Home Bibles ಅಂಕೆಗಳ ಪುಸ್ತಕ 20:20 · ಕನ್ನಡ ಬೈಬಲ್
ಅಂಕೆಗಳ ಪುಸ್ತಕ 20:20 · ಕನ್ನಡ ಬೈಬಲ್

ಆದರೆ ಅವನು--ನೀನು ದಾಟಬೇಡ ಅಂದನು. ಎದೋಮ್ಯನು ಬಹು ಜನರಿಂದಲೂ ಬಲವುಳ್ಳ ಕೈಯಿಂದಲೂ ಅವರಿಗೆ ಎದುರಾಗಿ ಹೊರಟನು.

Cross references

ಆದಿಕಾಂಡ 27:41

ತಂದೆಯು ಯಾಕೋಬನಿಗೆ ಕೊಟ್ಟ ಆಶೀರ್ವಾದ ಕ್ಕೋಸ್ಕರ ಏಸಾವನು ಅವನನ್ನು ಹಗೆಮಾಡಿ--ನನ್ನ ತಂದೆಗೋಸ್ಕರ ದುಃಖಪಡುವ ದಿನಗಳು ಸವಿಾಪ ವಾಗಿವೆ, ತರುವಾಯ ನಾನು ನನ್ನ ಸಹೋದರ ನಾದ ಯಾಕೋಬನನ್ನು ಕೊಲ್ಲುವೆನು ಎಂದು ಹೃದಯದಲ್ಲಿ ಅಂದುಕೊಂಡನು.

ಆದಿಕಾಂಡ 32:6

ಆಗ ದೂತರು ಯಾಕೋಬನ ಬಳಿಗೆ ಹಿಂತಿರುಗಿ ಬಂದು--ನಾವು ನಿನ್ನ ಸಹೋದರನಾದ ಏಸಾವನ ಬಳಿಗೆ ಹೋಗಿ ಬಂದಿದ್ದೇವೆ; ಅವನು ನಾನೂರು ಮಂದಿಯನ್ನು ಕರಕೊಂಡು ನಿನ್ನನ್ನು ಎದುರುಗೊಳ್ಳುವದಕ್ಕೆ ಬರುತ್ತಾನೆ ಅಂದರು.

ಅಂಕೆಗಳ ಪುಸ್ತಕ 20:18

ಎದೋಮ್ಯನು ಅವನಿಗೆ ಹೇಳಿದ್ದೇನಂದರೆ--ನೀನು ನನ್ನ ಕಡೆಯಲ್ಲಿ ದಾಟಿ ಹೋಗಬೇಡ; ಹೋದರೆ ನಾನು ಕತ್ತಿಯಿಂದ ನಿನಗೆದುರಾಗಿ ಹೊರಡುವೆನು.

ನ್ಯಾಯಾಧಿಪತಿಗಳು 11:17

ಎದೋಮಿನ ಅರಸನ ಬಳಿಗೆ ದೂತರನ್ನು ಕಳುಹಿಸಿ--ನಾನು ನಿನ್ನ ದೇಶವನ್ನು ಹಾದು ಹೋಗಲು ಅಪ್ಪಣೆಆಗಬೇಕು ಎಂದು ಹೇಳಿದರು. ಆದರೆ ಎದೋಮಿನ ಅರಸನು ಕೇಳದೆ ಹೋದನು. ಅವರು ಮೋವಾಬಿನ ಅರಸನ ಬಳಿಗೂ ಹಾಗೆಯೇ ಕಳುಹಿಸಿದರು; ಅವನೂ ಒಪ್ಪದೆ ಹೋದನು. ಆದದ ರಿಂದ ಇಸ್ರಾಯೇಲ್ಯರು ಕಾದೇಶಿನಲ್ಲಿ ವಾಸಮಾಡಿದರು.

ನ್ಯಾಯಾಧಿಪತಿಗಳು 11:20

ಆದರೆ ಸೀಹೋ ನನು ತನ್ನ ಮೇರೆಯನ್ನು ದಾಟುವದಕ್ಕೆ ಇಸ್ರಾಯೇಲನ್ನು ನಂಬದೆ ತನ್ನ ಜನವನ್ನೆಲ್ಲಾ ಕೂಡಿಸಿ ಯಹಚಿನಲ್ಲಿ ದಂಡಿಳಿದು ಇಸ್ರಾಯೇಲಿಗೆ ವಿರೋಧವಾಗಿ ಯುದ್ಧ ಮಾಡಿದನು.

ಕೀರ್ತನೆಗಳು 120:7

ನಾನು ಸಮಾಧಾನವಾಗಿದ್ದೇನೆ; ಆದರೆ ನಾನು ಮಾತಾಡಲು ಅವರು ಯುದ್ಧಮಾಡು ವದಕ್ಕಿದ್ದಾರೆ.

ಯೆಹೆಜ್ಕೇಲ 35:5

ನೀನು ಇಸ್ರಾಯೇಲ್ಯರ ಮೇಲೆ ದೀರ್ಘ ದ್ವೇಷವಿಟ್ಟು ಅವರ ಅಪರಾಧದ ಕೊನೆಯ ಕಾಲದಲ್ಲಿ ಅಪತ್ತು ಸಂಭವಿಸಿ ದಾಗ ಅವರನ್ನು ಕತ್ತಿಯ ಬಾಯಿಗೆ ಗುರಿಮಾಡಿದಿ.

ಆಮೋಸ 1:11

ಕರ್ತನು ಹೀಗೆ ಹೇಳುತ್ತಾನೆ--ಎದೋಮಿನ ಮೂರು ಮತ್ತು ನಾಲ್ಕರ ಅಪರಾಧಗಳ ನಿಮಿತ್ತವಾಗಿ ನಾನು ಅದರ ದಂಡನೆಯಿಂದ ತಪ್ಪಿಸುವದಿಲ್ಲ. ಅವನು ತನ್ನ ಎಲ್ಲಾ ಕನಿಕರಗಳನ್ನು ಬಿಸಾಡಿಬಿಟ್ಟು ತನ್ನ ಸಹೋ ದರನನ್ನು ಕತ್ತಿಯ ಸಹಿತ ಹಿಂಬಾಲಿಸಿದನು. ಅವನ ಕೋಪವು ನಿರಂತರವಾಗಿ ಹರಿಯುತ್ತಿತ್ತು; ತನ್ನ ರೌದ್ರ ವನ್ನು ನಿತ್ಯವಾಗಿ ಇಟ್ಟುಕೊಂಡನು.

ಒಬದ್ಯ 1:10

ನಿನ್ನ ತಮ್ಮನಾದ ಯಾಕೋಬನಿಗೆ ವಿರೋಧವಾದ ನಿನ್ನ ಬಲಾತ್ಕಾರದ ನಿಮಿತ್ತ ನಾಚಿಕೆಯು ನಿನ್ನನ್ನು ಮುಚ್ಚು ವದು; ನೀನು ಎಂದೆಂದಿಗೂ ಕಡಿದುಹಾಕಲ್ಪಡುವಿ.

Interlinear

Choose Theme