Home Bibles ನಹೂಮ 2:13 · ಕನ್ನಡ ಬೈಬಲ್
ನಹೂಮ 2:13 · ಕನ್ನಡ ಬೈಬಲ್

ಸೈನ್ಯಗಳ ಕರ್ತನು ಹೇಳುವದೇನಂದರೆ -- ಇಗೋ, ನಾನು ನಿನಗೆ ವಿರೋಧವಾಗಿದ್ದೇನೆ; ಅದರ ರಥಗಳನ್ನು ಹೊಗೆಯಾ ಗಲು ಸುಡುತ್ತೇನೆ; ಕತ್ತಿಯು ನಿನ್ನ ಎಳೇ ಸಿಂಹಗಳನ್ನು ನುಂಗಿಬಿಡುವದು; ನಿನ್ನ ಕೊಳ್ಳೆಯನ್ನು ಭೂಮಿಯ ಮೇಲಿನಿಂದ ಕಡಿದುಬಿಡುತ್ತೇನೆ; ನಿನ್ನ ಸೇವಕರ ಶಬ್ದವು ಇನ್ನು ಕೇಳಲ್ಪಡುವದಿಲ್ಲ.

Cross references

ಯೆಹೋಶುವ 11:9

ಕರ್ತನು ತನಗೆ ಹೇಳಿದ ಪ್ರಕಾರವೇ ಯೆಹೋಶು ವನು ಅವರ ಕುದುರೆಗಳ ಹಿಂಗಾಲಿನ ನರವನ್ನು ಕೊಯಿದುಬಿಟ್ಟು ಅವರ ರಥಗಳನ್ನು ಬೆಂಕಿಯಿಂದ ಸುಟ್ಟುಬಿಟ್ಟನು.

2 ಅರಸುಗಳು 18:17

ಅಶ್ಶೂರಿನ ಅರಸನು ಲಾಕೀಷಿನಿಂದ ತರ್ತಾನ ನನ್ನೂ ರಬ್ಸಾರೀಸನನ್ನೂ ರಬ್ಷಾಕೆಯನ್ನೂ ದೊಡ್ಡ ದಂಡನ್ನೂ ಯೆರೂಸಲೇಮಿನಲ್ಲಿದ್ದ ಅರಸನಾದ ಹಿಜ್ಕೀ ಯನ ಬಳಿಗೆ ಕಳುಹಿಸಿದನು. ಅವರು ಯೆರೂಸಲೇಮಿಗೆ ಬಂದು ಅರಸನ ಹೊಲದ ರಾಜ ಮಾರ್ಗದಲ್ಲಿರುವ ಮೇಲಿನ ಕೆರೆಯ ಕಾಲುವೆಯ ಬಳಿಯಲ್ಲಿ ನಿಂತರು. ಅವರು ಅರಸನನ್ನು ಕರೇ ಕಳುಹಿಸಿದರು.

2 ಅರಸುಗಳು 18:19

ಆಗ ರಬ್ಷಾಕೆಯು ಅವರಿಗೆ--ನೀವು ಹಿಜ್ಕೀಯನಿಗೆ ಹೇಳಬೇಕಾದದ್ದೇನಂದರೆ, ಮಹಾ ಅರಸನಾದ ಅಶ್ಶೂರಿನ ಅರಸನು ಹೇಳುವದೇನಂದರೆ, ಭರವಸವಾಗಿರುವ ಈ ನಂಬಿಕೆಯೇನು?

2 ಅರಸುಗಳು 18:27

ಆದರೆ ರಬ್ಷಾಕೆಯು ಅವರಿಗೆ--ನನ್ನ ಯಜಮಾನನು ನಿನ್ನ ಯಜಮಾನನಿಗೂ ನಿನಗೂ ಈ ಮಾತುಗಳನ್ನು ಹೇಳಲು ನನ್ನನ್ನು ಕಳುಹಿಸಿದನೋ? ಗೋಡೆಯ ಮೇಲೆ ಕುಳಿತ ಜನರು ತಮ್ಮ ಮಲವನ್ನು ತಿಂದು ತಮ್ಮ ಮೂತ್ರವನ್ನು ನಿಮ್ಮ ಸಂಗಡ ಕುಡಿಯುವ ಹಾಗೆ ಅವರ ಬಳಿಗೆ ನನ್ನನ್ನು ಕಳುಹಿಸಲಿಲ್ಲವೋ ಎಂದು ಹೇಳಿದನು.

