Home Bibles ನೆಹೆಮ್ಯ 13:10 · ಕನ್ನಡ ಬೈಬಲ್
ನೆಹೆಮ್ಯ 13:10 · ಕನ್ನಡ ಬೈಬಲ್

ಲೇವಿಯರ ಪಾಲುಗಳು ಅವರಿಗೆ ಕೊಡಲಿಲ್ಲ ವೆಂದು ನನಗೆ ತಿಳಿಯಿತು. ಯಾಕಂದರೆ ಸೇವೆಯನ್ನು ಮಾಡುವ ಲೇವಿಯರೂ ಹಾಡುಗಾರರೂ ತಮ್ಮ ತಮ್ಮ ಹೊಲಕ್ಕೆ ಓಡಿಹೋಗುತ್ತಿದ್ದರು.

Cross references

ಅಂಕೆಗಳ ಪುಸ್ತಕ 35:2

ಇಸ್ರಾಯೇಲ್‌ ಮಕ್ಕಳಿಗೆ ಆಜ್ಞಾಪಿಸಬೇಕಾದದ್ದೇ ನಂದರೆ--ಅವರು ತಮ್ಮ ಸ್ವಾಸ್ತ್ಯದ ಭಾಗದಿಂದ ಲೇವಿ ಯರಿಗೆ ವಾಸಮಾಡುವದಕ್ಕೆ ಪಟ್ಟಣಗಳನ್ನು ಕೊಡ ಬೇಕು; ಪಟ್ಟಣಗಳ ಸುತ್ತಮುತ್ತಲಿರುವ ಉಪನಗರ ಗಳನ್ನು ನೀವು ಲೇವಿಯರಿಗೆ ಕೊಡಬೇಕು.

ದ್ವಿತೀಯೋಪದೇಶಕಾಂಡ 12:19

ನೀನು ಭೂಮಿಯ ಮೇಲೆ ಜೀವಿಸುವ ವರೆಗೆ ಲೇವಿಯನನ್ನು ಬಿಟ್ಟುಬಿಡದ ಹಾಗೆ ನೋಡಿಕೋ.

2 ದಿನವೃತ್ತಾಂತ 31:4

ಯಾಜಕರೂ ಲೇವಿಯರೂ ಕರ್ತನ ನ್ಯಾಯಪ್ರಮಾಣದಲ್ಲಿ ಬಲ ಗೊಳ್ಳುವ ನಿಮಿತ್ತ ಅವರಿಗೆ ತಕ್ಕ ಭಾಗವನ್ನು ಕೊಡ ಬೇಕೆಂದು ಯೆರೂಸಲೇಮಿನಲ್ಲಿರುವ ಜನರಿಗೆ ಅವನು ಆಜ್ಞಾಪಿಸಿದನು.

ನೆಹೆಮ್ಯ 10:37

ನಮ್ಮ ಹಿಟ್ಟಿನಲ್ಲಿ ಮೊದಲಿನ ಪಾಲನ್ನೂ ನಮ್ಮ ಕಾಣಿಕೆಗಳನ್ನೂ ಸಕಲ ಮರಗಳ ಫಲವನ್ನೂ ದ್ರಾಕ್ಷಾ ರಸವನ್ನೂ ಎಣ್ಣೆಯನ್ನೂ ಯಾಜಕರ ಬಳಿಗೆ ನಮ್ಮ ದೇವರ ಆಲಯದ ಕೊಠಡಿಗಳಲ್ಲಿ ತಂದಿಡುವದಕ್ಕೂ; ಲೇವಿಯರು ಒಕ್ಕಲುತನದವರಿರುವ ಪಟ್ಟಣಗಳಿಂದ ಹತ್ತರಲ್ಲೊಂದು ಪಾಲನ್ನು ಹೊಂದುವ ಹಾಗೆ ನಮ್ಮ ಭೂಮಿಯ ಹತ್ತರಲ್ಲೊಂದು ಪಾಲನ್ನು ಲೇವಿಯರಿಗೆ ತರುವದಕ್ಕೂ ಪ್ರಮಾಣಮಾಡಿದೆವು.

ನೆಹೆಮ್ಯ 12:28

ಹಾಡುಗಾರರ ಮಕ್ಕಳು ಯೆರೂಸಲೇಮಿನ ಸುತ್ತಲಿ ರುವ ಬೈಲಿನಿಂದಲೂ ನೆಟೋಫಾತ್ಯರ ಗ್ರಾಮಗ ಳಿಂದಲೂ

ನೆಹೆಮ್ಯ 12:29

ಬೇತ್ಹಗಿಲ್ಗಾಲನ ಮನೆಯಿಂದಲೂ ಗೆಬದ ಅಜ್ಮಾವೇತಿನ ಹೊಲಗಳಿಂದಲೂ ಕೂಡಿಕೊಂಡರು. ಯಾಕಂದರೆ ಹಾಡುಗಾರರು ತಮಗೋಸ್ಕರ ಯೆರೂ ಸಲೇಮಿನ ಸುತ್ತಲೂ ಗ್ರಾಮಗಳನ್ನು ಕಟ್ಟಿಸಿಕೊಂಡಿ ದ್ದರು.

