ಅವರು ಕರ್ತನಿಗೆ ತರುವ ದೇಶದ ಎಲ್ಲವುಗಳ ಪ್ರಥಮ ಫಲಗಳು ನಿನ್ನವುಗಳಾಗಿರುವವು. ನಿನ್ನ ಮನೆಯಲ್ಲಿರುವ ಶುದ್ಧನಾದ ಪ್ರತಿಯೊಬ್ಬನ್ನು ಅದನ್ನು ತಿನ್ನಬಹುದು.
Cross references
ನಿನ್ನ ಪ್ರಥಮ ಫಲಗಳನ್ನೂ ಪಾನಗಳನ್ನೂ ನನಗೆ ಅರ್ಪಿಸಲು ತಡ ಮಾಡಬೇಡ. ನಿನ್ನ ಮಕ್ಕಳಲ್ಲಿ ಚೊಚ್ಚಲಾದವರನ್ನು ನನಗೆ ಕೊಡಬೇಕು.
ನಿನ್ನ ಭೂಮಿಯ ಪ್ರಥಮ ಫಲಗಳಲ್ಲಿ ಮೊದಲ ನೆಯದನ್ನು ನಿನ್ನ ದೇವರಾದ ಕರ್ತನ ಆಲಯಕ್ಕೆ ತರ ಬೇಕು. ಮೇಕೆಯ ಮರಿಯನ್ನು ತಾಯಿಯ ಹಾಲಿನಲ್ಲಿ ಬೇಯಿಸಬಾರದು.
ಸೂರ್ಯನು ಮುಳು ಗಿದಾಗ ಅವನು ಶುದ್ಧನಾಗಿರುವನು, ತರುವಾಯ ಅವನು ಪರಿಶುದ್ಧವಾದವುಗಳನ್ನು ತಿನ್ನಲಿ, ಅದು ಅವನಿಗೆ ಆಹಾರ.
ಇದಲ್ಲದೆ ನೀವು ನಿಮ್ಮ ನಿವಾಸಗಳಿಂದ ಹತ್ತನೆಯ ಎರಡು ಭಾಗ ಗಳ ಆಡಿಸುವ ಎರಡು ರೊಟ್ಟಿಗಳನ್ನು ಹೊರಗೆ ತರ ಬೇಕು. ಅವು ನಯವಾದ ಹಿಟ್ಟಿನಿಂದಾದವುಗಳಾಗಿರ ಬೇಕು. ಅವುಗಳು ಹುಳಿ ಕಲಸಿ ಸುಟ್ಟವುಗಳಾಗಿರಬೇಕು. ಅವು ಕರ್ತನಿಗೆ ಪ್ರಥಮ ಫಲಗಳು.
ನಿನ್ನ ಧಾನ್ಯ ದ್ರಾಕ್ಷಾರಸ ಎಣ್ಣೆ ಗಳ ಪ್ರಥಮ ಫಲವನ್ನೂ ನಿನ್ನ ಕುರಿಗಳ ಉಣ್ಣೆ ಯಲ್ಲಿ ಪ್ರಥಮವಾದದ್ದನ್ನೂ ಅವನಿಗೆ ಕೊಡಬೇಕು.
ನಿನ್ನ ದೇವರಾದ ಕರ್ತನು ನಿನಗೆ ಕೊಡುವ ನಿನ್ನ ದೇಶದಿಂದ ನೀನು ತರತಕ್ಕ ಭೂಮಿಯ ಎಲ್ಲಾ ಹುಟ್ಟುವಳಿಯ ಪ್ರಥಮ ಫಲವನ್ನು ಪುಟ್ಟಿಯ ಲ್ಲಿಟ್ಟು ನಿನ್ನ ದೇವರಾದ ಕರ್ತನು ತನ್ನ ಹೆಸರನ್ನು ಸ್ಥಾಪಿಸುವದಕ್ಕೆ ಆದುಕೊಳ್ಳುವ ಸ್ಥಳಕ್ಕೆ ತಕ್ಕೊಂಡು ಹೋಗಬೇಕು.
