Home Bibles ☰ Books ನೆಹೆಮ್ಯ 10:35 · ಕನ್ನಡ ಬೈಬಲ್
ನೆಹೆಮ್ಯ 10:35 · ಕನ್ನಡ ಬೈಬಲ್

ಕರ್ತನ ಆಲಯಕ್ಕೆ ಪ್ರತಿ ವರುಷದಲ್ಲಿಯೂ ನಮ್ಮ ಭೂಮಿಯ ಪ್ರಥಮ ಫಲಗಳನ್ನೂ ಎಲ್ಲಾ ಮರಗಳ ಸಕಲ ಫಲಗಳಿಂದ ಪ್ರಥಮ ಫಲಗಳನ್ನೂ ತರುವದಕ್ಕೂ;

Cross references

ನಿರ್ಗಮಕಾಂಡ 23:19

ನಿನ್ನ ಭೂಮಿಯ ಪ್ರಥಮ ಫಲಗಳಲ್ಲಿ ಮೊದಲ ನೆಯದನ್ನು ನಿನ್ನ ದೇವರಾದ ಕರ್ತನ ಆಲಯಕ್ಕೆ ತರ ಬೇಕು. ಮೇಕೆಯ ಮರಿಯನ್ನು ತಾಯಿಯ ಹಾಲಿನಲ್ಲಿ ಬೇಯಿಸಬಾರದು.

ನಿರ್ಗಮಕಾಂಡ 34:26

ನಿಮ್ಮ ಭೂಮಿಯ ಪ್ರಥಮ ಫಲಗಳಲ್ಲಿ ಮೊದಲ ನೆಯದನ್ನು ನಿಮ್ಮ ದೇವರಾದ ಕರ್ತನ ಮನೆಗೆ ತರ ಬೇಕು. ಮೇಕೆಯ ಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು ಎಂದು ಹೇಳಿದನು.

ಲೇವ್ಯಕಾಂಡ 6:5

ಅಥವಾ ಅವನು ಸುಳ್ಳಾಗಿ ಪ್ರಮಾಣಮಾಡಿ ಪಡೆದವುಗಳೆಲ್ಲವುಗಳನ್ನೂ ಅಲ್ಲದೆ ಅವನು ಅದರ ಅಸಲಿಗೆ ಐದನೇ ಪಾಲನ್ನೂ ಕೂಡಿಸಿ ಹಿಂದಕ್ಕೆ ಕೊಡಬೇಕು. ಅತಿಕ್ರಮ ಬಲಿ ಅರ್ಪಿಸುವ ದಿನದಲ್ಲಿ ಅದರ ಯಜಮಾನನು ಯಾವ ನಾಗಿರುವನೋ ಅವನಿಗೆ ಕೊಡಬೇಕು.

ಲೇವ್ಯಕಾಂಡ 6:6

ಅವನು ತನ್ನ ಅತಿಕ್ರಮ ಬಲಿಯನ್ನು ಕರ್ತನ ಸನ್ನಿಧಿಗೆ ನಿನ್ನ ಅಂದಾಜಿನ ಮೇರೆಗೆ ಮಂದೆಯಿಂದ ದೋಷ ವಿಲ್ಲದ ಒಂದು ಟಗರನ್ನು ಅತಿಕ್ರಮ ಬಲಿಗಾಗಿ ಯಾಜಕನ ಬಳಿಗೆ ತರಬೇಕು.

ಲೇವ್ಯಕಾಂಡ 19:23

ನೀವು ದೇಶದೊಳಗೆ ಬಂದು ಎಲ್ಲಾ ತರಹದ ಮರಗಳನ್ನು ಆಹಾರಕ್ಕೋಸ್ಕರ ನೆಟ್ಟಾಗ ಅದರ ಫಲ ವನ್ನು ನೀವು ಸುನ್ನತಿಯಿಲ್ಲದ್ದೆಂದು ಲೆಕ್ಕಿಸಬೇಕು; ಮೂರು ವರುಷಗಳ ವರೆಗೆ ಅದು ನಿಮಗೆ ಸುನ್ನತಿಯಿಲ್ಲದ್ದಾಗಿ ರುವದು; ಅದನ್ನು ತಿನ್ನಬಾರದು.

