Home Bibles ☰ Books ಅಂಕೆಗಳ ಪುಸ್ತಕ 1:26 · ಕನ್ನಡ ಬೈಬಲ್
ಅಂಕೆಗಳ ಪುಸ್ತಕ 1:26 · ಕನ್ನಡ ಬೈಬಲ್

ಯೂದನ ಮಕ್ಕಳು, ಅವರ ಗೋತ್ರಗಳ ಪ್ರಕಾರ ವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು

Cross references

ಆದಿಕಾಂಡ 29:35

ಆಕೆಯು ಮತ್ತೆ ಗರ್ಭಿಣಿಯಾಗಿ ಮಗನನ್ನು ಹೆತ್ತು--ಈಗ ನಾನು ಕರ್ತನನ್ನು ಸ್ತುತಿಸುವೆನು ಎಂದು ಹೇಳಿ ಅವನಿಗೆ ಯೆಹೂದನೆಂದು ಹೆಸರಿಟ್ಟಳು. ಆಕೆಯು ಹೆರುವದು ನಿಂತುಹೋಯಿತು.

ಆದಿಕಾಂಡ 46:12

ಯೆಹೂದನ ಮಕ್ಕಳು: ಏರ್‌ ಓನಾನ್‌ ಶೇಲಾಹ ಪೆರೆಚ್‌ ಜೆರಹ. ಆದರೆ ಏರನೂ ಓನಾನನೂ ಕಾನಾನ್‌ ದೇಶದಲ್ಲಿ ಸತ್ತರು. ಪೆರೆಚನ ಮಕ್ಕಳು: ಹೆಚ್ರೋನ್‌ ಹಾಮೂಲ್‌ ಎಂಬವರು.

ಆದಿಕಾಂಡ 49:8

ಯೆಹೂದನೇ, ನಿನ್ನ ಸಹೋದರರು ನಿನ್ನನ್ನು ಹೊಗಳು ವರು. ನಿನ್ನ ಕೈ ನಿನ್ನ ಶತ್ರುಗಳ ಕುತ್ತಿಗೆಯ ಮೇಲಿರುವದು, ನಿನ್ನ ತಂದೆಯ ಮಕ್ಕಳು ನಿನಗೆ ಅಡ್ಡ ಬೀಳುವರು.

ಅಂಕೆಗಳ ಪುಸ್ತಕ 2:3

ಪೂರ್ವ ದಿಕ್ಕಿನಲ್ಲಿ ಸೂರ್ಯೋದಯದ ಕಡೆಗೆ ಇಳುಕೊಳ್ಳುವವರು ಅವರವರ ಸೈನ್ಯಗಳ ಪ್ರಕಾರ ಯೆಹೂದನ ದಂಡಿನ ಧ್ವಜವು; ಯೆಹೂದನ ಮಕ್ಕಳಿಗೆ ಅವ್ಮೆಾನಾದಾಬನ ಮಗನಾದ ನಹಶೋನನು ಸೈನ್ಯಾಧಿಪತಿ.

ಅಂಕೆಗಳ ಪುಸ್ತಕ 26:19

ಯೆಹೂದನ ಕುಮಾರರು: ಏರನೂ ಓನಾನನೂ; ಆದರೆ ಏರನೂ ಓನಾನನೂ ಕಾನಾನ್‌ ದೇಶದಲ್ಲಿ ಸತ್ತರು.

2 ಸಮುವೇಲ 24:9

ಯೋವಾಬನು ಅರಸನಿಗೆ ಕೊಟ್ಟ ಜನರ ಒಟ್ಟು ಲೆಕ್ಕವೇನಂದರೆ, ಇಸ್ರಾಯೇಲ್ಯರಲ್ಲಿ ಕತ್ತಿ ಹಿಡಿಯತಕ್ಕ ಪರಾಕ್ರಮವುಳ್ಳ ಎಂಟು ಲಕ್ಷ ಮಂದಿ ಇದ್ದರು. ಯೆಹೂದದ ಜನರು ಐದು ಲಕ್ಷ ಮಂದಿಯಾಗಿದ್ದರು.

1 ದಿನವೃತ್ತಾಂತ 5:2

ಯೆಹೂದನು ತನ್ನ ಸಹೋದರರಿಗಿಂತ ಪ್ರಬಲವುಳ್ಳವನಾದನು. ಅವ ನಿಂದ ಮುಖ್ಯ ಅಧಿಕಾರಿಯು ಹುಟ್ಟಿದನು. ಆದರೆ ಚೊಚ್ಚಲತನ ಯೋಸೆಫನದಾಗಿತ್ತು).

2 ದಿನವೃತ್ತಾಂತ 17:14

ತಮ್ಮ ಪಿತೃಗಳ ಮನೆಯ ಪ್ರಕಾರ ವಾಗಿರುವ ಅವರ ಲೆಕ್ಕವೇನಂದರೆ, ಯೆಹೂದದ ಸಹಸ್ರಗಳ ಅಧಿಪತಿಗಳಲ್ಲಿ ಅದ್ನನು ಮುಖ್ಯಸ್ಥನಾಗಿ ದ್ದನು; ಅವನ ಸಂಗಡ ಪರಾಕ್ರಮಶಾಲಿಗಳು ಮೂರು ಲಕ್ಷಮಂದಿ ಇದ್ದರು.

ಮತ್ತಾಯ 1:2

ಅಬ್ರಹಾಮನಿಂದ ಇಸಾಕನು ಹುಟ್ಟಿದನು; ಇಸಾಕ ನಿಂದ ಯಾಕೋಬನು ಹುಟ್ಟಿದನು; ಯಾಕೋಬ ನಿಂದ ಯೂದನೂ ಅವನ ಸಹೋದರರೂ ಹುಟ್ಟಿ ದರು;

Interlinear

Choose Theme