Home Bibles ಅಂಕೆಗಳ ಪುಸ್ತಕ 21:33 · ಕನ್ನಡ ಬೈಬಲ್
ಅಂಕೆಗಳ ಪುಸ್ತಕ 21:33 · ಕನ್ನಡ ಬೈಬಲ್

ಆಗ ಅವರು ತಿರುಗಿ ಬಾಷಾನಿನ ಹಾದಿಯಲ್ಲಿ ಏರಿದರು; ಆಗ ಬಾಷಾನಿನ ಅರಸನಾದ ಓಗನು ಎದ್ರೈಯಲ್ಲಿ ಯುದ್ಧಮಾಡುವದಕ್ಕೆ ತನ್ನ ಸಮಸ್ತ ಜನರ ಸಂಗಡ ಅವರಿಗೆದುರಾಗಿ ಹೊರಟನು.

Cross references

ಅಂಕೆಗಳ ಪುಸ್ತಕ 32:33

ಹಾಗೆಯೇ ಮೋಶೆಯು ಗಾದನ ಮಕ್ಕಳಿಗೂ ರೂಬೇನನ ಮಕ್ಕಳಿಗೂ ಯೋಸೇಫನ ಮಗನಾದ ಮನಸ್ಸೆಯ ಅರ್ಧ ಗೋತ್ರಕ್ಕೂ ಅಮೋರಿಯರ ಅರಸ ನಾದ ಸೀಹೋನನ ರಾಜ್ಯವನ್ನೂ ಬಾಷಾನಿನ ಅರಸ ನಾದ ಓಗನ ರಾಜ್ಯವನ್ನೂ ಅದರ ಭೂಮಿಯನ್ನೂ ಅದರ ಮೇರೆಗಳಲ್ಲಿ ಸುತ್ತಮುತ್ತಲಿನ ಪಟ್ಟಣಗಳನ್ನೂ ಕೊಟ್ಟನು.

ದ್ವಿತೀಯೋಪದೇಶಕಾಂಡ 1:4

ಅವನು ಹೆಷ್ಬೋನಿನಲ್ಲಿ ವಾಸಮಾಡಿದ ಅಮೋರಿ ಯರ ಅರಸನಾದ ಸೀಹೋನನನ್ನೂ ಎದ್ರೈಯಲ್ಲಿ ವಾಸಮಾಡಿದ ಬಾಷಾನಿನ ಅರಸನಾದ ಓಗನನ್ನೂ ಅಷ್ಟಾರೋತನಲ್ಲಿ ಕೊಂದನು.

ದ್ವಿತೀಯೋಪದೇಶಕಾಂಡ 2:30

ಆದರೆ ಹೆಷ್ಬೋನಿನ ಅರಸ ನಾದ ಸೀಹೋನನು ನಮ್ಮನ್ನು ತನ್ನ ಬಳಿಯಿಂದ ದಾಟಿಹೋಗಲು ಮನಸ್ಸು ಮಾಡಲಿಲ್ಲ; ಯಾಕಂದರೆ ಅವನನ್ನು ನಿನ್ನ ಕೈಯಲ್ಲಿ ಒಪ್ಪಿಸುವ ಹಾಗೆ ನಿನ್ನ ದೇವರಾದ ಕರ್ತನು ಅವನ ಬುದ್ಧಿಯನ್ನು ಮಂಕು ಮಾಡಿ ಹೃದಯವನ್ನು ಕಠಿಣಪಡಿಸಿದನೆಂದು ಈಗಾ ಗಲೇ ಪ್ರಸಿದ್ಧವಾಗಿದೆ.

ದ್ವಿತೀಯೋಪದೇಶಕಾಂಡ 3:1

ಆಗ ನಾವು ತಿರುಗಿಕೊಂಡು ಬಾಷಾನಿನ ಕಡೆಗೆ ಹೊರಟೆವು. ಬಾಷಾನಿನ ಅರಸ ನಾದ ಓಗನು ತನ್ನ ಎಲ್ಲಾ ಜನರ ಸಂಗಡ ನಮ್ಮೆದುರಿಗೆ ಎದ್ರೈಗೆ ಯುದ್ಧಮಾಡುವದಕ್ಕೆ ಹೊರಟನು.

