ಇಸ್ರಾಯೇಲ್ ಮಕ್ಕಳು ಕರ್ತನ ಸಂಗಡ ವ್ಯಾಜ್ಯ ವಾಡಿದಕ್ಕಾಗಿ ಆತನು ಅವರಲ್ಲಿ ತನ್ನನ್ನು ಪರಿಶುದ್ಧ ಮಾಡಿಕೊಂಡ ಮೆರೀಬಾದ ನೀರು ಇದೇ.
Cross references
ಅವನು ಆ ಸ್ಥಳಕ್ಕೆ ಮಸ್ಸಾ ಮೆರಿಬಾ ಎಂದು ಹೆಸರಿಟ್ಟನು. ಯಾಕಂದರೆ ಅಲ್ಲಿ ಇಸ್ರಾಯೇಲ್ ಮಕ್ಕಳು ವಿವಾದ ಮಾಡಿದರು.-- ಕರ್ತನು ನಮ್ಮ ಮಧ್ಯದಲ್ಲಿ ಇದ್ದಾನೋ ಇಲ್ಲವೋ ಎಂದು ಪರೀಕ್ಷಿಸಿದರು.
ಕಾರಣವೇನಂದರೆ, ನೀವು ಜಿನ್ ಅರಣ್ಯದಲ್ಲಿ ಕಾದೇಶಿನ ಮೆರೀಬಾದ ನೀರಿನ ಬಳಿಯಲ್ಲಿ ನನ್ನನ್ನು ಇಸ್ರಾಯೇಲ್ ಮಕ್ಕಳಲ್ಲಿ ಪರಿಶುದ್ಧ ಮಾಡದೆ ನನಗೆ ವಿರೋಧವಾಗಿ ಆಜ್ಞೆ ವಿಾರಿದಿರಿ.ನೀನು ಆ ದೇಶವನ್ನು ಕಣ್ಣಾರೆ ನೋಡುವಿ; ಆದರೆ ನಾನು ಇಸ್ರಾಯೇಲ್ ಮಕ್ಕಳಿಗೆ ಕೊಡುವ ದೇಶದಲ್ಲಿ ನೀನು ಪ್ರವೇಶಿಸುವದಿಲ್ಲ ಎಂದು ಹೇಳಿದನು.
ಲೇವಿಯ ವಿಷಯವಾಗಿ--ನಿನ್ನ ತುವಿಾ್ಮೇಮ್ ನಿನ್ನ ಊರೀಮ್ ಮಸ್ಸದಲ್ಲಿ ನೀನು ಶೋಧಿಸಿದಂಥ ಮೆರೀ ಬಾದ ನೀರಿನ ಬಳಿಯಲ್ಲಿ ನೀನು ವಿವಾದ ಮಾಡಿದಂಥ ನಿನ್ನ ಪರಿಶುದ್ಧನ ಬಳಿಯಲ್ಲಿ ಇರುವವು;
ಓ ನನ್ನ ಜನರೇ, ಕೇಳಿರಿ; ಓ ಇಸ್ರಾಯೇಲೇ, ನೀನು ನನ್ನನ್ನು ಕೇಳಿದರೆ ನಾನು ನಿನಗೆ ಸಾಕ್ಷಿ ಕೊಡು ವೆನು.
ಅರಣ್ಯದಲ್ಲಿ ಆದ ಶೋಧನೆಯ ದಿವಸದಲ್ಲಿ ಕೋಪವನ್ನೆಬ್ಬಿಸಿದಂತೆ ನಿಮ್ಮ ಹೃದ ಯವನ್ನು ಕಠಿಣಮಾಡಿಕೊಳ್ಳಬೇಡಿರಿ.
ಅವರು ವಿವಾದದ ನೀರಿನ ಬಳಿಯಲ್ಲಿ ಆತನಿಗೆ ಕೋಪವನ್ನೆಬ್ಬಿಸಿದರು; ಅವರ ನಿಮಿತ್ತ ಮೋಶೆಗೆ ಕೇಡು ಬಂತು.
ಆದರೆ ಸೈನ್ಯಗಳ ಕರ್ತನು ನ್ಯಾಯತೀರ್ಪಿನಲ್ಲಿ ಉನ್ನತನಾಗಿ ರುವನು ಪರಿಶುದ್ಧನಾದ ದೇವರು ನೀತಿಯಲ್ಲಿ ಪರಿಶುದ್ಧ ನೆನಿಸಿಕೊಳ್ಳುವನು.
ನಾನು ನಿಮ್ಮನ್ನು ಜನರಿಂದ ಹೊರತಂದು ನೀವು ಚದರಿರುವ ದೇಶಗಳೊಳಗಿಂದ ನಿಮ್ಮನ್ನು ಕೂಡಿಸುವಾಗ ನಿಮ್ಮ ಸುವಾಸನೆಯ ಸಂಗಡ ನಾನು ನಿಮ್ಮನ್ನು ಅಂಗೀಕರಿಸುವೆನು, ನಾನು ಅನ್ಯ ಜನಾಂಗಗಳ ಮುಂದೆ ನಿಮ್ಮಲ್ಲಿ ಪರಿಶುದ್ಧವೆನಿಸಿಕೊಳ್ಳು ವೆನು.
ನೀವು ಅನ್ಯಜನಾಂಗಗಳ ಮಧ್ಯೆ ಅಪವಿತ್ರಪಡಿಸಿದ ನನ್ನ ಮಹತ್ತರ ನಾಮವನ್ನು ನಾನು ಪರಿಶುದ್ಧಮಾಡುವೆನು; ಹಾಗೆ ನಾನು ಅವರ ಕಣ್ಣುಗಳ ಮುಂದೆ ನಿಮ್ಮಲ್ಲಿ ಪರಿಶುದ್ಧನಾದ ಮೇಲೆ ಆ ಅನ್ಯ ಜನಾಂಗಗಳವರು ನಾನೇ ಕರ್ತನೆಂದು ತಿಳಿಯುವರು ಎಂದು ದೇವರಾದ ಕರ್ತನು ಹೇಳುತ್ತಾನೆ.
ನೀನು ದೇಶವನ್ನು ಮುಚ್ಚುವ ಮೇಘದಂತೆ ನನ್ನ ಜನರಾಗಿರುವ ಇಸ್ರಾಯೇಲ್ಯರಿಗೆ ವಿರೋಧವಾಗಿ ಅವರ ಮೇಲೆ ಬರುವಿ; ಇದು ನಡೆ ಯುವ ಕೊನೆಯ ದಿವಸಗಳಲ್ಲಿ ಓ ಗೋಗನೇ, ನಾನು ಅವರ ಕಣ್ಣುಗಳ ಮುಂದೆ ನಿನ್ನಲ್ಲಿ ಪರಿಶುದ್ಧನಾಗುವಾಗ, ಅನ್ಯಜನಾಂಗಗಳು ನನ್ನನ್ನು ತಿಳಿಯುವ ಹಾಗೆ ನಿನ್ನನ್ನು ನನ್ನ ದೇಶಕ್ಕೆ ಬರಮಾಡುವೆನು.