Home Bibles ನೆಹೆಮ್ಯ 2:1 · ಕನ್ನಡ ಬೈಬಲ್
ನೆಹೆಮ್ಯ 2:1 · ಕನ್ನಡ ಬೈಬಲ್

ಅರಸನಾದ ಅರ್ತಷಸ್ತನ ಇಪ್ಪತ್ತನೇವರುಷದ ನೀಸಾನ್‌ ತಿಂಗಳಲ್ಲಿ ಏನಾಯಿ ತಂದರೆ, ಅವನ ಮುಂದೆ ದ್ರಾಕ್ಷಾರಸವಿರುವಾಗ ನಾನು ಆ ದ್ರಾಕ್ಷಾರಸವನ್ನು ತಕ್ಕೊಂಡು ಅರಸನಿಗೆ ಕೊಟ್ಟೆನು. ಆದರೆ ಇದಕ್ಕೆ ಮುಂಚೆ ನಾನು ಅವನ ಸಮ್ಮುಖ ದಲ್ಲಿ ದುಃಖಿತನಾಗಿದ್ದದ್ದಿಲ್ಲ.

Cross references

ಆದಿಕಾಂಡ 40:11

ಫರೋಹನ ಪಾತ್ರೆಯು ನನ್ನ ಕೈಯಲ್ಲಿರಲಾಗಿ ನಾನು ಆ ದ್ರಾಕ್ಷೇ ಹಣ್ಣುಗಳನ್ನು ತೆಗೆದು ಫರೋಹನ ಪಾತ್ರೆಯಲ್ಲಿ ಹಿಂಡಿ ಆ ಪಾತ್ರೆಯನ್ನು ಫರೋಹನ ಕೈಯಲ್ಲಿ ಕೊಟ್ಟೆನು ಅಂದನು.

ಆದಿಕಾಂಡ 40:21

ಯೋಸೇಫನು ಅವರಿಗೆ ಅವರ ಕನಸಿನ ಅರ್ಥ ಹೇಳಿದಂತೆ ಮುಖ್ಯಪಾನದಾಯಕನನ್ನು ತಿರಿಗಿ ಉದ್ಯೋಗದಲ್ಲಿ ಇರಿಸಿದ್ದರಿಂದ ಅವನು ಫರೋ ಹನ ಕೈಗೆ ಪಾತ್ರೆಯನ್ನು ಕೊಡುವವನಾದನು.

ಎಜ್ರಾ 4:7

ಆದರೆ ಅರ್ತಷಸ್ತನ ದಿವಸಗಳಲ್ಲಿ ಬಿಷ್ಲಾಮನೂ ಮಿತ್ರದಾತನೂ ಟಾಬೆಯೇಲನೂ ಮಿಕ್ಕಾದ ಅವರ ಜತೆಗಾರರೂ ಪಾರಸಿಯರ ಅರಸನಾದ ಆರ್ತಷಸ್ತನಿಗೆ ಒಂದು ಪತ್ರ ಬರೆದರು. ಬರೆದ ಆ ಪತ್ರವು ಅರಾಮ್ಯರ ಭಾಷೆಯಲ್ಲಿ ಟೀಕಿಸಲ್ಪಟ್ಟು, ಅರಾಮ್ಯರ ಅಕ್ಷರದಲ್ಲಿ ಬರೆಯಲ್ಪಟ್ಟಿತ್ತು.

ಎಜ್ರಾ 7:1

ಈ ಕಾರ್ಯಗಳಾದ ತರುವಾಯ ಎಜ್ರನು ಪಾರಸಿಯರ ಅರಸನಾದ ಅರ್ತಷಸ್ತನ ಆಳಿಕೆ ಯಲ್ಲಿ ಬಾಬೆಲಿನಿಂದ ಹೊರಟುಹೋದನು. ಇವನು ಸೆರಾಯ ಮಗನು, ಇವನು ಅಜರ್ಯನ ಮಗನು,

ಎಜ್ರಾ 7:7

ಇದಲ್ಲದೆ ಇವನ ಸಂಗಡ ಇಸ್ರಾಯೇಲ್‌ ಮಕ್ಕಳಲ್ಲಿಯೂ ಯಾಜಕರಲ್ಲಿಯೂ ಲೇವಿಯರಲ್ಲಿಯೂ ಹಾಡುಗಾರರಲ್ಲಿಯೂ ದ್ವಾರಪಾಲಕರಲ್ಲಿಯೂ ನೆತಿನಿ ಯರಲ್ಲಿಯೂ ಕೆಲವರು ಅರ್ತಷಸ್ತನ ಆಳಿಕೆಯು ಏಳನೇ ವರುಷದಲ್ಲಿ ಯೆರೂಸಲೇಮಿಗೆ ಹೋದರು.

ನೆಹೆಮ್ಯ 1:1

ಹಕಲ್ಯನ ಮಗನಾದ ನೆಹೆವಿಾಯನ ಮಾತುಗಳು. ಇಪ್ಪತ್ತನೇ ವರುಷದ ಕಿಸ್ಲೇವ್‌ ತಿಂಗಳಲ್ಲಿ ನಾನು ಶೂಷನ್‌ ಅರಮನೆಯಲ್ಲಿ ರುವಾಗ ಏನಾಯಿತಂದರೆ, ನನ್ನ ಸಹೋದರರಲ್ಲಿ ಒಬ್ಬನಾದ ಹನಾನೀಯೂ ಯೆಹೂದದಲ್ಲಿದ್ದ ಕೆಲವರು ಬಂದರು.

ನೆಹೆಮ್ಯ 1:11

ಓ ಕರ್ತನೇ, ನಿನ್ನ ನಾಮಕ್ಕೆ ಭಯಪಡಲು ಇಚ್ಛಿಸುವ ನಿನ್ನ ಸೇವಕನ ಪ್ರಾರ್ಥನೆಯನ್ನೂ ಸೇವಕರ ಪ್ರಾರ್ಥನೆಯನ್ನೂ ನಿನ್ನ ಕಿವಿ ಆಲೈಸುತ್ತಾ ಇರಲಿ; ಇಂದು ನಿನ್ನ ಸೇವಕನಿಗೆ ವೃದ್ಧಿಯನ್ನು ಕೊಟ್ಟು ಈ ಮನುಷ್ಯನ ದೃಷ್ಟಿಯಲ್ಲಿ ಅವನಿಗೆ ಕರುಣೆ ದೊರಕುವ ಹಾಗೆ ಮಾಡು. ಯಾಕಂದರೆ ನಾನು ಅರಸನಿಗೆ ಪಾನ ಕೊಡುವವನಾಗಿದ್ದೆನು.

ಎಸ್ತೇರ್ 3:7

ಅರಸನಾದ ಅಹಷ್ವೇರೋಷನ ಹನ್ನೆರಡನೆ ವರುಷದಲ್ಲಿ ನೀಸಾನ್‌ ಎಂಬ ಮೊದಲನೇ ತಿಂಗಳಲ್ಲಿ ಹಾಮಾನನ ಮುಂದೆ ಪೂರ್‌ ಎಂಬ ಚೀಟನ್ನು ದಿನ ದಿನಕ್ಕೂ ತಿಂಗಳು ತಿಂಗಳಿಗೂ ಅಡಾರ್‌ ಎಂಬ ಹನ್ನೆರಡನೆ ತಿಂಗಳ ವರೆಗೆ ಹಾಕಿದರು.

Interlinear

Choose Theme