ದ್ವಿತೀಯೋಪದೇಶಕಾಂಡ 4:47

ಅವನ ದೇಶವನ್ನೂ ಬಾಷಾ ನಿನ ಅರಸನಾದ ಓಗನ ದೇಶವನ್ನೂ ಯೊರ್ದನಿನ ಈಚೆಯಲ್ಲಿ ಸೂರ್ಯೋದಯದ ಕಡೆಗೆ ಇರುವ ಅಮೋರಿಯರ ಇಬ್ಬರು ಅರಸರ ದೇಶಗಳನ್ನೂ

ದ್ವಿತೀಯೋಪದೇಶಕಾಂಡ 29:7

ನೀವು ಈ ಸ್ಥಳಕ್ಕೆ ಬಂದಾಗ ಹೆಷ್ಬೋನಿನ ಅರಸನಾದ ಸೀಹೋನನೂ ಬಾಷಾನಿನ ಅರಸನಾದ ಓಗನೂ ನಮ್ಮೆದುರಿಗೆ ಯುದ್ಧಕ್ಕೆ ಬರಲಾಗಿ ನಾವು ಅವರನ್ನು ಹೊಡೆದು

ದ್ವಿತೀಯೋಪದೇಶಕಾಂಡ 32:14

ಹಸುಗಳ ಬೆಣ್ಣೆಯನ್ನೂ ಕುರಿಗಳ ಹಾಲನ್ನೂ ಕುರಿಮರಿಗಳ ಕೊಬ್ಬಿನೊಂದಿಗೆ ಬಾಷಾನಿನ ಟಗರು ಗಳನ್ನೂ ಹೋತಗಳನ್ನೂ ಉತ್ತಮ ಗೋಧಿಯ ಸಂಗಡ ಕೊಟ್ಟನು. ನೀನು ಶುದ್ಧ ದ್ರಾಕ್ಷಾರಸವನ್ನು ಕುಡಿದಿ.

ಯೆಹೋಶುವ 9:10

ಯೊರ್ದನಿಗೆ ಆಚೆಯಿರುವ ಅಮೋರಿಯರ ಇಬ್ಬರು ಅರಸುಗಳಾದ ಹೆಷ್ಬೋನಿನ ಅರಸನಾದ ಸೀಹೋನನಿಗೂ ಅಷ್ಟರೋತಿನಲ್ಲಿದ್ದ ಬಾಷಾನಿನ ಅರಸನಾದ ಓಗನಿಗೂ ಮಾಡಿದ್ದೆಲ್ಲವನ್ನೂ ನಾವು ಕೇಳಿದೆವು.

ಯೆಹೋಶುವ 12:4

ಅಷ್ಟರೋತಿನಲ್ಲಿಯೂ ಎದ್ರೈಯಲ್ಲಿ ವಾಸಮಾಡಿ

ಯೆಹೋಶುವ 13:12

ಅಷ್ಟರೋತಿನಲ್ಲಿಯೂ ಎದ್ರೈಯ ಲ್ಲಿಯೂ ಆಳಿದ ರಾಕ್ಷಸರಲ್ಲಿ ಮಿಕ್ಕಿದ್ದ ಬಾಷಾನಿನ ಅರಸನಾದ ಓಗನ ರಾಜ್ಯವೆಲ್ಲಾ ಸಮಸ್ತ ರಾಜ್ಯವಾದ ಬಾಷಾನೂ ಇವುಗಳೇ. ಮೋಶೆಯು ಇವೆಲ್ಲವುಗಳನ್ನು ಜಯಿಸಿ ಅವರನ್ನು ಹೊಡೆದು ಹೊರಡಿಸಿದ್ದನು.

