ನೀನು ಅಬ್ರಾಮನನ್ನು ಆದು ಕೊಂಡ ದೇವರಾಗಿರುವ ಕರ್ತನು. ನೀನು ಅವನನ್ನು ಊರ್ ಎಂಬ ಕಸ್ದೀಯರ ಪಟ್ಟಣದಿಂದ ಹೊರಗೆ ಬರಮಾಡಿ ಅವನಿಗೆ ಅಬ್ರಹಾಮ್ ಎಂದು ಹೆಸರಿಟ್ಟು
Cross references
ತೆರಹನು ತನ್ನ ಮಗನಾದ ಅಬ್ರಾಮನನ್ನೂ ತನ್ನ ಮೊಮ್ಮಗನೂ ಹಾರಾನನ ಮಗನೂ ಆಗಿದ್ದ ಲೋಟನನ್ನೂ ತನ್ನ ಸೊಸೆಯಾದ ಅಬ್ರಾಮನ ಹೆಂಡತಿ ಸಾರಯಳನ್ನೂ ಕರಕೊಂಡು ಕಾನಾನ್ ದೇಶಕ್ಕೆ ಹೋಗು ವದಕ್ಕಾಗಿ ಕಲ್ದೀಯರ ಊರ್ ಅನ್ನು ಬಿಟ್ಟು ಅವರು ಹಾರಾನಿಗೆ ಬಂದು ಅಲ್ಲಿ ವಾಸವಾಗಿದ್ದರು.ತೆರಹನ ದಿನಗಳು ಒಟ್ಟು ಇನ್ನೂರ ಐದು ವರುಷಗಳಾಗಿದ್ದವು. ತರುವಾಯ ತೆರಹನು ಹಾರಾನಿನಲ್ಲಿ ಸತ್ತನು.
ಆಗ ಕರ್ತನು ಅಬ್ರಾಮನಿಗೆ--ನೀನು ನಿನ್ನ ದೇಶದೊಳಗಿಂದಲೂ ಬಂಧು ಗಳಿಂದಲೂ ನಿನ್ನ ತಂದೆಯ ಮನೆಯಿಂದಲೂ ಹೊರ ಬಂದು ನಾನು ನಿನಗೆ ತೋರಿಸುವ ದೇಶಕ್ಕೆ ಹೋಗು.
ಆತನು ಅವನಿಗೆ--ಈ ದೇಶವನ್ನು ಬಾಧ್ಯವಾಗಿ ನಿನಗೆ ಕೊಡುವದಕ್ಕೆ ಕಲ್ದೀಯರ ಊರ್‌ನಿಂದ ನಿನ್ನನ್ನು ಹೊರಗೆ ತಂದ ಕರ್ತನು ನಾನೇ ಎಂದು ಹೇಳಿದನು.
ಮಾತ್ರವಲ್ಲದೆ ನಿನ್ನ ಹೆಸರು ಇನ್ನು ಅಬ್ರಾಮ ಎಂದು ಕರೆಯಲ್ಪಡದೆ ನಿನ್ನ ಹೆಸರು ಅಬ್ರಹಾಮನೆಂದು ಹೆಸರಿರುವದು; ಯಾಕಂದರೆ ನಾನು ನಿನ್ನನ್ನು ಅನೇಕ ಜನಾಂಗಗಳ ತಂದೆಯನ್ನಾಗಿ ಮಾಡಿದ್ದೇನೆ.
ಆದರೂ ನಿನ್ನ ಪಿತೃಗಳ ಮೇಲೆ ಕರ್ತನು ತಾನೇ ಮನಸ್ಸಿಟ್ಟು ಅವರನ್ನು ಪ್ರೀತಿಮಾಡಿ ಅವರ ಸಂತಾನವಾಗಿರುವ ನಿಮ್ಮನ್ನು ಈಹೊತ್ತು ಇರುವ ಪ್ರಕಾರ ಎಲ್ಲಾ ಜನಗಳೊಳಗಿಂದ ಆದುಕೊಂಡನು.
ಯೆಹೋಶುವನು ಎಲ್ಲಾ ಜನರಿಗೆ--ಇಸ್ರಾಯೇಲಿನ ದೇವರಾದ ಕರ್ತನು ಹೇಳುವದೇನಂದರೆ--ಪೂರ್ವ ದಲ್ಲಿ ನಿಮ್ಮ ತಂದೆಗಳು, ಅಬ್ರಹಾಮನೂ ನಾಹೋ ರನೂ ಅವರ ತಂದೆಯಾದ ತೆರಹನೂ ನದಿಯ ಆಚೆ ವಾಸವಾಗಿದ್ದು ಅನ್ಯದೇವರುಗಳನ್ನು ಆರಾಧಿಸುತ್ತಿದ್ದರು.
ಅಬ್ರಹಾಮನೆಂಬ ಅಬ್ರಾಮನು.
ಆದರೆ ನನ್ನ ಸೇವಕನಾದ ಇಸ್ರಾಯೇಲೇ, ನಾನು ಆದುಕೊಂಡ ಯಾಕೋಬೇ, ನನ್ನ ಸ್ನೇಹಿತನಾದ ಅಬ್ರಹಾಮನ ಸಂತತಿಯೇ;
ನಿನ್ನನ್ನು ಕಟ್ಟಕಡೆಗಳಿಂದ ಆರಿಸಿಕೊಂಡು, ಅದರ ಕೊನೆಯಿಂದ ಕರೆದು--ನೀನು ನನ್ನ ಸೇವಕನು, ನಿನ್ನನ್ನು ನಾನು ಆದುಕೊಂಡಿದ್ದೇನೆ. ನಿನ್ನನ್ನು ತಳ್ಳಿಬಿಡುವದಿಲ್ಲ.
ನಿಮ್ಮ ತಂದೆಯಾದ ಅಬ್ರಹಾಮನನ್ನು ಮತ್ತು ನಿಮ್ಮನ್ನು ಹೆತ್ತ ಸಾರಳನ್ನು ದೃಷ್ಟಿಸಿರಿ; ನಾನು ಅವನೊಬ್ಬನನ್ನೇ ಕರೆದು ಆಶೀರ್ವ ದಿಸಿ ವೃದ್ಧಿಗೊಳಿಸಿದೆನು.
ಅದಕ್ಕವನು--ಜನರೇ, ಸಹೋದರರೇ, ತಂದೆಗಳೇ, ಕಿವಿಗೊಡಿರಿ; ನಮ್ಮ ತಂದೆಯಾದ ಅಬ್ರಹಾಮನು ಖಾರಾನಿನಲ್ಲಿ ವಾಸಮಾಡಿದ್ದಕ್ಕಿಂತ ಮುಂಚೆ ಅವನು ಮೆಸೊಪೊತಾಮ್ಯದಲ್ಲಿದ್ದಾಗ ಮಹಿಮೆಯುಳ್ಳ ದೇವರು ಪ್ರತ್ಯಕ್ಷನಾಗಿ ಅವನಿಗೆ--