Home Bibles ನೆಹೆಮ್ಯ 13:2 · ಕನ್ನಡ ಬೈಬಲ್
ನೆಹೆಮ್ಯ 13:2 · ಕನ್ನಡ ಬೈಬಲ್

ಯಾಕಂದರೆ ಅವರು ರೊಟ್ಟಿಯನ್ನೂ ನೀರನ್ನೂ ತಂದು ಇಸ್ರಾಯೇಲ್‌ ಮಕ್ಕಳನ್ನು ಎದುರುಗೊಳ್ಳದೆ ಅವರನ್ನು ಶಪಿಸಿ ಅವರಿಗೆ ವಿರೋಧವಾಗಿ ಬಿಳಾಮ ನನ್ನು ಕೂಲಿಗೆ ಕರಕೊಂಡರು. ಆದರೆ ನಮ್ಮ ದೇವರು ಆ ಶಾಪವನ್ನು ಆಶೀರ್ವಾದವಾಗಿ ಮಾಡಿದನು ಅಂದನು.

Cross references

ಅಂಕೆಗಳ ಪುಸ್ತಕ 22:3

ಆ ಜನರು ಬಹುಮಂದಿಯಾದದರಿಂದ ಮೋವಾಬಿನವರು ಅವರಿಗೆ ಬಹಳವಾಗಿ ಅಂಜಿದರು; ಮೋವಾಬಿ ನವರು ಇಸ್ರಾಯೇಲ್‌ ಮಕ್ಕಳನ್ನು ಕಂಡು ದಿಗಿಲು ಪಟ್ಟರು.

ಅಂಕೆಗಳ ಪುಸ್ತಕ 22:5

ಇವನು ತನ್ನ ಜನರ ಮಕ್ಕಳ ದೇಶದ ನದಿತೀರದಲ್ಲಿರುವ ಪೆತೋರಿಗೆ ದೂತರನ್ನು ಕಳುಹಿಸಿ ಬೆಯೋರನ ಮಗನಾದ ಬಿಳಾಮನನ್ನು ಕರೆಯಿಸಿ ಹೇಳಿದ್ದೇನಂದರೆ--ಇಗೋ, ಒಂದು ಜನಾಂಗವು ಐಗುಪ್ತದಿಂದ ಹೊರಟಿತು; ಇಗೋ, ಅದು ಭೂಮುಖವನ್ನು ಮುಚ್ಚಿ ನನಗೆದುರಾಗಿ ವಾಸಿಸುತ್ತದೆ.

ಅಂಕೆಗಳ ಪುಸ್ತಕ 23:8

ದೇವರು ಶಪಿಸದವನನ್ನು ನಾನು ಹೇಗೆ ಶಪಿಸಲಿ? ಕರ್ತನು ಎದುರಿಸದವನನ್ನು ನಾನು ಹೇಗೆ ಎದುರಿ ಸಲಿ?

ಅಂಕೆಗಳ ಪುಸ್ತಕ 23:18

ಬಾಲಾ ಕನು ಅವನಿಗೆ--ಕರ್ತನು ಏನು ಹೇಳಿದ್ದಾನೆ ಅಂದನು. ಅವನು ಸಾಮ್ಯರೂಪವಾಗಿ--ಬಾಲಾಕನೇ, ಎದ್ದು ಕೇಳು; ಚಿಪ್ಪೋರನ ಮಗನೇ, ನನಗೆ ಕಿವಿಗೊಡು.

ಅಂಕೆಗಳ ಪುಸ್ತಕ 24:5

ಓ ಯಾಕೋಬೇ, ನಿನ್ನ ಡೇರೆಗಳು, ಇಸ್ರಾಯೇಲೇ, ನಿನ್ನ ಗುಡಾರಗಳು, ಎಷ್ಟು ಉತ್ತಮ ವಾಗಿವೆ!

