳಲ್ಲಿ ಯೆರಿಕೋವಿಗೆದುರಾಗಿ ಯೊರ್ದನಿನ ಹತ್ತಿರ ಅವರ ಸಂಗಡ ಮಾತನಾಡಿ
ಅವರು ಸೆರೆಯವರನ್ನೂ ಲೂಟಿಯನ್ನೂ ಸುಲಿಗೆ ಯನ್ನೂ ಮೋಶೆ ಯಾಜಕನಾದ ಎಲ್ಲಾಜಾರನು ಇಸ್ರಾಯೇಲ್ ಮಕ್ಕಳ ಸಭೆಯವರ ಬಳಿಗೆ ಯೆರಿಕೋ ಪಟ್ಟಣಕ್ಕೆ ಎದುರಾಗಿ ಯೊರ್ದನ್ ನದಿಯ ಮೇಲೆ ಇರುವ ಮೋವಾಬಿನ ಬೈಲುಗಳಲ್ಲಿ ಇದ್ದ ಪಾಳೆಯ ದೊಳಗೆ ತಂದರು.
ನಾವು ಯೊರ್ದನ್ ನದಿಯ ಆಚೆಯಲ್ಲಿ ಅವರ ಸಂಗಡ ಸ್ವಾಸ್ತ್ಯವನ್ನು ತಕ್ಕೊಳ್ಳುವದಿಲ್ಲ. ಯಾಕಂದರೆ ನಮ್ಮ ಸ್ವಾಸ್ತ್ಯವು ನಮಗೆ ಯೊರ್ದನ್ ನದಿಯ ಈಚೆಯಲ್ಲಿ ಮೂಡಣ ಕಡೆಯಲ್ಲಿ ಬಂತು ಎಂದು ಹೇಳಿದರು.
ಅಬಾರೀಮ್ ಗುಡ್ಡಗಳಿಂದ ಹೊರಟು ಯೆರಿಕೋವಿಗೆದುರಾಗಿ ಯೊರ್ದನಿನ ತೀರದಲ್ಲಿರುವ ಮೋವಾಬಿನ ಬೈಲು ಗಳಲ್ಲಿ ಇಳಿದುಕೊಂಡರು.
ಕರ್ತನು ಯೆರಿಕೋವಿಗೆದುರಾಗಿ ಯೊರ್ದನಿನ ತೀರದಲ್ಲಿರುವ ಮೋವಾಬಿನ ಬೈಲುಗಳಲ್ಲಿ ಮೋಶೆಯ ಸಂಗಡ ಮಾತನಾಡಿ--
ಎರಡೂವರೆ ಗೋತ್ರಗಳು ತಮ್ಮ ಸ್ವಾಸ್ತ್ಯವನ್ನು ಯೊರ್ದನಿನ ಈಚೆಯಲ್ಲಿ ಯೆರಿ ಕೋವಿಗೆ ಸೂರ್ಯನು ಉದಯಿಸುವ ಪೂರ್ವ ದಿಕ್ಕಿನಲ್ಲಿ ಪಡೆದುಕೊಂಡಿದ್ದಾರೆ ಎಂದು ಹೇಳಿದನು.
ಕರ್ತನು ಯೆರಿಕೋವಿಗೆದುರಾಗಿ ಯೊರ್ದ ನಿನ ಬಳಿಯಲ್ಲಿರುವ ಮೋವಾಬಿನ ಬೈಲುಗಳಲ್ಲಿ ಮೋಶೆಯ ಸಂಗಡ ಮಾತನಾಡಿ--
ಕರ್ತನು ಯೆರಿಕೋವಿಗೆದುರಾಗಿ ಯೊರ್ದನಿನ ತೀರದಲ್ಲಿರುವ ಮೋವಾಬಿನ ಬೈಲುಗಳಲ್ಲಿ ಮೋಶೆಯ ಮೂಲಕವಾಗಿ ಇಸ್ರಾಯೇಲ್ ಮಕ್ಕಳಿಗೆ ಆಜ್ಞಾಪಿಸಿದ ಆಜ್ಞೆಗಳೂ ನ್ಯಾಯಗಳೂ ಇವೇ.
ಮೋಶೆಯು ಯೊರ್ದ ನಿನ ಈಚೆಯಲ್ಲಿ ಮೋವಾಬಿನ ದೇಶದಲ್ಲಿ ಈ ನ್ಯಾಯ ಪ್ರಮಾಣವನ್ನು ವಿವರಿಸುವದಕ್ಕೆ ಆರಂಭ ಮಾಡಿ
ಆ ಕಾಲದಲ್ಲಿ ನಾವು ಯೊರ್ದನಿನ ಈಚೆಯಲ್ಲಿ ಅರ್ನೋನ್ ನದಿಯಿಂದ ಹೆರ್ಮೋನ್ ಬೆಟ್ಟದ ವರೆಗೆ ಇರುವ ದೇಶವನ್ನು ಅಮೋರಿಯರ ಇಬ್ಬರು ಅರ ಸರ ಕೈಯಿಂದ ತಕ್ಕೊಂಡೆವು.
ಆಗ ಮೋಶೆ ಮೋವಾಬಿನ ಬೈಲಿನಿಂದ ನೆಬೋ ಪರ್ವತಕ್ಕೆ ಯೆರಿಕೋವಿಗೆ ಎದುರಾಗಿರುವ ಪಿಸ್ಗಾದ ಶಿಖರಕ್ಕೆ ಏರಿ ಹೋದನು. ಅಲ್ಲಿ ಕರ್ತನು ಅವನಿಗೆ ದೇಶವನ್ನೆಲ್ಲಾ ದಾನಿನ ವರೆಗಿರುವ ಗಿಲ್ಯಾದನ್ನೂ
ಇಸ್ರಾಯೇಲ್ ಮಕ್ಕಳು ಮೋವಾಬಿನ ಬೈಲಿನಲ್ಲಿ ಮೋಶೆಯ ನಿಮಿತ್ತ ಮೂವತ್ತು ದಿವಸ ಅತ್ತರು. ಈ ಪ್ರಕಾರ ಮೋಶೆಯ ನಿಮಿತ್ತವಾದ ಗೋಳಾಟದಲ್ಲಿ ಅಳುವ ದಿವಸಗಳು ಮುಗಿದವು.
ಮೇಲಿನಿಂದ ಇಳಿದು ಬರುವ ನೀರು ನಿಂತು ಬಹು ದೂರದಲ್ಲಿ ಚಾರೆತಾನಿಗೆ ಹೊಂದಿದ ಆದಾಮ್ ಪಟ್ಟಣದ ಹತ್ತಿರ ಬಂದು ರಾಶಿಯಾಗಿ ನಿಂತಿತು. ಕೆಳಗಣ ನೀರು ಉಪ್ಪು ಸಮುದ್ರವೆಂಬ ಸಮುದ್ರಕ್ಕೆ ಹರಿದು ಹೋಯಿತು.ಆಗ ಜನರೆಲ್ಲರು ಯೊರ್ದನನ್ನು ದಾಟುವ ವರೆಗೆ ಕರ್ತನ ಒಡಂಬಡಿಕೆಯ ಮಂಜೂಷವನ್ನು ಹೊರುವ ಯಾಜಕರು ಯೊರ್ದನಿನ ಒಣಗಿದ ಭೂಮಿಯ ಮಧ್ಯದಲ್ಲಿ ಧೃಡವಾಗಿ ನಿಂತಿದ್ದರು.