ನಹೂಮ 3:17 · ಕನ್ನಡ ಬೈಬಲ್
ನಿನ್ನ ಕಿರೀಟಧಾರಿಗಳು ಮಿಡತೆಗಳ ಹಾಗೆಯೂ ನಿನ್ನ ಅಧಿಪತಿಗಳು ತಂಪಾದ ದಿನದಲ್ಲಿ ಬೇಲಿಗಳೊಳಗೆ ಇಳುಕೊಳ್ಳುವ ದೊಡ್ಡ ಮಿಡತೆಗಳ ಹಾಗೆಯೂ ಇದ್ದಾರೆ; ಸೂರ್ಯನು ಹುಟ್ಟುವಾಗ ಹಾರಿಹೋಗು ತ್ತವೆ; ಆಗ ಅವು ಎಲ್ಲಿರುವವೆಂದು ಅವುಗಳ ಸ್ಥಳವು ತಿಳಿಯುವದಿಲ್ಲ;
Cross references
ಯೆರೆಮಿಯ 51:27
ಆಗ ಬಾಬೆಲಿನ ಅರಸನು ಅವರನ್ನು ಹೊಡಿಸಿ, ಹಮಾತ್ ದೇಶದ ರಿಬ್ಲದಲ್ಲಿ ಕೊಂದು ಹಾಕಿಸಿದನು. ಈ ಪ್ರಕಾರ ಯೆಹೂದನು ತನ್ನ ದೇಶದಿಂದ ಸೆರೆಯಾಗಿ ಒಯ್ಯಲ್ಪಟ್ಟನು.
ನಹೂಮ 2:9
ಬೆಳ್ಳಿಯನ್ನು ಸುಲುಕೊಳ್ಳಿರಿ; ಬಂಗಾರವನ್ನು ಸುಲುಕೊಳ್ಳಿರಿ; ಕೂಡಿಸಿಟ್ಟ ಧನಕ್ಕೂ ಸಕಲ ವಿಧವಾದ ಶ್ರೇಷ್ಠ ವಸ್ತುಗಳ ನಿಧಿಗೂ ಪಾರವೇ ಇಲ್ಲ.
ಪ್ರಕಟನೆ 9:7
ಆ ಮಿಡಿತೆಗಳ ಆಕಾರಗಳು ಯುದ್ಧಕ್ಕೆ ಸನ್ನದ್ಧವಾಗಿರುವ ಕುದುರೆಗಳ ಆಕಾರದಂತೆ ಇದ್ದವು ಅವುಗಳ ತಲೆಯ ಮೇಲೆ ಚಿನ್ನದ ಕಿರೀಟಗಳೋ ಎಂಬಂತೆ ಇದ್ದವು; ಅವುಗಳ ಮುಖಗಳು ಮನುಷ್ಯರ ಮುಖಗಳ ಹಾಗೆ ಇದ್ದವು.