2 ಅರಸುಗಳು 19:9

ಆಗ ಅವನು ಕೂಷಿನ ಅರಸನಾದ ತಿರ್ಹಾಕನನ್ನು ಕುರಿತು--ಇಗೋ, ಅವನು ನಿನ್ನ ಮೇಲೆ ಯುದ್ಧ ಮಾಡಲು ಹೊರಟಿದ್ದಾನೆಂದು ಕೇಳಿದಾಗ ತಿರಿಗಿ ಹಿಜ್ಕೀ ಯನ ಬಳಿಗೆ ಸೇವಕರನ್ನು ಕಳುಹಿಸಿ ಹೇಳಿದ್ದೇನಂದರೆ

2 ಅರಸುಗಳು 19:23

ನಿನ್ನ ಸೇವಕರ ಮುಖಾಂತರ ಕರ್ತನನ್ನು ನಿಂದಿಸಿ ಹೇಳಿದ್ದು--ನಾನು ನನ್ನ ಹೆಚ್ಚಾದ ರಥಗಳಿಂದ ಪರ್ವತಗಳ ಶಿಖರಕ್ಕೂ ಲೆಬನೋನಿನ ಪಾರ್ಶ್ವಗಳಿಗೂ ಹೋಗಿ ಅದರ ಉನ್ನತ ವಾದ ದೇವದಾರುಗಳನ್ನೂ ಅದರ ಮುಖ್ಯವಾದ ತುರಾಯಿ ಮರಗಳನ್ನೂ ಕಡಿದು ಅದರ ಅಂಚಿನ ಗಡಿ ಸ್ಥಳಗಳಲ್ಲಿಯೂ ಅದರ ಫಲವುಳ್ಳ ಅಡವಿಯ ಲ್ಲಿಯೂ ಸೇರುತ್ತೇನೆ.

2 ದಿನವೃತ್ತಾಂತ 32:9

ಇದರ ತರುವಾಯ ಅಶ್ಶೂರಿನ ಅರಸನಾದ ಸನ್ಹೇ ರೀಬನೂ ಅವನ ಸಂಗಡ ಕೂಡಿರುವ ಅವನ ಸಮಸ್ತ ಬಲವೂ ಲಾಕೀಷನ್ನು ಮುತ್ತಿಗೆ ಹಾಕಿದಾಗ ಅವನು ಯೆರೂಸಲೇಮಿನಲ್ಲಿ ಯೆಹೂದದ ಅರಸನಾದ ಹಿಜ್ಕೀ ಯನ ಬಳಿಗೂ ಯೆರೂಸಲೇಮಿನಲ್ಲಿರುವ ಸಮಸ್ತ ಯೆಹೂದದವರ ಬಳಿಗೂ ತನ್ನ ಸೇವಕರನ್ನು ಕಳು ಹಿಸಿ--ಅಶ್ಶೂರಿನ ಅರಸನಾದ ಸನ್ಹೇರೀಬನು ಹೀಗೆ ಹೇಳುತ್ತಾನೆ--

2 ದಿನವೃತ್ತಾಂತ 32:19

ಮನುಷ್ಯರ ಕೈ ಕೆಲಸವಾದ ಭೂಮಿಯ ಜನಗಳ ದೇವರುಗಳಿಗೆ ವಿರೋಧವಾಗಿ ಮಾತನಾಡಿದ ಹಾಗೆ ಯೆರೂಸಲೇಮಿನ ದೇವರಿಗೆ ವಿರೋಧವಾಗಿ ಮಾತನಾಡಿದರು.

ಕೀರ್ತನೆಗಳು 46:9

ಯುದ್ಧಗಳನ್ನು ಭೂಮಿಯ ಅಂತ್ಯದ ವರೆಗೆ ನಿಲ್ಲಿಸಿ ಬಿಲ್ಲನ್ನು ಮುರಿದು ಭಲ್ಲೆಯನ್ನು ಕಡಿದು ತುಂಡುಮಾಡಿ ರಥಗಳನ್ನು ಬೆಂಕಿಯಿಂದ ಸುಡುತ್ತಾನೆ.

