Home Bibles ಮತ್ತಾಯ 26:43 · ಕನ್ನಡ ಬೈಬಲ್
ಮತ್ತಾಯ 26:43 · ಕನ್ನಡ ಬೈಬಲ್

ಆತನು ಬಂದು ಅವರು ತಿರಿಗಿ ನಿದ್ದೆ ಮಾಡುವದನ್ನು ಕಂಡನು; ಯಾಕಂದರೆ ಅವರ ಕಣ್ಣುಗಳು ಭಾರವಾಗಿದ್ದವು.

Cross references

ಸಾಮೇತಿಗಳು 23:34

ಹೌದು, ಸಮುದ್ರದ ಮಧ್ಯದಲ್ಲಿ ಮಲಗಿ ರುವವನಂತೆ ಇಲ್ಲವೆ ಹಡಗಿನ ಕಂಬದ ತುದಿಯಲ್ಲಿ ಇದ್ದವನಂತೆ ನೀನು ಇರುವಿ.ನೀನು--ಜನರು ನನ್ನನ್ನು ಹೊಡೆದರೂ ನಾನು ಅಸ್ವಸ್ಥನಾಗಲಿಲ್ಲ; ಅವರು ನನ್ನನ್ನು ಹೊಡೆದರೂ ನನಗೆ ನೋವಾಗಲಿಲ್ಲ; ಯಾವಾಗ ಎಚ್ಚತ್ತೇನು? ಪುನಃ ನಾನು ಅದನ್ನು ತಿರುಗಿ ಹುಡುಕೇನು ಎಂದು ಹೇಳುತ್ತೀ.

ಯೋನ 1:6

ಆಗ ಹಡಗಿನ ಯಜಮಾನನು ಅವನ ಬಳಿಗೆ ಬಂದು--ನಿದ್ರೆಮಾಡುವವನೇ, ನಿನಗೆ ಏನಾಯಿತು? ಎದ್ದು ನಿನ್ನ ದೇವರನ್ನು ಕೂಗು; ಒಂದು ವೇಳೆ ನಾವು ನಾಶವಾಗದ ಹಾಗೆ ದೇವರು ನಮ್ಮನ್ನು ಜ್ಞಾಪಕ ಮಾಡ್ಯಾನು ಅಂದನು.

ಲೂಕ 9:32

ಆದರೆ ಪೇತ್ರನೂ ಅವನ ಸಂಗಡ ಇದ್ದವರೂ ನಿದ್ರೆಯಿಂದ ಭಾರವುಳ್ಳವರಾಗಿದ್ದರು; ಅವರು ಎಚ್ಚತ್ತಾಗ ಆತನ ಮಹಿಮೆಯನ್ನೂ ಆತನ ಕೂಡ ನಿಂತಿದ್ದ ಇಬ್ಬರು ಪುರಷರನ್ನೂ ನೋಡಿದರು.

ಅಪೋಸ್ತಲರ ಕೃತ್ಯಗಳು 20:9

ಆಗ ಕಿಟಕಿಯಲ್ಲಿ ಕೂತು ಕೊಂಡಿದ್ದ ಯೂತಿಕನೆಂಬ ಒಬ್ಬ ಯೌವನಸ್ಥನು ಗಾಢ ನಿದ್ರೆಯಲ್ಲಿದ್ದನು. ಪೌಲನು ಇನ್ನೂ ಪ್ರಸಂಗ ಮಾಡುತ್ತಾ ಇದ್ದಾಗ ಆ ಯೌವನಸ್ಥನಿಗೆ ನಿದ್ರೆಯಿಂದ ತೂಕಡಿಕೆ ಹೆಚ್ಚಾಗಿ ಮೂರನೆಯ ಅಂತಸ್ತಿನಿಂದ ಕೆಳಗೆ ಬಿದ್ದನು; ಅವನನ್ನು ಎತ್ತಿದಾಗ ಅವನು ಸತ್ತಿದ್ದನು.

ರೋಮಾಪುರದವರಿಗೆ 13:1

ಪ್ರತಿಯೊಬ್ಬನು ತನ್ನ ಮೇಲಿರುವ ಅಧಿಕಾರಿಗಳಿಗೆ ಅಧೀನನಾಗಿರಲಿ; ಯಾಕಂದರೆ ದೇವರಿಂದ ಹೊರತು ಒಬ್ಬರಿಗೂ ಅಧಿಕಾರವಿರುವದಿಲ್ಲ; ಇರುವ ಅಧಿಕಾರಿಗಳು ದೇವ ರಿಂದ ನೇಮಿಸಲ್ಪಟ್ಟವರು.

1 ತೆಸಲೋನಿಕದವರಿಗೆ 5:6

ಆದಕಾರಣ ನಾವು ಇತರರಂತೆ ನಿದ್ರೆಮಾಡದೆ ಎಚ್ಚರವಾಗಿರೋಣ, ಸ್ವಸ್ಥಚಿತ್ತರಾಗಿ ರೋಣ.

Interlinear

Choose Theme