Home Bibles ಮೀಕ 1:3 · ಕನ್ನಡ ಬೈಬಲ್
ಮೀಕ 1:3 · ಕನ್ನಡ ಬೈಬಲ್

ಇಗೋ, ಕರ್ತನು ತನ್ನ ಸ್ಥಾನದಿಂದ ಹೊರಡುತ್ತಾನೆ; ಆತನು ಇಳಿದು ಭೂಮಿಯ ಉನ್ನತವಾದ ಸ್ಥಳಗಳ ಮೇಲೆ ತುಳಿಯುವನು.

Cross references

ದ್ವಿತೀಯೋಪದೇಶಕಾಂಡ 32:13

ಅವನು ಹೊಲದ ಆದಾಯವನ್ನು ತಿನ್ನುವ ಹಾಗೆ ಭೂಮಿಯ ಎತ್ತರವಾದ ಸ್ಥಳಗಳಲ್ಲಿ ಅವನನ್ನು ಹೋಗ ಮಾಡಿ ಬಂಡೆಯೊಳಗಿಂದ ಜೇನನ್ನೂ ಬಿಳೀ ಕಲ್ಲಿನ ಬಂಡೆಯೊಳಗಿಂದ ಎಣ್ಣೆಯನ್ನೂ ಅವನಿಗೆ ಕುಡಿಯಲು ಕೊಟ್ಟನು.

ದ್ವಿತೀಯೋಪದೇಶಕಾಂಡ 33:29

ಇಸ್ರಾಯೇಲೇ, ನೀನು ಸಂತೋಷವುಳ್ಳವನೂ ನಿನ್ನ ಸಹಾಯದ ಗುರಾಣಿಯೂ ನಿನ್ನ ಘನತೆಯ ಕತ್ತಿಯೂ ಆಗಿರುವ ಕರ್ತನಿಂದ ರಕ್ಷಿಸಲ್ಪಟ್ಟ ಓ ಜನವೇ, ನಿನ್ನ ಹಾಗೆ ಯಾರಿದ್ದಾರೆ? ನಿನ್ನ ಶತ್ರುಗಳು ನಿನಗೆ ಸುಳ್ಳುಗಾರರಾಗಿ ಕಂಡುಬರುವರು. ನೀನು ಅವರ ಉನ್ನತವಾದ ಸ್ಥಳಗಳ ಮೇಲೆ ನಡೆದು ಹೋಗುವಿ.

ಯೋಬ 40:12

ಗರ್ವಿಷ್ಟರನ್ನೆಲ್ಲಾ ನೋಡಿ ತಗ್ಗಿಸಿಬಿಡು; ದುಷ್ಟರನ್ನು ಅವರ ಸ್ಥಳದಲ್ಲಿ ತುಳಿದುಬಿಡು.

ಕೀರ್ತನೆಗಳು 115:3

ನಮ್ಮ ದೇವರು ಪರಲೋಕದಲ್ಲಿದ್ದಾನೆ; ತಾನು ಇಚ್ಚಿಸುವ ದನ್ನೆಲ್ಲಾ ಮಾಡುತ್ತಾನೆ.

ಯೆಶಾಯ 2:10

ಕರ್ತನ ಭಯಕ್ಕೂ ಆತನ ಮಹಿಮೆಯ ಘನತೆಗೂ ಬಂಡೆಗಳಲ್ಲಿ ಸೇರಿಕೋ, ದೂಳಿನಲ್ಲಿ ನೀನು ಅಡಗಿಕೋ.

ಯೆಶಾಯ 25:10

ಈ ಪರ್ವತದಲ್ಲಿ ಕರ್ತನ ಕೈ ವಿಶ್ರ ಮಿಸಿಕೊಳ್ಳುವದು; (ನೆಲೆಯಾಗಿರುವದು) ಒಣ ಹುಲ್ಲ ನ್ನು ತಿಪ್ಪೆಗುಂಡಿಯಲ್ಲಿ ತುಳಿಯುವಂತೆ ಮೋವಾಬು ಆತನ ಕೆಳಗೆ ತುಳಿಯಲ್ಪಡುವದು.

ಯೆಶಾಯ 26:21

ಇಗೋ, ಭೂನಿವಾಸಿಗಳ ದುಷ್ಕೃತ್ಯಗಳನ್ನು ಶಿಕ್ಷಿಸು ವದಕ್ಕೆ ಕರ್ತನು ತನ್ನ ಸ್ಥಳದಿಂದ ಹೊರಟಿದ್ದಾನೆ; ಭೂಮಿಯು ಸಹ ತನ್ನಲ್ಲಿ ಕೊಂದು ಹಾಕಿದವರನ್ನು ಇನ್ನು ಮುಚ್ಚಿಕೊಳ್ಳದೆ ತನ್ನಲ್ಲಿರುವ ರಕ್ತಾಪರಾಧವನ್ನು ಪ್ರಕಟಮಾಡುವದು.

ಯೆಶಾಯ 63:3

ದ್ರಾಕ್ಷೇ ತೊಟ್ಟಿಯನ್ನು ನಾನೊಬ್ಬನೇ ತುಳಿದಿದ್ದೇನೆ, ಜನಗಳಲ್ಲಿ ಒಬ್ಬನಾದರೂ ನನ್ನ ಸಂಗಡ ಇರಲಿಲ್ಲ; ನನ್ನ ಕೋಪದಲ್ಲಿ ಅವರನ್ನು ತುಳಿದಿದ್ದೇನೆ, ನನ ಉರಿಯಲ್ಲಿ ಅವರನ್ನು ಜಜ್ಜಿಬಿಟ್ಟಿದ್ದೇನೆ. ಆದದರಿಂದ ಅವರ ರಕ್ತವು ನನ್ನ ಬಟ್ಟೆಗಳ ಮೇಲೆ ಚಿಮುಕಿಸ ಲ್ಪಟ್ಟಿದೆ, ನನ್ನ ವಸ್ತ್ರಗಳೆಲ್ಲಾ ಮೈಲಿಗೆಯಾದವು.