ಇದಲ್ಲದೆ ಬಾಳ್‌ಷಾಲಿಷಾದಿಂದ ಒಬ್ಬ ಮನು ಷ್ಯನು ದೇವರ ಮನುಷ್ಯನಿಗೆ ಮೊದಲ ಫಲವಾದ ಜವೆಗೋದಿಯ ಇಪ್ಪತ್ತು ರೊಟ್ಟಿಗಳನ್ನೂ ಕಾಳಿ ನಿಂದ ತುಂಬಿದ ತೆನೆಗಳನ್ನೂ ತಕ್ಕೊಂಡು ಬಂದನು.
ಈ ಆಜ್ಞೆ ಹೊರಗೆ ಬಂದಾಗಲೇ ಇಸ್ರಾಯೇಲ್ ಮಕ್ಕಳು ಧಾನ್ಯ, ದ್ರಾಕ್ಷಾರಸ, ಎಣ್ಣೆ, ಜೇನು, ಹೊಲಗಳ ಹುಟ್ಟುವಳಿ ಇವುಗಳ ಮೊದಲನೇ ಪಾಲನ್ನು ಬಹಳವಾಗಿ ಒಳಗೆ ತಂದರು. ಹಾಗೆಯೇ ಸಮಸ್ತ ವಸ್ತುಗಳಲ್ಲಿ ದಶಮಾಂಶದ ಪಾಲನ್ನು ಬಹಳ ವಾಗಿ ತಂದರು;
ಪ್ರವಾದಿಯಾದ ಯೆರೆವಿಾಯನು ಯೆಹೂ ದದ ಸಮಸ್ತ ಜನರಿಗೂ ಯೆರೂಸಲೇಮಿನ ಎಲ್ಲಾ ನಿವಾಸಿಗಳಿಗೂ ತಿಳಿಸಿದ್ದು ಏನಂದರೆ--
ನಾನು ಅರಣ್ಯದಲ್ಲಿ ದ್ರಾಕ್ಷೆಯ ಫಲದ ಹಾಗೆ ಇಸ್ರಾಯೇಲನ್ನು ಕಂಡುಕೊಂಡೆನು. ಅಂಜೂರದ ಗಿಡ ದಲ್ಲಿ ಮೊದಲನೆಯ ಹಣ್ಣುಗಳ ಹಾಗೆ ನಿಮ್ಮ ಪಿತೃಗಳನ್ನು ನೋಡಿದೆನು; ಆದರೆ ಅವರು ಬಾಳ್ ಪೆಗೋರಿಗೆ ಹತ್ತಿರ ಬಂದು ನಾಚಿಕೆಯಾದದ್ದಕ್ಕೆ ತಮ್ಮನ್ನು ಪ್ರತ್ಯೇ ಕಿಸಿಕೊಂಡರು; ಅವರು ಪ್ರೀತಿಮಾಡಿದ್ದರ ಹಾಗೆ ಅಸಹ್ಯರಾದರು.
ನನಗೆ ಅಯ್ಯೋ, ಯಾಕಂದರೆ ನಾನು ಬೇಸಿಗೆ ಕಾಲದ ಹಣ್ಣುಗಳನ್ನು ಕೂಡಿಸುವ ವರ ಹಾಗೆಯೂ ದ್ರಾಕ್ಷೇ ಸುಗ್ಗಿಯಲ್ಲಿ ಹಕ್ಕಲು ಆರಿಸುವವರ ಹಾಗೆಯೂ ಇದ್ದೇನೆ; ತಿನ್ನುವದಕ್ಕೆ ಗೊನೆ ಇಲ್ಲ. ನನ್ನ ಪ್ರಾಣವು ಮೊದಲು ಹಣ್ಣಾದ ಅಂಜೂರ ವನ್ನು ಅಪೇಕ್ಷಿಸಿಯದೆ.