ಆಗ ಮೋಶೆಯು ಆ ಕೋಲುಗಳನ್ನು ಸಾಕ್ಷಿಯ ಗುಡಾರ ದೊಳಗೆ ಕರ್ತನ ಸಮ್ಮುಖದಲ್ಲಿ ಇಟ್ಟನು.
Cross references
ಮೋಶೆಯ ಆಜ್ಞೆಯ ಮೇರೆಗೆ ಲೇವಿಯ ಸೇವೆಗಾಗಿ ಯಾಜಕನಾದ ಆರೋನನ ಮಗ ಈತಾಮಾರನ ಕೈಗೆ ಒಪ್ಪಿಸಿದ ಸಾಕ್ಷಿ ಗುಡಾರವನ್ನೊಳಗೊಂಡ ಗುಡಾ ರವನ್ನು ನಿರ್ಮಿಸಲು ಮಾಡಬೇಕಾದ ಒಟ್ಟು ಏರ್ಪಾಡುಗಳು ಇವೇ.
ಗುಡಾರವನ್ನು ಎತ್ತಿದ ದಿವಸದಲ್ಲಿ ಮೇಘವು ನಿವಾಸದ ಕಡೆಗೆ ಅಂದರೆ, ಸಾಕ್ಷೀ ಗುಡಾರವನ್ನು ಮುಚ್ಚಿತು. ಸಾಯಂಕಾಲದಿಂದ ಉದಯದ ವರೆಗೆ ಅದು ಬೆಂಕಿಯಂತೆ ಗುಡಾರದ ಮೇಲೆ ಇತ್ತು.
ಸಭೆಯವರೆಲ್ಲರೂ ಅವರನ್ನು ಕಲ್ಲೆಸೆಯಬೇಕೆಂದಿ ದ್ದರು. ಆಗ ಕರ್ತನ ಮಹಿಮೆಯು ಸಭೆಯ ಗುಡಾರ ದಲ್ಲಿ ಇಸ್ರಾಯೇಲ್ ಮಕ್ಕಳಿಗೆಲ್ಲಾ ಪ್ರತ್ಯಕ್ಷವಾಯಿತು.
ನಿಮ್ಮ ಪಿತೃವಾದ ಲೇವಿಯ ಗೋತ್ರದವರಾದ ನಿನ್ನ ಸಹೋದರರನ್ನು ಸಹ ನಿನ್ನ ಸಂಗಡ ಸೇರಿಸಿಕೋ. ಅವರು ನಿನ್ನ ಕೂಡ ಇದ್ದು ನಿನಗೆ ಸೇವೆ ಮಾಡಬೇಕು, ಆದರೆ ನೀನು ನಿನ್ನ ಮಕ್ಕಳ ಸಹಿತವಾಗಿ ಸಾಕ್ಷೀ ಗುಡಾರದ ಮುಂದೆ ಸೇವೆಮಾಡಬೇಕು;
ಸಾಕ್ಷೀಗುಡಾರವು ಅಡವಿಯೊಳಗೆ ನಮ್ಮ ಪಿತೃಗಳ ಬಳಿಯಲ್ಲಿ ಇತ್ತು. ಮೋಶೆಯ ಸಂಗಡ ಮಾತನಾಡಿದಾತನು ಅವನು ನೋಡಿದ ಮಾದರಿಯ ಪ್ರಕಾರವೇ ಅದನ್ನು ಮಾಡಿಸ ಬೇಕೆಂದು ನೇಮಿಸಿದ್ದನು.