Home Bibles ಮೀಕ 7:13 · ಕನ್ನಡ ಬೈಬಲ್
ಮೀಕ 7:13 · ಕನ್ನಡ ಬೈಬಲ್

ಆದರೂ ದೇಶವು ಅದರ ನಿವಾಸಿಗಳ ನಿಮಿತ್ತ ಅವರ ದುಷ್ಕ್ರಿಯೆಗಳ ಫಲದಿಂದ ಹಾಳಾಗುವದು.

Cross references

ಲೇವ್ಯಕಾಂಡ 26:33

ನಿಮ್ಮನ್ನು ಜನಾಂಗಗಳಲ್ಲಿ ಚದರಿಸಿ ನಿಮ್ಮ ಹಿಂದೆ ಕತ್ತಿಯನ್ನು ಬೀಸುವೆನು; ನಿಮ್ಮ ಭೂಮಿ ಹಾಳಾಗಿ ರುವದು; ನಿಮ್ಮ ಪಟ್ಟಣಗಳು ನಾಶವಾಗಿರುವವು.

ಯೋಬ 4:8

ನಾನು ಕಂಡ ಹಾಗೆ ದುಷ್ಟತನವನ್ನು ಉಳುವವರೂ ದುಷ್ಟತನವನ್ನು ಬಿತ್ತುವ ವರೂ ಅದನ್ನೇ ಕೊಯ್ಯುತ್ತಾರೆ.

ಸಾಮೇತಿಗಳು 1:31

ಅವರು ತಮ್ಮ ಸ್ವಂತ ನಡತೆಯ ಫಲವನ್ನು ಅನುಭವಿಸಿ ತಮ್ಮ ಸ್ವಂತ ಕುಯುಕ್ತಿಗಳಿಂದಲೇ ತುಂಬಿಕೊಳ್ಳುವರು.

ಸಾಮೇತಿಗಳು 5:22

ದುಷ್ಟ ನನ್ನು ಅವನ ಸ್ವಂತ ಅಕ್ರಮಗಳೇ ಹಿಡಿಯುವವು; ತನ್ನ ಪಾಪಗಳ ಪಾಶಗಳಿಂದಲೇ ಅವನು ಬಂಧಿಸಲ್ಪಡು ವನು.ಶಿಕ್ಷಣವಿಲ್ಲದೆ ಅವನು ಸಾಯುವನು; ತನ್ನ ಮೂಢತ್ವದ ದೊಡ್ಡಸ್ತಿಕೆಯಲ್ಲಿ ತಪ್ಪಿಹೋಗುವನು.

ಸಾಮೇತಿಗಳು 31:31

ಆಕೆಯ ಕೈಕೆಲಸದ ಪ್ರತಿಫಲವನ್ನು ಸಲ್ಲಿಸಿರಿ; ದ್ವಾರಗಳಲ್ಲಿ ಆಕೆಯ ಕಾರ್ಯಗಳು ಆಕೆಯನ್ನು ಹೊಗಳಲಿ.

ಯೆಶಾಯ 3:10

ನೀತಿವಂತನಿಗೆ ನೀವು--ಅವನಿಗೆ ಒಳ್ಳೇದಿರಲಿ ಎಂದು ಹೇಳಿರಿ; ಅವರು ತಮ್ಮ ಕ್ರಿಯೆಗಳ ಫಲವನ್ನು ತಿನ್ನುವರು.

ಯೆಶಾಯ 6:11

ಆಗ ನಾನು ಕರ್ತನೇ, ಇದು ಎಷ್ಟರ ವರೆಗೆ ಅಂದೆನು. ಅದಕ್ಕೆ ಆತನು--ಪಟ್ಟಣಗಳು ನಿವಾಸಿಗಳಿಲ್ಲದೆ, ಮನೆಗಳು ಮನುಷ್ಯ ನಿಲ್ಲದೆ ದೇಶವು ಸಂಪೂರ್ಣವಾಗಿ ಹಾಳಾಗುವ ವರೆಗೆ

ಯೆಶಾಯ 17:9

ಆ ದಿವಸದಲ್ಲಿ ಅವನ ಬಲ ವಾದ ಪಟ್ಟಣಗಳು ಬಿಟ್ಟುಬಿಟ್ಟ ಅರಣ್ಯಗಳ ಹಾಗೆಯೂ ಇಸ್ರಾಯೇಲಿನ ಮಕ್ಕಳ ಮುಂದೆ ಬಿಡಲ್ಪಟ್ಟ ಕೊನೆಗಳ ಹಾಗೆಯೂ ಇದ್ದು ಹಾಳಾಗಿರುವದು.

ಯೆಶಾಯ 24:3

ಭೂಮಿಯು ಬರಿದೇ ಬರಿದಾಗುವದು ಮತ್ತು ಸಂಪೂರ್ಣ ಸುಲಿಗೆಯಾಗು ವದು. ಕರ್ತನು ತಾನೇ ಈ ಮಾತನ್ನು ಹೇಳಿದ್ದಾನೆ.

ಯೆರೆಮಿಯ 17:10

ಅದು ನನ್ನ ಸ್ವರಕ್ಕೆ ವಿಧೇಯವಾಗದೆ ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದರೆ ನಾನು ಅದಕ್ಕೆ ಮೇಲನ್ನು ಮಾಡುತ್ತೇನೆಂದು ಹೇಳಿದ ಒಳ್ಳೇದನ್ನು ಕುರಿತು ಪಶ್ಚಾತ್ತಾಪಪಡುವೆನು.

