Cross references
ಇದಲ್ಲದೆ ಪಾಸೇಹನ ಮಗನಾದ ಯೋಯಾ ದನೂ ಬೆಸೋದ್ಯನ ಮಗನಾದ ಮೆಷುಲ್ಲಾಮನೂ ಹಳೇ ಬಾಗಲನ್ನು ಭದ್ರಪಡಿಸಿದರು; ಅವರು ಅದರ ತೊಲೆಗಳನ್ನು ಹೊಂದಿಸಿ ಕದಗಳನ್ನೂ ಜೋಡಣೆ ಗಳನ್ನೂ ಅದರ ಅಗುಳಿಗಳನ್ನೂ ನಿಲ್ಲಿಸಿದರು.
ಆಗ ಶಾಸ್ತ್ರಿಯಾದ ಎಜ್ರನು ಅದಕ್ಕೋಸ್ಕರ ಮಾಡ ಲ್ಪಟ್ಟ ಒಂದು ಮರದ ಪೀಠದ ಮೇಲೆ ನಿಂತನು. ಅವನ ಬಳಿಯಲ್ಲಿ ಅವನಿಗೆ ಬಲಗಡೆಯಲ್ಲಿ ಮತ್ತಿತ್ಯನೂ ಶೇಮವನೂ ಅನಾಯನೂ ಊರೀಯನೂ ಹಿಲ್ಕೀ ಯನೂ ಮಾಸೇಯನೂ ಅವನಿಗೆ ಎಡಗಡೆಯಲ್ಲಿ ಪೆದಾಯನೂ ವಿಾಷಾಯೇಲನೂ ಮಲ್ಕೀಯನೂ ಹಾಷುಮನೂ ಹಷ್ಬದ್ದಾನನೂ ಜೆಕರ್ಯನೂ ಮೆಷು ಲ್ಲಾಮನೂ ನಿಂತಿದ್ದರು.
ಅಹೀ ಟೂಬನ ಮಗನಾದ ಮೆರಾಯೋತನ ಮಗನಾದ ಚಾದೋಕನ ಮಗನಾದ ಮೆಷುಲ್ಲಾಮನ ಮಗನಾದ ಹಿಲ್ಕೀಯನ ಮಗನಾದ ಸೆರಾಯನು ದೇವರ ಆಲ ಯದ ನಾಯಕನಾಗಿದ್ದನು.
ಇದ್ದೋನು ಗಿನ್ನೆತೋ ನನು ಅಬೀಯನು
ಯೆರೆವಿಾ ಯನ ವಂಶದವರಾದ ಹನನ್ಯನು, ಎಜ್ರನ ವಂಶದ ವನಾದ ಮೆಷುಲ್ಲಾಮನು, ಅಮರ್ಯನ ವಂಶದವ ನಾದ ಯೆಹೋಹಾನಾನನು,
ಅಬೀ ಯನ ವಂಶದವನಾದ ಜಿಕ್ರಿಯು,
ಮತ್ತನ್ಯನೂ ಬಕ್ಬುಕ್ಯನೂ ಒಬದ್ಯನೂ ಮೆಷುಲ್ಲಾಮನೂ ಟಲ್ಮೋ ನನೂ ಅಕ್ಕೂಬನೂ ಬೊಕ್ಕಸಗಳ ಬಾಗಲುಗಳನ್ನು ಕಾಯುವವರಾಗಿದ್ದರು.
ಆಗ ಯಾಜಕರಾದ ಎಲ್ಯಾಕೀಮನೂ ಮಾಸೇ ಯನೂ ಮಿನ್ಯಾವಿಾನನೂ ವಿಾಕಾಯನೂ ಎಲ್ಯೋ ವೇನೈಯನೂ ಜೆಕರ್ಯನೂ ಹನನ್ಯನೂ ತುತೂರಿ ಗಳನ್ನು ಹಿಡಿದುಕೊಂಡವರು;