Home Bibles ☰ Books ಅಂಕೆಗಳ ಪುಸ್ತಕ 16:15 · ಕನ್ನಡ ಬೈಬಲ್
ಅಂಕೆಗಳ ಪುಸ್ತಕ 16:15 · ಕನ್ನಡ ಬೈಬಲ್

ಆಗ ಮೋಶೆಯು ಬಹಳ ವಾಗಿ ಕೋಪಿಸಿಕೊಂಡು ಕರ್ತನಿಗೆ--ಅವರ ಬಲಿಯನ್ನು ನೀನು ಗೌರವಿಸಬೇಡ; ನಾನು ಅವರಿಂದ ಒಂದು ಕತ್ತೆಯನ್ನಾದರೂ ತೆಗೆದುಕೊಳ್ಳಲಿಲ್ಲ; ಇಲ್ಲವೆ ಅವರಲ್ಲಿ ಒಬ್ಬನಿಗಾದರೂ ಕೇಡು ಮಾಡಲಿಲ್ಲ ಎಂದು ಹೇಳಿದನು.

Cross references

ಆದಿಕಾಂಡ 4:4

ಹೇಬೆಲನು ಸಹ ತನ್ನ ಮಂದೆಯಿಂದ ಕೊಬ್ಬಿದ ಚೊಚ್ಚಲಾದವುಗಳನ್ನು ತಂದನು. ಆಗ ಕರ್ತನು ಹೇಬೆಲನನ್ನೂ ಅವನ ಕಾಣಿಕೆಯನ್ನೂ ಗೌರವಿಸಿದನು.

ನಿರ್ಗಮಕಾಂಡ 32:19

ಇದಾದ ಮೇಲೆ ಮೋಶೆಯು ಪಾಳೆಯದ ಸವಿಾಪಕ್ಕೆ ಬಂದು ಆ ಕರುವನ್ನೂ ಅವರ ನಾಟ್ಯವನ್ನೂ ನೋಡಿ ಕೋಪ ಗೊಂಡು ಕೈಯಲ್ಲಿದ್ದ ಹಲಗೆಗಳನ್ನು ಬಿಸಾಡಿ ಬೆಟ್ಟದ ಅಡಿಯಲ್ಲಿ ಅವುಗಳನ್ನು ಒಡೆದುಬಿಟ್ಟನು.

ಅಂಕೆಗಳ ಪುಸ್ತಕ 12:3

(ಆದರೆ ಮೋಶೆ ಎಂಬವನು ಭೂಮುಖದ ಮೇಲಿರುವ ಸಕಲ ಮನುಷ್ಯರೆಲ್ಲರಿಗಿಂತ ಬಹು ಸಾತ್ವಿಕನಾಗಿದ್ದನು.)

ಅಂಕೆಗಳ ಪುಸ್ತಕ 16:6

ಕೋರಹನೂ ಅವನ ಸಮೂಹವೆಲ್ಲವೂ ಧೂಪ ಸುಡುವ ಪಾತ್ರೆಗಳನ್ನು ತೆಗೆದುಕೊಂಡು

1 ಸಮುವೇಲ 12:3

ಇಗೋ, ನಾನು ಇಲ್ಲಿದ್ದೇನೆ; ಕರ್ತನ ಮುಂದೆಯೂ ಆತನ ಅಭಿಷಿಕ್ತನ ಮುಂದೆಯೂ ನನಗೆ ವಿರೋಧವಾಗಿ ಸಾಕ್ಷಿಕೊಡಿರಿ. ನಾನು ಯಾರ ಎತ್ತನ್ನಾದರೂ ಕತ್ತೆಯ ನ್ನಾದರೂ ತೆಗೆದುಕೊಂಡೆನೋ? ಯಾರಿಗಾದರೂ ವಂಚನೆ ಮಾಡಿದೆನೋ? ಯಾರನ್ನಾದರೂ ಹಿಂಸಿಸಿ ದೆನೋ? ಯಾರಿಂದಲಾದರೂ ಕಣ್ಣಿಗೆ ಮರೆಮಾಡುವ ಲಂಚವನ್ನು ತೆಗೆದುಕೊಂಡೆನೋ? ಹೀಗಿದ್ದರೆ ಹೇಳಿರಿ ತಿರಿಗಿಕೊಡುತ್ತೇನೆ ಅಂದನು.