ಯೆಹೋಶುವ 13:30

ಅದು ಯಾವದಂದರೆ, ಮಹನಯಾಮಿ ನಿಂದ ಬಾಷಾನಿನ ಅರಸನಾದ ಓಗನ ಸಮಸ್ತ ರಾಜ್ಯವಾಗಿರುವ ಬಾಷಾನೆಲ್ಲವೂ ಬಾಷಾನಿನಲ್ಲಿರುವ ಯಾಯಾರಿನ ಸಮಸ್ತ ಊರುಗಳಾದ ಅರವತ್ತು ಪಟ್ಟಣಗಳೂ ಅವರ ಮೇರೆಗೆ ಒಳಗಾದವು.

ಕೀರ್ತನೆಗಳು 22:12

ಬಹಳ ಹೋರಿಗಳು ನನ್ನನ್ನು ಸುತ್ತಿಕೊಂಡಿವೆ; ಬಾಷಾನಿನ ಬಲವಾದ ಹೋರಿಗಳು ನನ್ನನ್ನು ಮುತ್ತಿ ಕೊಂಡಿವೆ.

ಕೀರ್ತನೆಗಳು 68:15

ಬಾಷಾನ್‌ ಬೆಟ್ಟವು ದೇವರ ಬೆಟ್ಟದಂತೆ ಇದೆ; ಬಾಷಾನ್‌ ಬೆಟ್ಟವು ಉನ್ನತ ಬೆಟ್ಟವಾಗಿದೆ.

ಯೆಶಾಯ 33:9

ದೇಶವು ಪ್ರಲಾಪಿಸಿ ಕುಗ್ಗುತ್ತದೆ. ಲೆಬನೋನ್‌ ನಾಚಿಕೆಪಟ್ಟು ಕಡಿದು ಬೀಳುವದು. ಶಾರೋನ್‌ ಬೆಂಗಾ ಡಾಗಿದೆ. ಬಾಷಾನ್‌ ಮತ್ತು ಕರ್ಮೆಲ್‌ ಹಣ್ಣುಗಳನ್ನು ಉದುರಿಸಿಬಿಟ್ಟಿವೆ.

ಯೆಹೆಜ್ಕೇಲ 27:6

ನಿನ್ನ ಹುಟ್ಟು ಗೋಲನ್ನು ಬಾಷಾನಿನ ಓಕ್‌ ವೃಕ್ಷದಿಂದ ಮಾಡಿದ್ದಾರೆ, ಕಿತ್ತೀಯರ ದ್ವೀಪಗಳಿಂದ ತಂದ ದಂತದ ಹಲಗೆಗಳಿಂದ ಅಶ್ಶೂರ್ಯರ ಗುಂಪಿನವರು ಕೆತ್ತಿದ್ದಾರೆ.

ಯೆಹೆಜ್ಕೇಲ 39:18

ನೀವು ಶೂರರ ಮಾಂಸವನ್ನು ತಿನ್ನುವಿರಿ ಮತ್ತು ಭೂಮಿಯ ಪ್ರಭುಗಳ ಟಗರು ಕುರಿಮರಿ ಹೋತ ಮತ್ತು ಹೋರಿಗಳ ಬಾಷಾನಿನ ಕೊಬ್ಬಿದ ಪಶು ಇವೆಲ್ಲವುಗಳ ರಕ್ತವನ್ನು ಕುಡಿಯುವಿರಿ.

ಆಮೋಸ 4:1

ಸಮಾರ್ಯದ ಬೆಟ್ಟದಲ್ಲಿರುವ ಬಾಷಾನಿನ ಹಸುಗಳೇ, ಬಡವರನ್ನು ಬಲಾತ್ಕಾರ ಮಾಡಿ, ದರಿದ್ರರನ್ನು ಜಜ್ಜಿ ತಮ್ಮ ಯಜಮಾನರಿಗೆ --ಪಾನವನ್ನು ತರಿಸಿರಿ, ಕುಡಿಯೋಣ ಎಂದು ಹೇಳು ವವರೇ, ಈ ವಾಕ್ಯವನ್ನು ಕೇಳಿರಿ.

Interlinear

Choose Theme