Home Bibles ☰ Books ಅಂಕೆಗಳ ಪುಸ್ತಕ 14:7 · ಕನ್ನಡ ಬೈಬಲ್
ಅಂಕೆಗಳ ಪುಸ್ತಕ 14:7 · ಕನ್ನಡ ಬೈಬಲ್

ಇಸ್ರಾ ಯೇಲ್‌ ಮಕ್ಕಳ ಸಮಸ್ತ ಸಭೆಯ ಕೂಟಕ್ಕೆ--ಪಾಳತಿ ನೋಡುವದಕ್ಕೆ ನಾವು ದಾಟಿಹೋದ ದೇಶವು ಅತ್ಯು ತ್ತಮವಾದ ದೇಶವೇ.

Cross references

ಅಂಕೆಗಳ ಪುಸ್ತಕ 13:27

ಅವರು ಅವ ನಿಗೆ--ನೀನು ನಮ್ಮನ್ನು ಕಳುಹಿಸಿದ ದೇಶಕ್ಕೆ ಹೋದೆವು. ಅದು ನಿಜವಾಗಿಯೂ ಹಾಲೂ ಜೇನೂ ಹರಿಯುವ ದೇಶವೇ; ಅದರ ಫಲವು ಇದೇ.

ಅಂಕೆಗಳ ಪುಸ್ತಕ 13:30

ಆದರೆ ಕಾಲೇಬನು ಮೋಶೆಯ ಎದುರಿನಲ್ಲಿ ಜನರನ್ನು ಸುಮ್ಮನಿರಿಸಿ--ನಾವು ತಕ್ಷಣವೇ ಹೋಗಿ ಅದನ್ನು ಸ್ವಾಧೀನಮಾಡಿಕೊಳ್ಳೋಣ. ಅದನ್ನು ಜಯಿ ಸಲು ನಾವು ನಿಜವಾಗಿಯೂ ಶಕ್ತ ರಾಗಿದ್ದೇವೆ ಅಂದನು.

ದ್ವಿತೀಯೋಪದೇಶಕಾಂಡ 1:25

ದೇಶದ ಫಲದಲ್ಲಿ ಕೆಲವನ್ನು ಕೈಯಲ್ಲಿ ತಕ್ಕೊಂಡು ನಮ್ಮ ಬಳಿಗೆ ತಂದು ನಮಗೆ ಸಮಾಚಾರ ವನ್ನು ತಿಳಿಸಿ--ನಮ್ಮ ದೇವರಾದ ಕರ್ತನು ನಮಗೆ ಕೊಡುವ ದೇಶವು ಒಳ್ಳೇದು ಎಂದು ಹೇಳಿದಿರಿ.

ದ್ವಿತೀಯೋಪದೇಶಕಾಂಡ 6:10

ಇದಲ್ಲದೆ ನಿನ್ನ ದೇವರಾದ ಕರ್ತನು ನಿನ್ನ ಪಿತೃಗಳಾದ ಅಬ್ರಹಾಮ್‌ ಇಸಾಕ್‌ ಯಾಕೋಬರಿಗೆ ಪ್ರಮಾಣಮಾಡಿದ ದೇಶದಲ್ಲಿ ನಿನ್ನನ್ನು ಸೇರಿಸಿ ನೀನು ಕಟ್ಟದ ದೊಡ್ಡದಾದ ಒಳ್ಳೇ ಪಟ್ಟಣಗಳನ್ನೂ

ದ್ವಿತೀಯೋಪದೇಶಕಾಂಡ 8:7

ನಿನ್ನ ದೇವರಾದ ಕರ್ತನು ನಿನ್ನನ್ನು ಉತ್ತಮ ದೇಶಕ್ಕೆ ಬರಮಾಡುತ್ತಾನೆ; ಅದು ನೀರಿನ ಹಳ್ಳಗಳೂ ತಗ್ಗಿನಲ್ಲಿಯೂ ಬೆಟ್ಟದಲ್ಲಿಯೂ ಉಕ್ಕುವ ಬುಗ್ಗೆಗಳುಳ್ಳ ದೇಶವೇ.

ನ್ಯಾಯಾಧಿಪತಿಗಳು 18:9

ಅದಕ್ಕವರು--ಏಳಿರಿ ನಾವು ಅವರಿಗೆ ವಿರೋಧವಾಗಿ ಯುದ್ಧಮಾಡುವದಕ್ಕೆ ಹೋಗುವ ಹಾಗೆ ಆ ದೇಶವನ್ನು ನೋಡಿದೆವು; ಇಗೋ, ಅದು ಬಹಳ ಚೆನ್ನಾಗಿದೆ; ನೀವು ಸುಮ್ಮನೆ ಇರುವದು ಯಾಕೆ? ಆ ದೇಶದಲ್ಲಿ ಪ್ರವೇಶಿಸಿ ಅದನ್ನು ಸ್ವಾಧೀನಮಾಡಿಕೊಳ್ಳಲು ಹೋಗುವದಕ್ಕೆ ತಾಮಸ ಮಾಡಬೇಡಿರಿ.

Interlinear

Choose Theme