ಆಗ ನಾನು ಅವರಿಗೆ--ಬಿಸಿಲು ಏರುವ ಪರ್ಯಂತರಕ್ಕೂ ಯೆರೂಸಲೇಮಿನ ಬಾಗಲುಗಳನ್ನು ತೆರೆಯಬಾರದು; ಇದಲ್ಲದೆ ನೀವು ಸವಿಾಪದಲ್ಲಿ ನಿಂತಿರುವಾಗ, ಕದಗ ಳನ್ನು ಮುಚ್ಚಿ ಅಗುಳಿಗಳನ್ನು ಹಾಕಿರಿ; ಯೆರೂಸಲೇಮಿನ ನಿವಾಸಿಗಳಿಂದ ಪ್ರತಿ ಮನುಷ್ಯನು ತನ್ನ ಕಾವಲಿನ ಲ್ಲಿಯೂ ಪ್ರತಿ ಮನುಷ್ಯನು ತನ್ನ ಮನೆಗೆ ಎದುರಾ ಗಿಯೂ ಕಾವಲಾಗಿರಲು ನೇಮಿಸಿರೆಂದು ಹೇಳಿದೆನು.
Cross references
ಇವರ ತರುವಾಯ ಬೆನ್ಯಾವಿಾನನೂ ಹಷ್ಷೂಬನೂ ತಮ್ಮ ಮನೆಗೆ ಎದು ರಾಗಿರುವದನ್ನು ಭದ್ರಪಡಿಸಿದರು. ಇವರ ತರುವಾಯ ಅನನ್ಯನ ಮಗನಾದ ಮಾಸೇಯನ ಮಗನಾದ ಅಜ ರ್ಯನು ತನ್ನ ಮನೆಯ ಬಳಿಯಲ್ಲಿರುವದನ್ನು ಭದ್ರ ಪಡಿಸಿದನು.
ಯಾಜಕರು ಕುದುರೆ ಬಾಗಲು ಮೊದಲ್ಗೊಂಡು ತಮ್ಮ ತಮ್ಮ ಮನೆಗೆದುರಾಗಿರುವದನ್ನು ಭದ್ರಪಡಿ ಸಿದರು.
ಆದಕಾರಣ ಸಬ್ಬತ್ ಆಗುವದಕ್ಕಿಂತ ಮುಂಚೆ ಯೆರೂಸಲೇಮಿನ ಬಾಗಲು ಗಳಲ್ಲಿ ಕತ್ತಲು ಆಗಲಾರಂಭಿಸಿದಾಗ ಬಾಗಲುಗಳನ್ನು ಹಾಕುವ ಹಾಗೆಯೂ ಸಬ್ಬತ್ ದಿವಸವು ತೀರುವ ವರೆಗೆ ಅವುಗಳನ್ನು ತೆರೆಯದೆ ಇರುವ ಹಾಗೆಯೂ ನಾನು ಅವರಿಗೆ ಹೇಳಿದೆನು. ಮತ್ತು ಸಬ್ಬತ್ ದಿವಸದಲ್ಲಿ ಹೊರೆ ಏನಾದರೂ ಒಳಗೆ ತಾರದ ಹಾಗೆ ನನ್ನ ಸೇವಕರಲ್ಲಿ ಕೆಲವರನ್ನು ಬಾಗಲುಗಳ ಬಳಿಯಲ್ಲಿ ಇಟ್ಟೆನು.
ಕರ್ತನು ಮನೆಯನ್ನು ಕಟ್ಟದಿದ್ದರೆ, ಅದನ್ನು ಕಟ್ಟುವವರು ವ್ಯರ್ಥವಾಗಿ ಕಷ್ಟಪಡುತ್ತಾರೆ; ಕರ್ತನು ಪಟ್ಟಣವನ್ನು ಕಾಪಾಡದೆ ಇದ್ದರೆ ಅದನ್ನು ಕಾಪಾಡುವವನು ವ್ಯರ್ಥವಾಗಿ ಎಚ್ಚರ ವಾಗಿರುತ್ತಾನೆ.
ಇಗೋ, ತೋಳಗಳ ಮಧ್ಯದಲ್ಲಿ ಕುರಿಗಳನ್ನು ಕಳು ಹಿಸುವಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ. ಆದದ ರಿಂದ ನೀವು ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳಾಗಿರ್ರಿ.