ನಮ್ಮನ್ನು ನಿನ್ನ ದೇಶದಿಂದ ದಾಟಿ ಹೋಗ ಗೊಡಿಸು; ನಾವು ಹೊಲವನ್ನಾದರೂ ದ್ರಾಕ್ಷೇತೋಟ ವನ್ನಾದರೂ ದಾಟಿಹೋಗುವದಿಲ್ಲ, ಬಾವಿಗಳ ನೀರನ್ನೂ ಕುಡಿಯುವದಿಲ್ಲ, ರಾಜ ಮಾರ್ಗದಲ್ಲಿ ಮಾತ್ರ ಹೋಗುತ್ತೇವೆ. ನಾವು ನಿನ್ನ ಮೇರೆಯನ್ನು ದಾಟುವ ವರೆಗೆ ಬಲಗಡೆಗಾದರೂ ಎಡಗಡೆಗಾದರೂ ತಿರುಗುವದಿಲ್ಲ.
Cross references
ಇದಲ್ಲದೆ ಇಸ್ರಾಯೇಲ್ಯರು ಪಾಳತಿ ನೋಡುವ ಮಾರ್ಗದಿಂದ ಬರುತ್ತಾ ರೆಂದು ದಕ್ಷಿಣದಲ್ಲಿ ವಾಸಿಸುವ ಕಾನಾನ್ಯನಾದ ಅರಾದ್ ಪಟ್ಟಣದ ಅರಸನು ಕೇಳಿ ಅವರ ಸಂಗಡ ಯುದ್ಧಮಾಡಿ ಅವರಲ್ಲಿ ಕೆಲವರನ್ನು ಸೆರೆಯಾಗಿ ಒಯ್ದನು.
ನಾವು ನಿನ್ನ ದೇಶದಲ್ಲಿ ದಾಟಿ ಹೋಗಬೇಕು; ನಾವು ಹೊಲದಲ್ಲಾದರೂ ದ್ರಾಕ್ಷೇ ತೋಟದಲ್ಲಾದರೂ ತಿರುಗಿ ಕೊಳ್ಳದೆ ಬಾವಿಯ ನೀರನ್ನು ಕುಡಿಯದೆ ನಿನ್ನ ಮೇರೆಯನ್ನು ದಾಟುವ ವರೆಗೆ ರಾಜಮಾರ್ಗದಲ್ಲಿ ಹೋಗುತ್ತೇವೆ.
ಆಗ ನಾವು ತಿರುಗಿಕೊಂಡು ಕರ್ತನು ನನಗೆ ಹೇಳಿದ ಪ್ರಕಾರ ಕೆಂಪು ಸಮುದ್ರದ ಮಾರ್ಗವಾಗಿ ಅರಣ್ಯಕ್ಕೆ ಹೊರಟು ಅನೇಕ ದಿವಸಗಳು ಸೇಯಾರ್ ಬೆಟ್ಟವನ್ನು ಸುತ್ತಿಕೊಂಡೆವು.
ನಾನು ನಿನ್ನ ದೇಶ ವನ್ನು ದಾಟಿಹೋಗುತ್ತೇನೆ. ನಾನು ರಾಜ ಮಾರ್ಗ ದಿಂದಲೇ ಹೋಗುತ್ತೇನೆ; ಎಡಕ್ಕೂ ಬಲಕ್ಕೂ ತಿರುಗು ವದಿಲ್ಲ.
ನೀನು ಹಣಕ್ಕೋಸ್ಕರ ನನಗೆ ಮಾರುವ ಆಹಾರವನ್ನು ಉಣ್ಣುತ್ತೇನೆ; ಹಣಕ್ಕೋಸ್ಕರ ನನಗೆ ಕೊಡುವ ನೀರನ್ನು ಕುಡಿಯುತ್ತೇನೆ;
ಕಾಲ್ನಡಿಗೆಯಾಗಿ ಹಾದು ಹೋಗುತ್ತೇನಷ್ಟೆ. ಸೇಯಾರಿನಲ್ಲಿ ವಾಸ ಮಾಡುವ ಏಸಾವನ ಮಕ್ಕಳೂ ಆರ್‌ನಲ್ಲಿ ವಾಸ ಮಾಡುವ ಮೋವಾಬ್ಯರೂ ನನಗೆ ಮಾಡಿದ ಹಾಗೆ ನಾನು ಯೊರ್ದನಿನ ಆಚೆಗೆ ನಮ್ಮ ದೇವರಾದ ಕರ್ತನು ನಮಗೆ ಕೊಡುವ ದೇಶಕ್ಕೆ ಹೋಗುವ ವರೆಗೆ ನನಗೆ ಮಾಡು ಅಂದೆನು.