ಅಂಕೆಗಳ ಪುಸ್ತಕ 24:10

ಆಗ ಬಾಲಾಕನು ಬಿಳಾಮನ ಮೇಲೆ ಕೋಪಗೊಂಡು ಚಪ್ಪಾಳೆ ಹೊಡೆದು ಅವನಿಗೆ--ನನ್ನ ಶತ್ರುಗಳನ್ನು ಶಪಿಸುವದಕ್ಕೆ ನಿನ್ನನ್ನು ಕರೆದೆನು; ಆದರೆ ಇಗೋ, ನೀನು ಈ ಮೂರುಸಾರಿ ಆಶೀರ್ವದಿಸೇ ಆಶೀರ್ವದಿಸಿದಿ.

ದ್ವಿತೀಯೋಪದೇಶಕಾಂಡ 23:5

ಆದರೆ ನಿನ್ನ ದೇವರಾದ ಕರ್ತನು ಬಿಳಾಮನನ್ನು ಕೇಳಲೊಲ್ಲದೆ ಇದ್ದನು; ನಿನ್ನ ದೇವರಾದ ಕರ್ತನು ಆ ಶಾಪವನ್ನು ನಿನಗೆ ಆಶೀರ್ವಾದಕ್ಕೆ ತಿರುಗಿ ಸಿದನು; ಯಾಕಂದರೆ ನಿನ್ನ ದೇವರಾದ ಕರ್ತನು ನಿನ್ನನ್ನು ಪ್ರೀತಿಮಾಡಿದನು.

ಯೆಹೋಶುವ 24:9

ಆಗ ಮೋವಾಬ್ಯರ ಅರಸನಾದ ಚಿಪ್ಪೋರನ ಮಗ ನಾದ ಬಾಲಾಕನು ಎದ್ದು ಇಸ್ರಾಯೇಲಿಗೆ ವಿರೋಧ ವಾಗಿ ಯುದ್ಧಮಾಡಿ ನಿಮ್ಮನ್ನು ಶಪಿಸುವ ಹಾಗೆ ಬೆಯೋರನ ಮಗನಾದ ಬಿಳಾಮನನ್ನು ಕರೇ ಕಳುಹಿಸಿ ದನು.

ಕೀರ್ತನೆಗಳು 109:28

ಅವರು ಶಪಿಸಲಿ; ಆದರೆ ನೀನು ಆಶೀರ್ವದಿಸು; ಅವರು ಎದ್ದು ನಾಚಿಕೆಪಡಲಿ; ಆದರೆ ನಿನ್ನ ಸೇವಕನು ಸಂತೋ ಷಿಸಲಿ.

ಮೀಕ 6:5

ನನ್ನ ಜನರೇ, ಮೋವಾಬಿನ ಅರಸನಾದ ಬಾಲಾಕನು ಯೋಚಿಸಿ ದ್ದನ್ನೂ ಬೆಯೋರನ ಮಗನಾದ ಬಿಳಾಮನು ಅವನಿಗೆ ಉತ್ತರವಾಗಿ ಹೇಳಿದ್ದನ್ನೂ ಶಿಟ್ಟೀಮು ಮೊದಲು ಗೊಂಡು ಗಿಲ್ಗಾಲಿನ ವರೆಗೂ ಆದದ್ದನ್ನೂ ಈಗ ಜ್ಞಾಪಕ ಮಾಡಿಕೊಳ್ಳಿರಿ. ಆಗ ಕರ್ತನ ನೀತಿಯನ್ನು ತಿಳುಕೊಳ್ಳು ವಿರಿ.

ಮತ್ತಾಯ 25:40

ಅದಕ್ಕೆ ಅರಸನು ಪ್ರತ್ಯುತ್ತರವಾಗಿ ಅವರಿಗೆ--ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ನೀವು ಈ ನನ್ನ ಸಹೋದರ ರಲ್ಲಿ ಅತ್ಯಲ್ಪನಾದವನೊಬ್ಬನಿಗೆ ಮಾಡಿದ್ದು ನನಗೂ ಮಾಡಿದಂತಾಯಿತು ಅಂದನು.

Interlinear

Choose Theme