ಯೆರೆಮಿಯ 21:14

ಅವನು--ನಾನು ವಿಸ್ತಾರವಾದ ಮನೆಯನ್ನೂ ವಿಶಾಲವಾದ ಕೊಠಡಿಗಳನ್ನೂ ಕಟ್ಟಿಕೊಳ್ಳುವೆನೆಂದು ಹೇಳಿ ಕಿಟಕಿಗಳನ್ನು ಕೊರೆದು ದೇವದಾರಿನ ಹಲಿಗೆ ಗಳನ್ನು ಹಾಕಿ ಕೆಂಪು ಬಣ್ಣವನ್ನು ಹಚ್ಚುವವನಿಗೂ ಅಯ್ಯೋ!

ಯೆರೆಮಿಯ 25:11

ಆಗ ಯಾಜಕರೂ ಪ್ರವಾದಿ ಗಳೂ ಪ್ರಧಾನರಿಗೂ ಜನರೆಲ್ಲರಿಗೂ ಹೇಳಿದ್ದೇನಂದರೆ --ಈ ಮನುಷ್ಯನು ಮರಣಕ್ಕೆ ತಕ್ಕವನು. ಯಾಕಂದರೆ ನಿಮ್ಮ ಕಿವಿಗಳಿಂದಲೇ ನೀವು ಕೇಳಿದ ಪ್ರಕಾರ ಅವನು ಈ ಪಟ್ಟಣಕ್ಕೆ ವಿರೋಧವಾಗಿ ಪ್ರವಾದಿಸಿದ್ದಾನೆ ಎಂಬದೇ.

ಯೆರೆಮಿಯ 32:19

ಇದಲ್ಲದೆ ಕರ್ತನ ವಾಕ್ಯವು ಯೆರೆವಿಾಯನಿಗೆ ಉಂಟಾಗಿ ಹೇಳಿದ್ದೇ ನಂದರೆ--ಕರ್ತನು ಹೀಗೆ ಹೇಳುತ್ತಾನೆ--

ಯೆಹೆಜ್ಕೇಲ 12:19

ನಿನ್ನ ದೇಶದ ಜನರಿಗೆ ಹೀಗೆ ಹೇಳು--ಯೆರೂಸಲೇಮಿನ ನಿವಾಸಿ ಗಳಿಗೆ ಮತ್ತು ಇಸ್ರಾಯೇಲ್ಯರ ದೇಶಕ್ಕೆ ದೇವರಾದ ಕರ್ತನು ಹೇಳಿದ್ದೇನಂದರೆ--ಅವರು ತಮ್ಮ ರೊಟ್ಟಿ ಯನ್ನು ಎಚ್ಚರಿಕೆಯಿಂದಲೇ ತಿನ್ನುವರು; ನೀರನ್ನು ವಿಸ್ಮಯ ದಿಂದಲೇ ಕುಡಿಯುವರು. ಯಾಕಂದರೆ ಅದರಲ್ಲಿ ವಾಸ ವಾಗಿರುವವರೆಲ್ಲರ ಬಲಾತ್ಕಾರದಿಂದ ಅವರ ದೇಶವು ಅವರ ಪರಿಪೂರ್ಣತೆಯನ್ನೆಲಾ ಬಿಟ್ಟು ಹಾಳಾಗು ವದು.

ದಾನಿಯೇಲ 4:26

ಆ ಮರದ ಬೇರಿನ ಮೋಟನ್ನು ಉಳಿಸಬೇಕೆಂದು ಅವರು ಆಜ್ಞೆ ಮಾಡಿದ್ದರಲ್ಲಿ ಅಂದರೆ ಪರಲೋಕವು ಆಳುತ್ತದೆಂದು ನೀನು ತಿಳಿದುಕೊಂಡ ಮೇಲೆ ನಿನ್ನ ರಾಜ್ಯವು ನಿನಗೆ ಸ್ಥಿರವಾಗುವದು.

ಮೀಕ 3:12

ಆದಕಾರಣ ನಿಮ್ಮ ನಿಮಿತ್ತವೇ, ಚೀಯೋನು ಹೊಲದ ಹಾಗೆ ಉಳಲ್ಪಡುವದು; ಯೆರೂಸಲೇಮು ದಿಬ್ಬೆಗಳಾಗುವದು, ಆಲಯದ ಪರ್ವತವು ಅಡವಿಯ ಉನ್ನತ ಸ್ಥಳಗಳ ಹಾಗಾಗುವದು.

ಮೀಕ 6:13

ಆದದರಿಂದ ನಾನು ಸಹ ನಿನ್ನನ್ನು ಹೊಡೆದು ನಿನಗೆ ರೋಗವನ್ನು ಬರಮಾಡುವೆನು; ನಿನ್ನ ಪಾಪಗಳ ನಿಮಿತ್ತ ನಿನ್ನನ್ನು ಹಾಳುಮಾಡುವೆನು.

ಲೂಕ 21:20

ಆದರೆ ಸೈನ್ಯಗಳು ಯೆರೂಸಲೇ ಮನ್ನು ಮುತ್ತಿಗೆ ಹಾಕುವದನ್ನು ನೀವು ನೋಡುವಾಗ ಅದು ಹಾಳಾಗುವ ಕಾಲವು ಸವಿಾಪಿಸಿದೆ ಎಂದು ತಿಳಿದುಕೊಳ್ಳಿರಿ.

ಗಲಾತ್ಯದವರಿಗೆ 6:7

ಮೋಸ ಹೊಗಬೇಡಿರಿ; ದೇವರು ಪರಿಹಾಸ್ಯ ಮಾಡಲ್ಪಡುವಾತನಲ್ಲ; ಯಾಕಂದರೆ ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು.

Interlinear

Choose Theme