ನೆಹೆಮ್ಯ 3:29 · ಕನ್ನಡ ಬೈಬಲ್
ಇವರ ತರುವಾಯ ಇಮ್ಮೇರನ ಮಗನಾದ ಚಾದೋಕನು ತನ್ನ ಮನೆಗೆ ಎದುರಾಗಿರುವದನ್ನು ಭದ್ರ ಪಡಿಸಿದನು. ಇವನ ತರುವಾಯ ಮೂಡಣ ಬಾಗಲನ್ನು ಕಾಯುವ ಶೆಕನ್ಯನ ಮಗನಾದ ಶೆಮಾಯನು ಭದ್ರ ಪಡಿಸಿದನು.
Cross references
ಎಜ್ರಾ 2:37
ಇಮ್ಮೇರನ ಮಕ್ಕಳು -- ಸಾವಿರದ ಐವತ್ತೆರಡು ಮಂದಿಯು.
ಎಜ್ರಾ 10:2
ಆಗ ಎಲಾಮನ ಕುಮಾರರಲ್ಲಿ ಒಬ್ಬನಾದ ಯೆಹೀಯೇಲನ ಮಗನಾದ ಶೆಕೆನ್ಯನು ಎಜ್ರನಿಗೆ ಪ್ರತ್ತ್ಯುತ್ತರವಾಗಿ--ನಾವು ದೇಶದ ಜನಗಳಲ್ಲಿ ಅನ್ಯ ಸ್ತ್ರೀಯರನ್ನು ತೆಗೆದು ಕೊಂಡದ್ದರಿಂದ ನಮ್ಮ ದೇವರಿಗೆ ವಿರೋಧವಾಗಿ ಅಕೃತ್ಯಮಾಡಿದ್ದೇವೆ. ಆದಾಗ್ಯೂ ಈಗ ಈ ಕಾರ್ಯವನ್ನು ಕುರಿತು ಇಸ್ರಾಯೇಲ್ಯರಲ್ಲಿ ನಿರೀಕ್ಷೆ ಉಂಟು.
ನೆಹೆಮ್ಯ 7:40
ಇಮ್ಮೇ ರನ ಮಕ್ಕಳು ಸಾವಿರದ ಐವತ್ತೆರಡು ಮಂದಿಯು.
ನೆಹೆಮ್ಯ 10:8
ಮಾಜ್ಯನು, ಬಿಲ್ಗೈಯು, ಶೆಮಾಯನು, ಇವರು ಯಾಜಕರಾಗಿದ್ದರು.
ಯೆರೆಮಿಯ 19:2
ಆಗ ಪಷ್ಹೂರನು ಪ್ರವಾದಿಯಾದ ಯೆರೆವಿಾಯನನ್ನು ಹೊಡೆದು ಅವನನ್ನು ಕರ್ತನ ಆಲಯದ ಬಳಿಯಲ್ಲಿದ್ದ ಬೆನ್ಯಾವಿಾ ನನ ಮೇಲ್ಭಾಗಲಲ್ಲಿದ್ದ ಕೋಳದಲ್ಲಿ ಹಾಕಿಸಿದನು.