ನೆಹೆಮ್ಯ 12:47

ಆದದರಿಂದ ಜೆರುಬ್ಬಾಬೆಲನ ದಿವಸಗಳ ಲ್ಲಿಯೂ ನೆಹೆವಿಾಯನ ದಿವಸಗಳಲ್ಲಿಯೂ ಇಸ್ರಾಯೇ ಲ್ಯರೆಲ್ಲರೂ ಹಾಡುಗಾರರಿಗೂ ದ್ವಾರಪಾಲಕರಿಗೂ ದಿನ ನಿತ್ಯದ ಕಟ್ಟಳೆಯಾದ ಅವರವರ ಪಾಲನ್ನು ಕೊಟ್ಟರು. ಇದಲ್ಲದೆ ಅವರು ಲೇವಿಯರಿಗೋಸ್ಕರ ಪರಿಶುದ್ಧ ಮಾಡಿದರು; ಲೇವಿಯರು ಹಾಗೆಯೇ ಆರೋನನ ಮಕ್ಕಳಿಗೆ ಪರಿಶುದ್ಧ ಮಾಡಿದರು.

ಯೆಶಾಯ 43:23

ನಿನ್ನ ದಹನಬಲಿಯ ಎಳೇ ಕರುಗಳನ್ನು ನನಗೆ ತರಲಿಲ್ಲ ಇಲ್ಲವೆ ನಿನ್ನ ಯಜ್ಞ ಗಳಿಂದ ನನ್ನನ್ನು ಸನ್ಮಾನಿಸಲಿಲ್ಲ; ನೀನು ಕಾಣಿಕೆಯನ್ನು ಅರ್ಪಿಸದೆ ಇದ್ದದ್ದಕ್ಕೆ ನಾನು ಕಾರಣವಲ್ಲ, ಇಲ್ಲವೆ ಧೂಪಕ್ಕಾಗಿ ನಿನ್ನನ್ನು ಬೇಸರಗೊಳಿಸಲಿಲ್ಲ.

ಮಲಾಕಿ 1:6

ಮಗನು ತಂದೆಯನ್ನು ದಾಸನು ಯಜಮಾನನನ್ನು ಸನ್ಮಾನಿಸುತ್ತಾನೆ; ನಾನು ತಂದೆಯಾಗಿದ್ದರೆ ನನ್ನ ಸನ್ಮಾನ ವೆಲ್ಲಿ? ನಾನು ಯಜಮಾನನಾಗಿದ್ದರೆ ನನ್ನ ಭಯವು ಎಲ್ಲಿ ಎಂದು ನನ್ನ ಹೆಸರನ್ನು ಅಸಡ್ಡೆ ಮಾಡುವ ಯಾಜಕರಾದ ನಿಮಗೆ ಸೈನ್ಯಗಳ ಕರ್ತನು ಹೇಳುತ್ತಾನೆ. ಆದರೆ ನೀವು--ನಿನ್ನ ಹೆಸರನ್ನು ಯಾವದರಲ್ಲಿ ನಾವು ಅಸಡ್ಡೆ ಮಾಡಿದ್ದೇವೆಂದು ಹೇಳುತ್ತೀರಿ.

ಮಲಾಕಿ 3:8

ಮನುಷ್ಯನು ದೇವರದನ್ನು ಕಳ್ಳತನ ಮಾಡುವನೋ? ಆದರೆ ನೀವು ನನ್ನದನ್ನು ಕಳ್ಳತನ ಮಾಡಿದ್ದೀರಿ; ಆದರೆ ನೀವು--ಯಾವದರಲ್ಲಿ ನಿನ್ನದನ್ನು, ಕಳ್ಳತನ ಮಾಡಿದ್ದೇವೆಂದು ಅನ್ನುತ್ತೀರಿ? ದಶಮಭಾಗ ಮತ್ತು ಅರ್ಪಣೆಗಳನ್ನೇ.

1 ತಿಮೋಥೆಯ 5:17

ಚೆನ್ನಾಗಿ ಅಧಿಕಾರ ನಡಿಸುವ ಹಿರಿಯರನ್ನು, ಅವ ರೊಳಗೆ ವಿಶೇಷವಾಗಿ ವಾಕ್ಯದಲ್ಲಿಯೂ ಬೋಧನೆ ಯಲ್ಲಿಯೂ ಕಷ್ಟಪಡುವವರನ್ನು ಇಮ್ಮಡಿಯಾದ ಮಾನಕ್ಕೆ ಯೋಗ್ಯರೆಂದು ಎಣಿಸಬೇಕು.

Interlinear

Choose Theme