Home Bibles ಮತ್ತಾಯ 9:1 · ಕನ್ನಡ ಬೈಬಲ್
ಮತ್ತಾಯ 9:1 · ಕನ್ನಡ ಬೈಬಲ್

ಆಗ ಆತನು ದೋಣಿಯನ್ನು ಹತ್ತಿ ಅಲ್ಲಿಂದ ಹೊರಟು ತನ್ನ ಸ್ವಂತ ಪಟ್ಟಣಕ್ಕೆ ಬಂದನು.

Cross references

ಮತ್ತಾಯ 4:13

ಮತ್ತು ಆತನು ನಜರೇತನ್ನು ಬಿಟ್ಟು ಜೆಬುಲೋನ್‌, ನೆಫ್ತಲೀಮ್‌ ಮೇರೆಗಳ ಸಮುದ್ರತೀರದಲ್ಲಿರುವ ಕಪೆರ್ನೌಮಿಗೆ ಬಂದು ಅಲ್ಲಿ ವಾಸಿಸಿದನು.

ಮತ್ತಾಯ 7:6

ನಾಯಿಗಳಿಗೆ ಪವಿತ್ರವಾದದ್ದನ್ನು ಕೊಡಬೇಡಿರಿ ಇಲ್ಲವೆ ನಿಮ್ಮ ಮುತ್ತುಗಳನ್ನು ಹಂದಿಗಳ ಮುಂದೆ ಹಾಕಬೇಡಿರಿ. ಹಾಕಿದರೆ ಅವುಗಳನ್ನು ತುಳಿದು ಬಿಟ್ಟು ಮತ್ತೆ ತಿರುಗಿಕೊಂಡು ನಿಮ್ಮನ್ನು ಹರಿದು ಬಿಟ್ಟಾವು.

ಮತ್ತಾಯ 8:18

ಇದಾದಮೇಲೆ ಯೇಸು ತನ್ನ ಸುತ್ತಲೂ ಇದ್ದ ಜನರ ದೊಡ್ಡ ಸಮೂಹಗಳನ್ನು ನೋಡಿ ಆಚೆಕಡೆಗೆ ಹೊರಟುಹೋಗುವಂತೆ ಅಪ್ಪಣೆ ಕೊಟ್ಟನು.

ಮತ್ತಾಯ 8:23

ಆತನು ದೋಣಿಯನ್ನು ಹತ್ತಿದಾಗ ಆತನ ಶಿಷ್ಯರು ಆತನನ್ನು ಹಿಂಬಾಲಿಸಿದರು.

ಮಾರ್ಕ 5:21

ಯೇಸು ತಿರಿಗಿ ದೋಣಿಯಲ್ಲಿ ಆಚೇದಡಕ್ಕೆ ಹೋದಾಗ ಬಹಳ ಜನರು ಆತನ ಬಳಿಗೆ ಕೂಡಿಬಂದರು; ಆಗ ಆತನು ಸಮುದ್ರದ ಸವಿಾಪದ ಲ್ಲಿದ್ದನು.

ಲೂಕ 8:37

ಆಗ ಗದರೇನನ ಸೀಮೆಯ ಸುತ್ತು ಮುತ್ತಲಿನ ಜನಸಮೂಹವೆಲ್ಲವು ಬಹಳ ಭಯ ಹಿಡಿದವರಾದದರಿಂದ ಆತನು ತಮ್ಮ ಬಳಿಯಿಂದ ಹೊರಟುಹೋಗಬೇಕೆಂದು ಆತನನ್ನು ಬೇಡಿ ಕೊಂಡರು; ಆತನು ದೋಣಿಯನ್ನು ಹತ್ತಿಹಿಂದಿರುಗಿ ದನು.

ಪ್ರಕಟನೆ 22:11

ಅನ್ಯಾಯ ಮಾಡುವವನು ಇನ್ನೂ ಅನ್ಯಾಯ ಮಾಡಲಿ; ಮೈಲಿಗೆಯಾದವನು ಇನ್ನೂ ತನ್ನನ್ನು ಮೈಲಿಗೆ ಮಾಡಿಕೊಳ್ಳಲಿ; ನೀತಿವಂತನು ಇನ್ನೂ ನೀತಿವಂತ ನಾಗಲಿ; ಪವಿತ್ರನು ತಾನು ಇನ್ನೂ ಪವಿತ್ರನಾಗಿರಲಿ;

Interlinear

Choose Theme