ಯೆಶಾಯ 31:8

ಆಗ ಅಶ್ಶೂರ್ಯನು ಕತ್ತಿಯಿಂದ ಬೀಳುವನು, ಬಲಿಷ್ಟ ನಿಂದಲ್ಲ; ಅವನು ನುಂಗಲ್ಪಡುವನು, ಹೀನನ ಕತ್ತಿ ಯಿಂದಲ್ಲ; ಅವನು ಕತ್ತಿಯ ಕಡೆಯಿಂದ ಓಡುವನು, ಅವನ ಯೌವನಸ್ಥರು ಸೋಲಿಸಲ್ಪಡುವರು.ಅವನು ಅಂಜಿಕೆಯಿಂದ ತನ್ನ ತ್ರಾಣಸ್ಥಾನಕ್ಕೆ ದಾಟಿಹೋಗು ವನು; ಅವನ ಪ್ರಧಾನರು ಧ್ವಜಕ್ಕೆ ಹೆದರಿಓಡು ವರು; ಚೀಯೋನಿನಲ್ಲಿ ಅಗ್ನಿಯನ್ನೂ ಯೆರೂಸಲೇಮಿ ನಲ್ಲಿ ಕುಲುಮೆಯನ್ನೂ ಮಾಡಿಕೊಂಡಿರುವ ಕರ್ತನ ನುಡಿ ಇದೇ.

ಯೆಶಾಯ 33:1

ನಿನಗೆ ಅಯ್ಯೊ ಸೂರೆಯಾಗದಿದ್ದರೂ ನೀನು ಸೂರೆಮಾಡಿದಿ, ನಿನಗೆ ದ್ರೋಹ ಮಾಡದಿದ್ದರೂ ನೀನು ದ್ರೋಹ ಮಾಡಿದಿ, ನೀನು ಸೂರೆ ಮಾಡುವದನ್ನು ಮುಗಿಸಿದಾಗ ನೀನು ಸೂರೆ ಯಾಗುವಿ, ದ್ರೋಹ ಮಾಡುವುದನ್ನು ಬಿಟ್ಟ ಮೇಲೆ ನಿನಗೂ ದ್ರೋಹ ಮಾಡುವರು.

ಯೆಶಾಯ 37:36

ಆಗ ಕರ್ತನ ದೂತನು ಹೊರಟು ಬಂದು ಅಶ್ಶೂರ್ಯರ ಪಾಳೆಯದಲ್ಲಿ ಲಕ್ಷದ ಎಂಭತ್ತೈದು ಸಾವಿರ ಮಂದಿಯನ್ನು ಹೊಡೆದನು. ಇನ್ನೂ ಮೊಬ್ಬಿರು ವಾಗಲೇ ಎದ್ದಾಗ ಇಗೋ, ಅವರು ಸತ್ತ ಹೆಣಗಳಾ ಗಿದ್ದರು.

ಯೆಶಾಯ 49:24

ಶೂರನ ಕೈಯೊಳಗಿಂದ ಕೊಳ್ಳೆಯನ್ನು ತೆಗೆದು ಕೊಳ್ಳಬಹುದೋ? ಇಲ್ಲವೆ ನ್ಯಾಯವಾಗಿ ಸೆರೆಯವ ರನ್ನು ಬಿಡಿಸಬಹುದೋ? 25ಆದರೆ ಕರ್ತನು ಹೀಗ ನ್ನುತ್ತಾನೆ--ಶೂರನ ಸೆರೆಯವರು ತೆಗೆಯಲ್ಪಡುವರು; ಭಯಂಕರವಾದ ಕೊಳ್ಳೆಯು ಬಿಡಿಸಲ್ಪಡುವದು; ನಿನ್ನೊ ಡನೆ ಹೋರಾಡುವವನ ಸಂಗಡ ನಾನೇ ಹೋರಾಡಿ ನಿನ್ನ ಮಕ್ಕಳನ್ನು ನಾನು ರಕ್ಷಿಸುವೆನು.

ಯೆರೆಮಿಯ 21:13

ಅನೀತಿಯಿಂದ ತನ್ನ ಮನೆಯನ್ನು ಅನ್ಯಾಯದಿಂದ ತನ್ನ ಕೊಠಡಿಗಳನ್ನು ಕಟ್ಟಿಸಿಕೊಳ್ಳು ವವನಿಗೂ ಕೂಲಿಕೊಡದೆ ತನ್ನ ನೆರೆಯವನ ಕೈಯಿಂದ ಸುಮ್ಮನೆ ಕೆಲಸತಕ್ಕೊಳ್ಳುವವನಿಗೂ ಅಯ್ಯೋ!

