Home Bibles ಮತ್ತಾಯ 4:6 · ಕನ್ನಡ ಬೈಬಲ್
ಮತ್ತಾಯ 4:6 · ಕನ್ನಡ ಬೈಬಲ್

ನೀನು ದೇವ ಕುಮಾರನಾಗಿದ್ದರೆ ನೀನಾಗಿಯೇ ಕೆಳಗೆ ದುಮುಕು; ಯಾಕಂದರೆ--ಯಾವ ಸಮಯದಲ್ಲಿಯಾದರೂ ನಿನ್ನ ಕಾಲು ಕಲ್ಲಿಗೆ ಅಪ್ಪಳಿಸದಂತೆ ಆತನು ತನ್ನ ದೂತರಿಗೆ ನಿನ್ನ ವಿಷಯವಾಗಿ ಅಪ್ಪಣೆ ಕೊಡುವನು; ಮತ್ತು ಅವರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು ಎಂದು ಬರೆದದೆ ಅಂದ

Cross references

ಯೋಬ 1:10

ನೀನು ಅವನಿಗೂ ಅವನ ಮನೆಗೂ ಅವನಿಗೆ ಉಂಟಾದ ಎಲ್ಲವುಗಳಿಗೂ ಸುತ್ತಲೂ ಬೇಲಿ ಕಟ್ಟಿದೆಯಲ್ಲಾ? ಅವನ ಕೈ ಕೆಲಸವನ್ನು ಆಶೀರ್ವದಿಸಿದಿ; ಅವನ ಸಂಪತ್ತು ದೇಶದಲ್ಲಿ ಹಬ್ಬಿಯದೆ.

ಯೋಬ 5:23

ಹೊಲದ ಕಲ್ಲುಗಳ ಸಂಗಡ ನಿನಗೆ ಒಡಂಬಡಿಕೆ ಇರುವದು; ಹೊಲದ ಮೃಗಗಳು ನಿನ್ನೊಂದಿಗೆ ಸಮಾ ಧಾನವಾಗಿರುವವು.

ಕೀರ್ತನೆಗಳು 34:7

ಆತನಿಗೆ ಭಯಪಡುವವರ ಸುತ್ತಲೂ ಕರ್ತನ ದೂತನು ಇಳು ಕೊಂಡು ಅವರನ್ನು ಕಾಪಾಡುತ್ತಾನೆ.

ಕೀರ್ತನೆಗಳು 34:20

ಆತನ ಎಲುಬು ಗಳನ್ನೆಲ್ಲಾ ಕಾಪಾಡುತ್ತಾನೆ; ಅವುಗಳಲ್ಲಿ ಒಂದಾದರೂ ಮುರಿಯಲ್ಪಡುವದಿಲ್ಲ.

ಕೀರ್ತನೆಗಳು 91:11

ನಿನ್ನ ಎಲ್ಲಾ ಮಾರ್ಗಗಳಲ್ಲಿ ನಿನ್ನನ್ನು ಕಾಪಾಡುವದಕ್ಕೆ ಆತನು ತನ್ನ ದೂತರಿಗೆ ನಿನ್ನ ವಿಷಯವಾಗಿ ಆಜ್ಞಾಪಿಸುವನು.

ಮತ್ತಾಯ 4:4

ಆದರೆ ಆತನು ಪ್ರತ್ಯುತ್ತರವಾಗಿ--ಮನುಷ್ಯನು ರೊಟ್ಟಿ ಮಾತ್ರದಿಂದಲೇ ಜೀವಿಸುವದಿಲ್ಲ, ಆದರೆ ದೇವರ ಬಾಯೊಳಗಿಂದ ಹೊರಡುವ ಪ್ರತಿಯೊಂದು ಮಾತಿನಿಂದ ಜೀವಿಸುವನು ಎಂದು ಬರೆದದೆ ಅಂದನು.

ಲೂಕ 4:9

ಇದಲ್ಲದೆ ಅವನು ಆತನನ್ನು ಯೆರೂಸಲೇಮಿಗೆ ಕರತಂದು ದೇವಾಲಯ ಗೋಪುರದ ಮೇಲೆ ನಿಲ್ಲಿಸಿ ಆತನಿಗೆ--ನೀನು ದೇವಕುಮಾರನಾಗಿದ್ದರೆ ಇಲ್ಲಿಂದ ಕೆಳಗೆ ದುಮುಕು;

2 ಕೊರಿಂಥದವರಿಗೆ 11:14

ಇದೇನೂ ಆಶ್ಚರ್ಯವಲ್ಲ; ಯಾಕಂದರೆ ಸೈತಾನನು ಬೆಳಕಿನ ದೂತನಂತೆ ಕಾಣಿಸಿಕೊಳ್ಳುವ ಹಾಗೆ ತನ್ನನ್ನು ತಾನೇ ಮಾರ್ಪಡಿಸಿಕೊಳ್ಳುತ್ತಾನೆ.

ಹೆಬ್ರಿಯರಿಗೆ 1:14

ಇವರೆಲ್ಲರು ರಕ್ಷಣೆಯನ್ನು ಬಾಧ್ಯವಾಗಿ ಹೊಂದಬೇಕಾಗಿರುವವರ ಸೇವೆಗೋಸ್ಕರ ಕಳುಹಿ ಸಲ್ಪಟ್ಟ ಊಳಿಗದ ಆತ್ಮಗಳಲ್ಲವೋ?

Interlinear

Choose Theme