Home Bibles ಅಂಕೆಗಳ ಪುಸ್ತಕ 14:28 · ಕನ್ನಡ ಬೈಬಲ್
ಅಂಕೆಗಳ ಪುಸ್ತಕ 14:28 · ಕನ್ನಡ ಬೈಬಲ್

ಆದದರಿಂದ ನೀನು ಅವರಿಗೆ--ನನ್ನ ಜೀವದಾಣೆ, ನೀವು ನನ್ನ ಕಿವಿಗಳು ಕೇಳುವಂತೆ ಮಾತನಾಡಿದ ಪ್ರಕಾರವೇ ನಿಮಗೆ ಮಾಡುವೆನು ಎಂದು ಕರ್ತನು ಹೇಳುತ್ತಾನೆ.

Cross references

ಅಂಕೆಗಳ ಪುಸ್ತಕ 14:2

ಇಸ್ರಾಯೇಲ್‌ ಮಕ್ಕಳೆಲ್ಲರೂ ಮೋಶೆಗೂ ಆರೋನ ರಿಗೂ ವಿರೋಧವಾಗಿ ಗುಣುಗುಟ್ಟಿದರು. ಸಭೆಯಲ್ಲಾ ಅವರಿಗೆ--ನಾವು ಐಗುಪ್ತ ದೇಶದಲ್ಲಿ ಸತ್ತಿದ್ದರೆ ಇಲ್ಲವೆ ಈ ಅರಣ್ಯದಲ್ಲಿ ಸತ್ತರೆ ನಮಗೆ ಒಳ್ಳೇದಾಗಿತ್ತು.

ಅಂಕೆಗಳ ಪುಸ್ತಕ 14:21

ಆದಾಗ್ಯೂ ನನ್ನ ಜೀವದಾಣೆ, ಭೂಮಿಯೆಲ್ಲಾ ಕರ್ತನ ಮಹಿಮೆಯಿಂದ ತುಂಬಿರುವದು.

ಅಂಕೆಗಳ ಪುಸ್ತಕ 14:23

ನಾನು ಅವರ ಪಿತೃಗಳಿಗೆ ಪ್ರಮಾಣಮಾಡಿದ ದೇಶವನ್ನು ನಿಶ್ಚಯವಾಗಿ ಅವರು ನೋಡುವದಿಲ್ಲ; ಇಲ್ಲವೆ ನನಗೆ ಕೋಪವನ್ನು ಎಬ್ಬಿಸಿದವರು ಸಹ ಅದನ್ನು ನೋಡು ವದಿಲ್ಲ.

ಅಂಕೆಗಳ ಪುಸ್ತಕ 26:64

ಆದರೆ ಮೋಶೆಯೂ ಯಾಜಕನಾದ ಆರೋನನೂ ಸೀನಾಯಿ ಅರಣ್ಯದಲ್ಲಿ ಇಸ್ರಾಯೇಲ್‌ ಮಕ್ಕಳನ್ನು ಎಣಿಸಿದಾಗ ಎಣಿಸಲ್ಪಟ್ಟವರಲ್ಲಿ ಒಬ್ಬನಾದರೂ ಇವರ ಲೆಕ್ಕದಲ್ಲಿ ಸೇರಲಿಲ್ಲ.ಕರ್ತನು--ಅವರು ಅರಣ್ಯದಲ್ಲಿ ನಿಶ್ಚಯವಾಗಿ ಸಾಯಲಿ ಎಂದು ಅವರಿಗೆ ಹೇಳಿದ್ದನು; ಈ ಪ್ರಕಾರ ಯೆಫುನ್ನೆಯ ಮಗನಾದ ಕಾಲೇಬನೂ ನೂನನ ಮಗನಾದ ಯೆಹೋಶುವನೂ ಇವರನ್ನು ಬಿಟ್ಟು ಒಬ್ಬನಾದರೂ ಉಳಿಯಲಿಲ್ಲ.

ಅಂಕೆಗಳ ಪುಸ್ತಕ 32:11

ಅವರು ನನ್ನನ್ನು ಪೂರ್ಣವಾಗಿ ಹಿಂಬಾಲಿ ಸದೆ ಇರುವದರಿಂದ ನಾನು ಅಬ್ರಹಾಮ್‌ ಇಸಾಕ್‌ ಯಾಕೋಬರಿಗೆ ಪ್ರಮಾಣಮಾಡಿದ ದೇಶವನ್ನು ಐಗುಪ್ತದೊಳಗಿಂದ ಏರಿಬಂದ ಇಪ್ಪತ್ತು ವರುಷವೂ ಅದಕ್ಕಿಂತ ಅಧಿಕವಾದ ಪ್ರಾಯವುಳ್ಳ ಜನರಲ್ಲಿ

ದ್ವಿತೀಯೋಪದೇಶಕಾಂಡ 1:35

ನಿಶ್ಚಯವಾಗಿ ಕೆಟ್ಟಸಂತತಿಯಾದ ಈ ಮನುಷ್ಯರಲ್ಲಿ ಒಬ್ಬನಾದರೂ ನಾನು ನಿಮ್ಮ ಪಿತೃಗಳಿಗೆ ಕೊಡುತ್ತೇನೆಂದು ಪ್ರಮಾಣ ಮಾಡಿದ ಆ ಒಳ್ಳೇ ದೇಶವನ್ನು ನೋಡುವದಿಲ್ಲ.

ದ್ವಿತೀಯೋಪದೇಶಕಾಂಡ 32:40

ನಾನು ಆಕಾಶಕ್ಕೆ ನನ್ನ ಕೈಯನ್ನು ಎತ್ತಿ--ನಾನು ನಿತ್ಯವಾಗಿ ಬದುಕುತ್ತೇನೆಂದು ಹೇಳುತ್ತೇನೆ.

ಕೀರ್ತನೆಗಳು 90:8

ನಮ್ಮ ಅಕ್ರಮಗಳನ್ನು ನಿನ್ನ ಮುಂದೆಯೂ ನಮ್ಮ ಮರೆಯಾದ ಪಾಪಗಳನ್ನು ನಿನ್ನ ಮುಖದ ಬೆಳಕಿನಲ್ಲಿಯೂ ಇಟ್ಟಿದ್ದೀ.

ಕೀರ್ತನೆಗಳು 106:26

ಆದದರಿಂದ ಅವರನ್ನು ಅರಣ್ಯದಲ್ಲಿ ಕೆಡವುವದಕ್ಕೂ

ಹೆಬ್ರಿಯರಿಗೆ 3:17

ಆದರೆ ನಾಲ್ವತ್ತು ವರುಷ ಆತನು ಯಾರಮೇಲೆ ಸಂತಾಪಗೊಂಡನು? ಪಾಪ ಮಾಡಿದವರ ಮೇಲೆ ಅಲ್ಲವೇ? ಅವರ ಶವಗಳು ಅರಣ್ಯದಲ್ಲಿ ಬಿದ್ದವಲ್ಲಾ!

Interlinear

Choose Theme