Home Bibles ನೆಹೆಮ್ಯ 8:2 · ಕನ್ನಡ ಬೈಬಲ್
ನೆಹೆಮ್ಯ 8:2 · ಕನ್ನಡ ಬೈಬಲ್

ಹೀಗೆಯೇ ಏಳನೇ ತಿಂಗಳಿನ ಮೊದಲನೇ ದಿವಸದಲ್ಲಿ ಸಭೆಯ ಸ್ತ್ರೀ ಪುರುಷರ ಮುಂದೆಯೂ ಗ್ರಹಿಕೆಯಿಂದ ಕೇಳುವವರೆಲ್ಲರ ಮುಂದೆಯೂ

Cross references

ಲೇವ್ಯಕಾಂಡ 23:24

ಇಸ್ರಾಯೇಲ್‌ ಮಕ್ಕಳೊಂದಿಗೆ ಮಾತ ನಾಡಿ--ಏಳನೆಯ ತಿಂಗಳಿನ ಮೊದಲನೆಯ ದಿವಸ ದಲ್ಲಿ ನಿಮಗೆ ತುತೂರಿಗಳನ್ನು ಊದುವ ಜ್ಞಾಪಕಾರ್ಥ ವಾದ ಸಬ್ಬತ್ತೂ ಪರಿಶುದ್ಧ ಸಭೆಯ ಕೂಟವೂ ಇರ ಬೇಕು.

ಅಂಕೆಗಳ ಪುಸ್ತಕ 29:1

ಏಳನೇ ತಿಂಗಳಿನ ಮೊದಲನೇ ದಿವಸದಲ್ಲಿ ನೀವು ಪರಿಶುದ್ಧ ಸಭೆಯಾಗಿರಬೇಕು; ಕಷ್ಟಕರವಾದ ಕೆಲಸವನ್ನು ನೀವು ಮಾಡಬಾರದು; ಅದು ನಿಮಗೆ ತುತೂರಿಗಳನ್ನು ಊದುವ ದಿವಸ ವಾಗಿರುವದು.

ದ್ವಿತೀಯೋಪದೇಶಕಾಂಡ 17:18

ಅವನು ತನ್ನ ರಾಜ್ಯದ ಸಿಂಹಾಸನದಲ್ಲಿ ಕೂತು ಕೊಳ್ಳುವಾಗ ಲೇವಿಯರಾದ ಯಾಜಕರ ಮುಂದಿರುವ ಪುಸ್ತಕದಿಂದ ತನಗೆ ಈ ನ್ಯಾಯಪ್ರಮಾಣದ ಪ್ರತಿ ಯನ್ನು ಬರೆಯಿಸಿಕೊಳ್ಳಬೇಕು.

ದ್ವಿತೀಯೋಪದೇಶಕಾಂಡ 31:9

ಇದಲ್ಲದೆ ಮೋಶೆಯು ಈ ನ್ಯಾಯಪ್ರಮಾಣವನ್ನು ಬರೆದು ಕರ್ತನ ಒಡಂಬಡಿಕೆಯ ಮಂಜೂಷವನ್ನು ಹೊರುವಂಥ ಲೇವಿಯ ಕುಮಾರರಾದ ಯಾಜಕರಿಗೂ ಇಸ್ರಾಯೇಲಿನ ಎಲ್ಲಾ ಹಿರಿಯರಿಗೂ ಒಪ್ಪಿಸಿದನು.

ಯೆಹೋಶುವ 8:35

ಮೋಶೆಯು ಆಜ್ಞಾಪಿಸಿದ್ದರಲ್ಲಿ ಒಂದನ್ನೂ ಬಿಡದೆ ಇಸ್ರಾಯೇಲಿನ ಸಭೆಗೆಲ್ಲಾ ಅಂದರೆ ಸ್ತ್ರೀಯ ರಿಗೂ ಚಿಕ್ಕವರಿಗೂ ಅವರಲ್ಲಿ ಪರಿಚಯವಿರುವ ಅವರ ಪರಕೀಯರಿಗೂ ಓದಿದನು.

2 ದಿನವೃತ್ತಾಂತ 17:7

ಇದಲ್ಲದೆ ಅವನ ಆಳ್ವಿಕೆಯ ಮೂರನೇ ವರುಷ ದಲ್ಲಿ ಅವನು ತನ್ನ ಪ್ರಧಾನರಾದ ಬೆನ್ಹೈಲನನ್ನೂ ಓಬದ್ಯನನ್ನೂ ಜೆಕರ್ಯನನ್ನೂ ನೆತನೇಲನನ್ನೂ ವಿಾಕಾ ಯನನ್ನೂ ಯೆಹೂದದ ಪಟ್ಟಣಗಳಲ್ಲಿ ಬೋಧಿಸಲು ಕರೇಕಳುಹಿಸಿದನು.