ಯೆಶಾಯ 64:1

ಆಹಾ, ನೀನು ಆಕಾಶಗಳನ್ನು ಹರಿದು ಬಿಟ್ಟು, ಇಳಿದು ಬಂದಿದ್ದರೆ ಎಷ್ಟೋ ಚೆನ್ನಾ ಗಿತ್ತು! ಬಾ! ಬೆಟ್ಟಗಳು ನಿನ್ನ ಸಮ್ಮುಖದಲ್ಲಿ ಕರಗಲಿ! ಜನಾಂಗಗಳು ನಿನ್ನ ಸಮ್ಮುಖದಲ್ಲಿ ನಡುಗುವ ಹಾಗೆ,

ಯೆಹೆಜ್ಕೇಲ 3:12

ಆಮೇಲೆ ಆತ್ಮನು ನನ್ನನ್ನು ಮೇಲೆ ತೆಗೆದುಕೊಂಡು ಹೋದನು. ನಾನು--ಕರ್ತನ ಮಹಿಮೆ ತನ್ನ ಸ್ಥಳ ದೊಳಗಿಂದ ಹರಸಲ್ಪಡಲೆಂದು ಘೋಷಿಸುವ ಒಂದು ಮಹಾಧ್ವನಿಯು ನನ್ನ ಹಿಂದೆ ನುಗ್ಗಿಕೊಂಡು ಬರುವ ದನ್ನು ನಾನು ಕೇಳಿಸಿಕೊಂಡೆನು.

ಹೊಶೇಯ 5:14

ನಾನು ಎಫ್ರಾಯಾಮಿಗೆ ಸಿಂಹದ ಹಾಗೆಯೂ ಯೆಹೂದದ ಮನೆತನದವರಿಗೆ ಪ್ರಾಯದ ಸಿಂಹದ ಹಾಗೆಯೂ ಇರುವೆನು. ಹೌದು, ನಾನು, ನಾನೇ ಸೀಳಿಬಿಟ್ಟು ಹೋಗುವೆನು, ನಾನು ಎತ್ತಿಕೊಂಡು ಹೋಗಲು ಅವನನ್ನು ಯಾರೂ ಬಿಡಿಸಲಾರರು.ತಾವು ತಮ್ಮ ಅಪರಾಧವನ್ನು ಅರಿಕೆಮಾಡಿ ನನ್ನ ಮುಖವನ್ನು ಹುಡುಕುವ ವರೆಗೂ ನಾನು ತಿರುಗಿ ಕೊಂಡು ನನ್ನ ಸ್ಥಳಕ್ಕೆ ಹೋಗುವೆನು, ಅವರ ಕಷ್ಟದಲ್ಲಿ ಅವರು ನನ್ನನ್ನು ಬೇಗ ಹುಡುಕುವರು.

ಆಮೋಸ 4:13

ಇಗೋ, ಬೆಟ್ಟಗಳನ್ನು ರೂಪಿಸಿ ಗಾಳಿ ಯನ್ನು ನಿರ್ಮಿಸಿ ಮನುಷ್ಯನಿಗೆ ಅವನ ಯೋಚನೆ ಏನೆಂದು ತಿಳಿಸಿ ಉದಯವನ್ನು ಅಂಧಕಾರವನ್ನಾಗಿ ಮಾಡಿ ಭೂಮಿಯ ಉನ್ನತ ಸ್ಥಳಗಳನ್ನು ತುಳಿದು ಬಿಡುವಾತನು ಆತನೇ. ಕರ್ತನೂ ಸೈನ್ಯಗಳ ದೇವರೂ ಎಂಬದು ಆತನ ಹೆಸರು.

ಆಮೋಸ 9:5

ಸೈನ್ಯಗಳ ದೇವರಾದ ಕರ್ತನೇ, ದೇಶವನ್ನು ಮುಟ್ಟಿದ ಮಾತ್ರಕ್ಕೆ ಅದು ಕರಗಿ ಹೋಗುವದು. ಅದರಲ್ಲಿ ವಾಸವಾಗಿರುವವರೆಲ್ಲರೂ ಗೋಳಾಡುವರು. ಅವೆಲ್ಲಾ ನದಿಯ ಹಾಗೆ ಪ್ರವಾಹದಂತೆ ಉಕ್ಕಿ, ಐಗುಪ್ತದ ಪ್ರವಾಹದಂತೆ ಉಕ್ಕಿ ಮುಳುಗಿ ಹೋಗುವದು.

ಹಬಕ್ಕೂಕ 3:19

ಕರ್ತನಾದ ದೇವರು ನನ್ನ ಬಲವಾಗಿದ್ದಾನೆ. ಆತನು ನನ್ನ ಕಾಲುಗಳನ್ನು ಜಿಂಕೆಯ ಕಾಲುಗಳ ಹಾಗೆ ಮಾಡಿ ನನ್ನ ಉನ್ನತ ಸ್ಥಳಗಳಲ್ಲಿ ನಾನು ನಡೆಯುವಂತೆ ಆತನು ಮಾಡುವನು. ಪ್ರಧಾನ ಗಾಯಕನ ಕೀರ್ತನ ಸಂಗ್ರಹದಿಂದ ತೆಗೆದದ್ದು: ನನ್ನ ತಂತಿವಾದ್ಯದೊಡನೆ ಹಾಡತಕ್ಕದ್ದು.

Interlinear

Choose Theme