Home Bibles ☰ Books ನೆಹೆಮ್ಯ 5:8 · ಕನ್ನಡ ಬೈಬಲ್
ನೆಹೆಮ್ಯ 5:8 · ಕನ್ನಡ ಬೈಬಲ್

ಅವ ರಿಗೆ--ಅನ್ಯರಿಗೆ ಮಾರಲ್ಪಟ್ಟ ಯೆಹೂದ್ಯರಾದ ನಮ್ಮ ಸಹೋದರರನ್ನು ನಾವು ನಮಗೆ ಶಕ್ತಿ ಇದ್ದ ಹಾಗೆ ವಿಮೋಚಿಸಿದೆವು. ನೀವು ನಿಮ್ಮ ಸಹೋದರರನ್ನು ಮಾರಿ ಬಿಡುವಿರೋ? ಇಲ್ಲವೆ ಅವರು ನಮಗೆ ಮಾರ ಲ್ಪಡುವರೋ ಅಂದೆನು. ಆಗ ಅವರು ಮೌನವಾಗಿ ದ್ದರು; ಅವರಿಗೆ ಮಾತು ಇಲ್ಲದೆ ಹೋಯಿತು.

Cross references

ನಿರ್ಗಮಕಾಂಡ 21:16

ಮನುಷ್ಯನನ್ನು ಕದ್ದವನಿಗೆ ಅವನನ್ನು ಮಾರಿದರೂ ತನ್ನಲ್ಲಿಯೇ ಇಟ್ಟುಕೊಂಡರೂ ಅವನು ಖಂಡಿತವಾಗಿ ಸಾಯಬೇಕು.

ಲೇವ್ಯಕಾಂಡ 25:47

ನಿನ್ನ ಬಳಿಯಲ್ಲಿರುವ ಪರಕೀಯ ಇಲ್ಲವೆ ಪ್ರವಾ ಸಿಯ ಸಂಪತ್ತು ಹೆಚ್ಚಾಗಲಾಗಿ ನಿನ್ನ ಸಹೋದರನು ಅವನ ಬಳಿಯಲ್ಲಿ ಬಡವನಾಗಿ ನಿನ್ನ ಬಳಿಯಲ್ಲಿರುವ ಪರಕೀಯನಾಗಲಿ ಪ್ರವಾಸಿಯಾಗಲಿ ಪರಕೀಯನ ಸಂತತಿಯಲ್ಲಿ ಹುಟ್ಟಿದವನಿಗೆ ತನ್ನನ್ನು ಮಾರಿಕೊಂಡರೆ

ಲೇವ್ಯಕಾಂಡ 25:48

ಹೀಗೆ ಅವನು ತನ್ನನ್ನು ಮಾರಿಕೊಂಡ ಮೇಲೆ ಅವನು ತಿರಿಗಿ ವಿಮೋಚಿಸಲ್ಪಡಬಹುದು. ಅವನ ಸಹೋದರರಲ್ಲಿ ಒಬ್ಬನು ಅವನನ್ನು ವಿಮೋಚಿಸ ಬಹುದು.

ದ್ವಿತೀಯೋಪದೇಶಕಾಂಡ 24:7

ಒಬ್ಬನು ತನ್ನ ಸಹೋದರರಾದ ಇಸ್ರಾಯೇಲ್‌ ಮಕ್ಕಳಲ್ಲಿ ಒಬ್ಬನನ್ನು ಕದ್ದು ವ್ಯಾಪಾರಮಾಡಿ ಮಾರಿದ ವನಾಗಿ ಸಿಕ್ಕಿದರೆ ಆ ಕಳ್ಳನು ಸಾಯಬೇಕು; ಹೀಗೆ ಕೆಟ್ಟದ್ದನ್ನು ನಿನ್ನ ಮಧ್ಯದಲ್ಲಿಂದ ತೆಗೆದುಹಾಕಬೇಕು.

ಯೋಬ 29:10

ಘನವುಳ್ಳವರು ಮೌನವಾದರು; ಅವರ ನಾಲಿಗೆ ಅವರ ಅಂಗಳಕ್ಕೆ ಅಂಟಿತು.

ಯೋಬ 32:15

ಅವರು ವಿಸ್ಮಯಗೊಂಡು ಇನ್ನು ಉತ್ತರ ಕೊಡ ಲಿಲ್ಲ; ಅವರು ಮಾತನಾಡುವದನ್ನು ನಿಲ್ಲಿಸಿದರು.