ನೆಹೆಮ್ಯ 8:18

ಎಜ್ರನು ಮೊದಲನೇ ದಿವಸದಿಂದ ಕಡೇ ದಿವಸದವರೆಗೂ ದಿನ ದಿನವೂ ದೇವರ ನ್ಯಾಯ ಪ್ರಮಾಣದ ಪುಸ್ತಕವನ್ನು ಓದುತ್ತಿದ್ದನು. ಹೀಗೆಯೇ ಅವರು ಏಳು ದಿವಸ ಹಬ್ಬವನ್ನು ಆಚರಿಸಿದರು. ಎಂಟನೇ ದಿವಸದಲ್ಲಿ ಪದ್ಧತಿಯ ಪ್ರಕಾರ ಪರಿಶುದ್ಧ ಸಭೆಯು ಸೇರಿತ್ತು.

ನೆಹೆಮ್ಯ 10:29

ಇವರು ತಮ್ಮ ಸಹೋದರರಾದ ತಮ್ಮ ಮುಖ್ಯಸ್ಥರ ಸಂಗಡ ಕೂಡಿಕೊಂಡು--ದೇವರ ಸೇವಕನಾದ ಮೋಶೆಯ ಕೈಯಿಂದ ಕೊಟ್ಟ ದೇವರ ನ್ಯಾಯಪ್ರಮಾಣದಲ್ಲಿ ನಡೆಯುತ್ತೇವೆಂದೂ ಕರ್ತ ನಾದ ನಮ್ಮ ದೇವರ ಆಜ್ಞೆಗಳನ್ನೂ ಆತನ ನ್ಯಾಯ ಗಳನ್ನೂ ಆತನ ಕಟ್ಟಳೆಗಳನ್ನೂ ಎಲ್ಲವನ್ನೂ ಕೈಕೊಂಡು ಮಾಡುತ್ತೇವೆಂದೂ;

ನೆಹೆಮ್ಯ 13:1

ಅದೇ ದಿವಸದಲ್ಲಿ ಜನರು ಕೇಳುವ ಹಾಗೆ ಮೋಶೆಯ ಪುಸ್ತಕದೊಳಗೆ ಓದುವಾಗ ಅಮ್ಮೋನ್ಯರೂ ಮೋವಾಬ್ಯರೂ ಎಂದಿಗೂ ದೇವರ ಸಭೆಗೆ ಬರಕೂಡದೆಂದು ಅದರಲ್ಲಿ ಬರೆದದ್ದು ಸಿಕ್ಕಿತು.

ಯೆಶಾಯ 28:9

ಈತನು ಯಾರಿಗೆ ಜ್ಞಾನವನ್ನು ಬೋಧಿಸುತ್ತಾನೆ? ಯಾರಿಗೆ ಬೋಧನೆಯನ್ನು ತಿಳುಕೊಳ್ಳುವ ಹಾಗೆ ಮಾಡುತ್ತಾನೆ? ಮೊಲೆಬಿಟ್ಟ ಕೂಸುಗಳಿಗೋ? ಎದೆ ಬಿಟ್ಟ ಮಕ್ಕಳಿಗೋ?

ಮಲಾಕಿ 2:7

ಯಾಜಕನ ತುಟಿಗಳು ತಿಳುವಳಿಕೆಯನ್ನು ಕಾಪಾಡತಕ್ಕದ್ದು, ನ್ಯಾಯಪ್ರಮಾಣ ವನ್ನು ಅವನ ಬಾಯಲ್ಲಿ ಹುಡುಕತಕ್ಕದ್ದು; ಯಾಕಂದರೆ ಅವನು ಸೈನ್ಯಗಳ ಕರ್ತನ ಸೇವಕನೇ.

ಅಪೋಸ್ತಲರ ಕೃತ್ಯಗಳು 15:21

ಯಾಕಂದರೆ ಪುರಾತನ ಕಾಲದಿಂದ ಎಲ್ಲಾ ಪಟ್ಟಣಗಳಲ್ಲಿ ಮೋಶೆಯ ಗ್ರಂಥವನ್ನು ಬೋಧಿಸುವ ವರು ಇದ್ದಾರೆ; ಅದು ಪ್ರತಿ ಸಬ್ಬತ್‌ ದಿನವೂ ಸಭಾಮಂದಿರಗಳಲ್ಲಿ ಪಾರಾಯಣವಾಗುತ್ತದಲ್ಲಾ ಎಂದು ಹೇಳಿದನು.

Interlinear

Choose Theme