ಅಂಕೆಗಳ ಪುಸ್ತಕ 18:2

ನಿಮ್ಮ ಪಿತೃವಾದ ಲೇವಿಯ ಗೋತ್ರದವರಾದ ನಿನ್ನ ಸಹೋದರರನ್ನು ಸಹ ನಿನ್ನ ಸಂಗಡ ಸೇರಿಸಿಕೋ. ಅವರು ನಿನ್ನ ಕೂಡ ಇದ್ದು ನಿನಗೆ ಸೇವೆ ಮಾಡಬೇಕು, ಆದರೆ ನೀನು ನಿನ್ನ ಮಕ್ಕಳ ಸಹಿತವಾಗಿ ಸಾಕ್ಷೀ ಗುಡಾರದ ಮುಂದೆ ಸೇವೆಮಾಡಬೇಕು;

ಅಂಕೆಗಳ ಪುಸ್ತಕ 18:12

ಉತ್ತಮವಾದ ಎಲ್ಲಾ ಎಣ್ಣೆಯೂ ದ್ರಾಕ್ಷಾರಸವೂ ಗೋಧಿಯೂ ಅವರು ಕರ್ತನಿಗೆ ಕೊಡುವ ಅವುಗಳ ಪ್ರಥಮ ಫಲಗಳನ್ನೂ ನಿನಗೆ ಕೊಟ್ಟಿದ್ದೇನೆ.

ದ್ವಿತೀಯೋಪದೇಶಕಾಂಡ 26:2

ನಿನ್ನ ದೇವರಾದ ಕರ್ತನು ನಿನಗೆ ಕೊಡುವ ನಿನ್ನ ದೇಶದಿಂದ ನೀನು ತರತಕ್ಕ ಭೂಮಿಯ ಎಲ್ಲಾ ಹುಟ್ಟುವಳಿಯ ಪ್ರಥಮ ಫಲವನ್ನು ಪುಟ್ಟಿಯ ಲ್ಲಿಟ್ಟು ನಿನ್ನ ದೇವರಾದ ಕರ್ತನು ತನ್ನ ಹೆಸರನ್ನು ಸ್ಥಾಪಿಸುವದಕ್ಕೆ ಆದುಕೊಳ್ಳುವ ಸ್ಥಳಕ್ಕೆ ತಕ್ಕೊಂಡು ಹೋಗಬೇಕು.

2 ದಿನವೃತ್ತಾಂತ 31:3

ಅವನು ಕರ್ತನ ನ್ಯಾಯಪ್ರಮಾಣದಲ್ಲಿ ಬರೆದ ಪ್ರಕಾರ ಉದಯಕಾಲದ ಸಾಯಂಕಾಲದ ದಹನ ಬಲಿಗಳಿಗೋಸ್ಕರವೂ ಸಬ್ಬತ್ತುಗಳಲ್ಲಿಯೂ ಅಮವಾಸ್ಯೆ ಗಳಲ್ಲಿಯೂ ನೇಮಿಸಿದ ಹಬ್ಬಗಳಲ್ಲಿಯೂ ಬೇಕಾದ ದಹನಬಲಿಗಳಿಗೋಸ್ಕರವೂ ಅರಸನ ಸ್ಥಿತಿಯಿಂದ ಅವನ ಭಾಗವನ್ನು ನೇಮಿಸಿದನು.

ನೆಹೆಮ್ಯ 13:31

ವರ್ಗಗಳನ್ನೂ ಅರ್ಪಣೆಯ ಕಟ್ಟಿಗೆಗಳಿಗೋಸ್ಕರವೂ ಪ್ರಥಮ ಫಲಗಳಿಗೋಸ್ಕರವೂ ದೃಢವಾದ ಕಾಲ ಗಳನ್ನೂ ನೇಮಿಸಿದೆನು. ನನ್ನ ದೇವರೇ, ಒಳ್ಳೇದಕ್ಕಾಗಿ ನನ್ನನ್ನು ಜ್ಞಾಪಕಮಾಡು.

ಸಾಮೇತಿಗಳು 3:9

ನಿನ್ನ ಆಸ್ತಿಯಿಂದಲೂ ಅಭಿವೃದ್ಧಿಯ ಎಲ್ಲಾ ಪ್ರಥಮ ಫಲಗಳಿಂದಲೂ ಕರ್ತನನ್ನು ಸನ್ಮಾನಿಸು.

ಮಲಾಕಿ 3:8

ಮನುಷ್ಯನು ದೇವರದನ್ನು ಕಳ್ಳತನ ಮಾಡುವನೋ? ಆದರೆ ನೀವು ನನ್ನದನ್ನು ಕಳ್ಳತನ ಮಾಡಿದ್ದೀರಿ; ಆದರೆ ನೀವು--ಯಾವದರಲ್ಲಿ ನಿನ್ನದನ್ನು, ಕಳ್ಳತನ ಮಾಡಿದ್ದೇವೆಂದು ಅನ್ನುತ್ತೀರಿ? ದಶಮಭಾಗ ಮತ್ತು ಅರ್ಪಣೆಗಳನ್ನೇ.

Interlinear

Choose Theme