ಯೆರೆಮಿಯ 50:31

ಪಟ್ಟಣವು ಒಂದು ಕಡೆಯಲ್ಲಿ ಹಿಡಿಯಲ್ಪಟ್ಟಿದೆ ಎಂದೂ ದಾಟುವ ಸ್ಥಳಗಳು ವಶವಾದವೆಂದೂ ಬಿದಿರುಗಳು ಬೆಂಕಿಯಿಂದ ಸುಡಲ್ಪಟ್ಟಿವೆ ಎಂದೂ ಯುದ್ಧಸ್ಥರು ಗಾಬರಿ ಪಟ್ಟರೆಂದೂ

ಯೆರೆಮಿಯ 51:25

ಯುದ್ಧಸ್ಥರ ಮೇಲೆ ನೇಮಿಸಲ್ಪಟ್ಟಿದ್ದ ಒಬ್ಬ ಮನೇವಾರ್ತೆಯವನನ್ನೂ ಅರಸನ ಸನ್ನಿಧಾನದಲ್ಲಿ ನಿಂತವರೊಳಗೆ ಪಟ್ಟಣದಲ್ಲಿ ಸಿಕ್ಕಿದ ಏಳು ಮನುಷ್ಯರನ್ನೂ ದೇಶಸ್ಥರನ್ನೂ ದಂಡಿನವರ ಲೆಕ್ಕದಲ್ಲಿ ಸೇರಿಸಿದ ಸೈನ್ಯಾಧಿಪತಿಯ ಲೇಖಕನನ್ನೂ ಪಟ್ಟಣದ ಮಧ್ಯದಲ್ಲಿ ಸಿಕ್ಕಿದ ದೇಶಸ್ಥರಲ್ಲಿ ಅರುವತ್ತು ಮನುಷ್ಯರನ್ನೂ ಪಟ್ಟಣದೊಳಗಿಂದ ತಕ್ಕೊಂಡನು.

ಯೆಹೆಜ್ಕೇಲ 5:8

ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು, ನಾನೇ, ನಿನಗೆ ವಿರೋಧವಾಗಿದ್ದೇನೆ; ಜನಾಂಗಗಳ ಕಣ್ಣುಗಳ ಮುಂದೆ ನಿನ್ನ ಮಧ್ಯದಲ್ಲಿ ನ್ಯಾಯತೀರ್ಪನ್ನು ಮಾಡುತ್ತೇನೆ.

ಯೆಹೆಜ್ಕೇಲ 26:3

ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಇಗೋ, ತೂರ್‌ ದೇಶವೇ, ನಾನು ನಿನಗೆ ವಿರೋಧವಾಗಿದ್ದೇನೆ, ಸಮುದ್ರವು ತನ್ನ ಅಲೆಗಳನ್ನು ಹೇಗೆ ಬರಮಾಡುವದೋ ಹಾಗೆಯೇ ನಾನು ನಿನಗೆ ವಿರೋಧವಾಗಿ ಅನೇಕ ಜನಾಂಗಗಳನ್ನು ನಿನ್ನ ಮೇಲೆ ಬರಮಾಡುವೆನು.

ಯೆಹೆಜ್ಕೇಲ 28:22

ನೀನು ಹೇಳಬೇಕಾದದ್ದೇನಂದರೆ -- ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ಚಿದೋನೇ ನಾನು ನಿನಗೆ ವಿರೋಧವಾಗಿದ್ದೇನೆ; ನಿನ್ನ ಮಧ್ಯದಲ್ಲಿ ಘನವನ್ನು ಹೊಂದುವೆನು. ಆಗ ನಾನು ಅದರಲ್ಲಿ ನ್ಯಾಯಗಳನ್ನು ತೀರಿಸಿ, ಪರಿಶುದ್ಧನಾಗುವಾಗ ನಾನೇ ಕರ್ತನೆಂದು ತಿಳಿಯುವರು.

ಯೆಹೆಜ್ಕೇಲ 29:3

ನೀನು ಮಾತನಾಡಿ ಹೇಳಬೇಕಾದ ದ್ದೇನಂದರೆ--ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಐಗುಪ್ತದ ಅರಸನಾದ ಫರೋಹನೇ, ತನ್ನ ನದಿಗಳ ಮಧ್ಯದಲ್ಲಿ ಮಲಗಿಕೊಂಡು--ಈ ನದಿ ನನ್ನದು, ನಾನೇ ಅದನ್ನು ನನಗೋಸ್ಕರ ಮಾಡಿ ಕೊಂಡಿದ್ದೇನೆಂದು ಹೇಳಿಕೊಂಡ ದೊಡ್ಡ ಘಟ ಸರ್ಪವೇ, ಇಗೋ, ನಾನು ನಿನಗೆ ವಿರುದ್ಧವಾಗಿದ್ದೇನೆ.