ಮತ್ತಾಯ 22:12

ಅವನು ಆ ಮನುಷ್ಯನಿಗೆ--ಸ್ನೇಹಿತನೇ, ಮದುವೆಯ ಉಡುಪಿಲ್ಲದೆ ನೀನು ಒಳಗೆ ಹೇಗೆ ಬಂದಿ ಎಂದು ಕೇಳಲು ಅವನು ಸುಮ್ಮನಿದ್ದನು.

ಮತ್ತಾಯ 25:15

ಅವನು ಒಬ್ಬನಿಗೆ ಐದು ತಲಾಂತುಗಳನ್ನು ಇನ್ನೊಬ್ಬನಿಗೆ ಎರಡು, ಮತ್ತೊಬ್ಬನಿಗೆ ಒಂದು, ಹೀಗೆ ಅವನವನ ಸಾಮರ್ಥ್ಯದ ಪ್ರಕಾರ ಕೊಟ್ಟು ತಕ್ಷಣವೇ ಪ್ರಯಾಣ ಮಾಡಿದನು.

ಮತ್ತಾಯ 25:29

ಇದ್ದ ಪ್ರತಿ ಯೊಬ್ಬನಿಗೆ ಕೊಡಲ್ಪಡುವದು ಮತ್ತು ಅವನಿಗೆ ಸಮೃದ್ಧಿ ಯಾಗುವದು; ಇಲ್ಲದವನ ಕಡೆಯಿಂದ ಅವನಿಗೆ ಇದ್ದದ್ದೂ ತೆಗೆಯಲ್ಪಡುವದು.

ರೋಮಾಪುರದವರಿಗೆ 3:19

ಪ್ರತಿಯೊಂದು ಬಾಯಿ ಮುಚ್ಚಿ ಹೋಗುವಂತೆಯೂ ಲೋಕವೆಲ್ಲಾ ದೇವರ ಮುಂದೆ ದೋಷಿಯಾಗಿರುವಂತೆಯೂ ನ್ಯಾಯ ಪ್ರಮಾಣವು ಹೇಳುವವುಗಳನ್ನು ನ್ಯಾಯಪ್ರಮಾಣಕ್ಕೆ ಒಳಗಾದವರಿಗೆ ಹೇಳುತ್ತದೆಯೆಂದು ನಾವು ಬಲ್ಲೆವು.

ರೋಮಾಪುರದವರಿಗೆ 14:15

ನಿನ್ನ ಆಹಾರದಿಂದ ನಿನ್ನ ಸಹೋದರನ ಮನಸ್ಸಿಗೆ ನೋವಾದರೆ ಪ್ರೀತಿಗೆ ತಕ್ಕಂತೆ ನೀನು ಇನ್ನು ನಡೆಯುವ ವನಲ್ಲ. ಯಾವನಿಗೋಸ್ಕರ ಕ್ರಿಸ್ತನು ಸತ್ತನೋ ಅವನನ್ನು ನಿನ್ನ ಆಹಾರದಿಂದ ಕೆಡಿಸಬಾರದು.

1 ಕೊರಿಂಥದವರಿಗೆ 8:11

ಹೀಗೆ ಆ ಬಲಹೀನನಾದ ಸಹೋದರನು ನಿನ್ನ ಜ್ಞಾನದಿಂದ ನಾಶವಾಗುತ್ತಾನೆ; ಅವನಿಗಾಗಿಯೂ ಕ್ರಿಸ್ತನು ತನ್ನ ಪ್ರಾಣಕೊಟ್ಟನಲ್ಲವೇ?

2 ಕೊರಿಂಥದವರಿಗೆ 8:12

ಒಬ್ಬನು ಕೊಡುವದಕ್ಕೆ ಮನಸ್ಸಿದ್ದರೆ ಅವನು ತನಗೆ ಇಲ್ಲದ್ದಕ್ಕನುಸಾರವಾಗಿ ಅಲ್ಲ, ಆದರೆ ಇರುವದಕ್ಕನುಸಾರವಾಗಿಯೇ ಕೊಟ್ಟರೆ ಅದು ಸಮರ್ಪ ಕವಾಗಿರುವದು.

ಗಲಾತ್ಯದವರಿಗೆ 6:10

ಆದದ ರಿಂದ ಸಮಯವಿರಲಾಗಿ ಎಲ್ಲರಿಗೆ ಒಳ್ಳೇದನ್ನು ಮಾಡೋಣ; ಮುಖ್ಯವಾಗಿ ವಿಶ್ವಾಸದ ಮನೆತನ ದವರಿಗೆ ಮಾಡೋಣ.

Interlinear

Choose Theme