Home Bibles ನೆಹೆಮ್ಯ 4:20 · ಕನ್ನಡ ಬೈಬಲ್
ನೆಹೆಮ್ಯ 4:20 · ಕನ್ನಡ ಬೈಬಲ್

ನೀವು ಎಲ್ಲಿ ತುತೂರಿಯ ಶಬ್ದವನ್ನು ಕೇಳುವಿರೋ ಅಲ್ಲಿ ಬಂದು ನಮ್ಮ ಸಂಗಡ ಕೂಡಿಕೊಳ್ಳಿರಿ. ನಮ್ಮ ದೇವರು ನಮಗೋಸ್ಕರ ಯುದ್ಧಮಾಡುವನು ಎಂದು ಹೇಳಿದೆನು.

Cross references

ನಿರ್ಗಮಕಾಂಡ 14:14

ಕರ್ತನು ನಿಮ ಗೋಸ್ಕರ ಯುದ್ಧಮಾಡುವನು; ಆದರೆ ನೀವು ಸಮಾಧಾನವಾಗಿರ್ರಿ ಅಂದನು.

ನಿರ್ಗಮಕಾಂಡ 14:25

ಅವರ ರಥಗಳ ಚಕ್ರಗಳನ್ನು ತೆಗೆದುಬಿಟ್ಟದ್ದರಿಂದ ಐಗುಪ್ತ್ಯರು ಕಷ್ಟದಿಂದ ಹೋಗು ವಂತೆ ಮಾಡಿದನು. ಆಗ--ಇಸ್ರಾಯೇಲಿನ ಎದುರಿ ನಿಂದ ಓಡಿಹೋಗೋಣ. ಯಾಕಂದರೆ ಕರ್ತನು ಐಗುಪ್ತ್ಯರಿಗೆ ವಿರೋಧವಾಗಿ ಅವರಿಗೋಸ್ಕರ ಯುದ್ಧ ಮಾಡುತ್ತಾನೆಂದು ಹೇಳಿಕೊಂಡರು.

ದ್ವಿತೀಯೋಪದೇಶಕಾಂಡ 1:30

ನಿಮ್ಮ ಮುಂದೆ ಹೋಗುವ ನಿಮ್ಮ ದೇವರಾದ ಕರ್ತನು, ಆತನೇ ಐಗುಪ್ತದಲ್ಲಿ ನಿಮ್ಮ ಕಣ್ಣುಗಳ ಮುಂದೆಯೂ ಅರಣ್ಯದಲ್ಲಿಯೂ ನಿಮಗೆ ಮಾಡಿದ ಎಲ್ಲಾದರ ಪ್ರಕಾರ ನಿಮಗೋಸ್ಕರ ಯುದ್ಧಮಾಡುವನು.

ದ್ವಿತೀಯೋಪದೇಶಕಾಂಡ 3:22

ನೀವು ಅವುಗಳಿಗೆ ಭಯಪಡಬೇಡಿರಿ; ಯಾಕಂದರೆ ನಿಮ್ಮ ದೇವರಾದ ಕರ್ತನು ತಾನೇ ನಿಮಗೋಸ್ಕರ ಯುದ್ಧಮಾಡುತ್ತಾನೆ ಎಂಬದು.

ದ್ವಿತೀಯೋಪದೇಶಕಾಂಡ 20:4

ಯಾಕಂದರೆ ನಿಮ್ಮ ಶತ್ರುಗಳ ವಿರೋಧವಾಗಿ ನಿಮಗೋಸ್ಕರ ಯುದ್ಧಮಾಡಿ ನಿಮ್ಮನ್ನು ರಕ್ಷಿಸುವದಕ್ಕೆ ನಿಮ್ಮ ದೇವರಾದ ಕರ್ತನೇ ನಿಮ್ಮ ಸಂಗಡ ಹೋಗುತ್ತಾನೆ ಎಂದು ಹೇಳಬೇಕು.

ಯೆಹೋಶುವ 23:10

ನಿಮ್ಮಲ್ಲಿ ಇರುವ ಒಬ್ಬನು ಸಾವಿರ ಮಂದಿಯನ್ನು ಹಿಂದಟ್ಟುವನು. ನಿಮ್ಮ ದೇವರಾದ ಕರ್ತನು ನಿಮಗೆ ವಾಗ್ದಾನಮಾಡಿದ ಹಾಗೆ ಆತನೇ ನಿಮಗೋಸ್ಕರ ಯುದ್ಧಮಾಡುತ್ತಾನೆ.

1 ದಿನವೃತ್ತಾಂತ 19:12

ಅರಾಮ್ಯರು ನನಗಿಂತ ಬಲವುಳ್ಳವರಾಗಿದ್ದರೆ ನೀನು ನನಗೆ ಸಹಾಯ ಮಾಡಬೇಕು; ಅಮ್ಮೋನಿಯರು ನಿನಗಿಂತ ಬಲವುಳ್ಳ ವರಾಗಿದ್ದರೆ, ನಾನು ನಿನಗೆ ಸಹಾಯ ಮಾಡುವೆನು,

ಜೆಕರ್ಯ 14:3

ಆಗ ಕರ್ತನು ಹೊರಟು ಯುದ್ಧದ ದಿನದಲ್ಲಿ ಕಾದಾಟಮಾಡಿದ ಪ್ರಕಾರವೇ ಆ ಜನಾಂಗಗಳ ಸಂಗಡ ಆತನು ಕಾದಾಟ ಮಾಡುವನು.

Interlinear

Choose Theme