ಯೆಹೆಜ್ಕೇಲ 29:10

ಆದದರಿಂದ ಇಗೋ, ನಾನು ನಿನಗೆ ವಿರೋಧ ವಾಗಿಯೂ ನಿನ್ನ ನದಿಗಳಿಗೆ ವಿರುದ್ಧವಾಗಿಯೂ ಇದ್ದೇನೆ. ಐಗುಪ್ತದೇಶವನ್ನು ಸೆವೇನೆಯ ಗೋಪುರ ಮೊದಲುಗೊಂಡು ಕೂಷಿನ ಪ್ರಾಂತ್ಯದವರೆಗೂ ಸಂಪೂರ್ಣವಾಗಿ ಕಾಡಾಗಿಯೂ ಹಾಳಾಗಿಯೂ ಮಾಡುತ್ತೇನೆ.

ಯೆಹೆಜ್ಕೇಲ 35:3

ಅದಕ್ಕೆ ಹೇಳು--ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ಸೇಯಾರ್‌ ಪರ್ವತವೇ, ನಾನು ನಿನಗೆ ವಿರುದ್ಧವಾಗಿ ದ್ದೇನೆ. ನಾನು ನನ್ನ ಕೈಯನ್ನು ನಿನಗೆ ವಿರುದ್ಧವಾಗಿ ಚಾಚುತ್ತೇನೆ. ನಾನು ನಿನ್ನನ್ನು ಸಂಪೂರ್ಣವಾಗಿ ನಾಶಮಾಡುತ್ತೇನೆ.

ಯೆಹೆಜ್ಕೇಲ 38:3

ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಮೆಷೆಕ್‌ ತೂಬಲಿಗೆ ಮುಖ್ಯ ಪ್ರಭುವಾದ ಗೋಗನೇ, ನಾನು ನಿನಗೆ ವಿರೋಧವಾಗಿದ್ದೇನೆ.

ಯೆಹೆಜ್ಕೇಲ 39:1

ಆದದರಿಂದ, ಮನುಷ್ಯಪುತ್ರನೇ, ನೀನು, ಗೋಗನಿಗೆ ವಿರುದ್ಧವಾಗಿ ಪ್ರವಾದಿಸಿ, ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಹೇಳು --ಇಗೋ, ಮೇಷಕ್‌ ಮತ್ತು ತೂಬಲಿಗೆ ಮುಖ್ಯ ಪ್ರಭುವಾದ ಓ ಗೋಗನೇ, ನಾನು ನಿನಗೆ ವಿರೋಧ ವಾಗಿದ್ದೇನೆ;

ನಹೂಮ 3:1

ರಕ್ತವುಳ್ಳ ಪಟ್ಟಣಕ್ಕೆ ಅಯ್ಯೋ! ಅದೆಲ್ಲಾ ಸುಳ್ಳಿನಿಂದಲೂ ಕಳ್ಳತನದಿಂದಲೂ ತುಂಬಿ ಯದೆ; ಕೊಳ್ಳೆಯನ್ನು ಬಿಡುವದಿಲ್ಲ.

ನಹೂಮ 3:5

ಸೈನ್ಯಗಳ ಕರ್ತನು ಹೇಳುವದೇ ನಂದರೆ--ಇಗೋ, ನಾನು ನಿನಗೆ ವಿರೋಧವಾಗಿ ದ್ದೇನೆ; ನಿನ್ನ ಸೆರಗುಗಳನ್ನು ನಿನ್ನ ಮುಖದ ಮೇಲೆ ಎತ್ತಿ ಜನಾಂಗಗಳಿಗೆ ನಿನ್ನ ನಾಚಿಕೆಯನ್ನೂ ರಾಜ್ಯಗಳಿಗೆ ನಿನ್ನ ನಿಂದೆಯ ಬೆತ್ತಲೆತನವನ್ನೂ ತೋರಿಸುತ್ತೇನೆ.

ನಹೂಮ 3:12

ನಿನ್ನ ಕೋಟೆಗಳೆಲ್ಲಾ ಮೊದಲನೇ ಹಣ್ಣುಗಳುಳ್ಳ ಅಂಜೂರದ ಗಿಡಗಳ ಹಾಗಿರುವವು; ಅಲ್ಲಾಡಿಸಲ್ಪಟ್ಟರೆ ತಿನ್ನುವವನ ಬಾಯಲ್ಲಿಯೇ ಬೀಳುವವು.

Interlinear

Choose Theme