2 ಸಮುವೇಲ 22:22

ಕರ್ತನ ಮಾರ್ಗಗಳನ್ನು ಕೈಕೊಂಡೆನು; ನಾನು ನನ್ನ ದೇವರನ್ನು ತೊರೆದುಬಿಡುವ ದುಷ್ಟತ್ವಮಾಡಲಿಲ್ಲ.

ಸಾಮೇತಿಗಳು 21:27

ದುಷ್ಟರ ಯಜ್ಞವು ಅಸಹ್ಯ; ಹೀಗಾದರೆ ದುರ್ಬುದ್ಧಿ ಯಿಂದ ಅದನ್ನು ಅರ್ಪಿಸಿದರೆ ಇನ್ನೂ ಎಷ್ಟೋ ಅಸಹ್ಯ ಕರವಾಗಿದೆ.

ಯೆಶಾಯ 1:10

ಸೊದೋಮಿನ ಅಧಿಪತಿಗಳೇ, ನೀವು ಕರ್ತನ ಮಾತನ್ನು ಕೇಳಿರಿ; ಗೊಮೋರದ ಪ್ರಜೆಗಳೇ, ನಮ್ಮ ದೇವರ ನ್ಯಾಯಪ್ರಮಾಣಕ್ಕೆ ಕಿವಿಗೊಡಿರಿ.

ಮತ್ತಾಯ 5:22

ನಾನು ನಿಮಗೆ ಹೇಳುವದೇನಂದರೆ-- ನಿಷ್ಕಾರಣವಾಗಿ ತನ್ನ ಸಹೋದರನ ಮೇಲೆ ಯಾವನಾದರೂ ಸಿಟ್ಟುಗೊಂಡರೆ ಅವನು ನ್ಯಾಯತೀರ್ಪಿನ ಅಪಾಯಕ್ಕೆ ಒಳಗಾಗುವನು; ಮತ್ತು ಯಾವನಾದರೂ ತನ್ನ ಸಹೋದರನಿಗೆ-- ವ್ಯರ್ಥವಾದವನೇ ಎಂದು ಹೇಳಿದರೆ ಅವನು ನ್ಯಾಯಸಭೆಯ ಅಪಾಯಕ್ಕೆ ಒಳಗಾಗುವನು

ಮಾರ್ಕ 3:5

ಆಗ ಆತನು ಅವರ ಹೃದಯಗಳ ಕಾಠಿಣ್ಯತೆಗಾಗಿ ದುಃಖಪಟ್ಟು ಸುತ್ತಲೂ ಕೋಪದಿಂದ ಅವರನ್ನು ನೋಡಿ ಆ ಮನುಷ್ಯನಿಗೆ--ನಿನ್ನ ಕೈಚಾಚು ಎಂದು ಹೇಳಿದನು. ಅವನು ಚಾಚಿದಾಗ ಅವನ ಕೈಗುಣವಾಗಿ ಮತ್ತೊಂದರ ಹಾಗಾಯಿತು.

ಅಪೋಸ್ತಲರ ಕೃತ್ಯಗಳು 20:33

ನಾನು ಯಾರ ಬೆಳ್ಳಿಯನ್ನಾಗಲಿ ಇಲ್ಲವೆ ಭಂಗಾರವನ್ನಾಗಲಿ ಇಲ್ಲವೆ ವಸ್ತ್ರವನ್ನಾಗಲಿ ಬಯಸಲಿಲ್ಲ.

1 ಕೊರಿಂಥದವರಿಗೆ 9:15

ಆದರೆ ಇವುಗಳಲ್ಲಿ ಒಂದನ್ನೂ ನಾನು ಉಪ ಯೋಗಿಸಲಿಲ್ಲ; ಇಲ್ಲವೆ ನನಗೆ ಹಾಗೆ ಆಗಲೆಂದು ನಾನು ಈ ವಿಷಯಗಳನ್ನು ಬರೆಯಲೂ ಇಲ್ಲ; ಯಾಕಂದರೆ ನಾನು ಹೆಚ್ಚಳಪಡುವದನ್ನು ಯಾವ ನಾದರೂ ವ್ಯರ್ಥ ಮಾಡುವದಕ್ಕಿಂತ ಸಾಯುವದೇ ನನಗೆ ಮೇಲು.

Interlinear

Choose Theme