Home Bibles ಮತ್ತಾಯ 26:37 · ಕನ್ನಡ ಬೈಬಲ್
ಮತ್ತಾಯ 26:37 · ಕನ್ನಡ ಬೈಬಲ್

ಆತನು ತನ್ನ ಜೊತೆಯಲ್ಲಿ ಪೇತ್ರನನ್ನೂ ಜೆಬೆದಾಯನ ಇಬ್ಬರು ಕುಮಾರರನ್ನೂ ಕರೆದುಕೊಂಡು ಹೋಗಿ ದುಃಖಿಸುವದಕ್ಕೂ ಬಹು ವ್ಯಥೆಪಡುವದಕ್ಕೂ ಆರಂಭಿಸಿದನು.

Cross references

ಮತ್ತಾಯ 4:18

ಮತ್ತು ಯೇಸು ಗಲಿಲಾಯ ಸಮುದ್ರದ ತೀರದಲ್ಲಿ ನಡೆದುಹೋಗುತ್ತಿದ್ದಾಗ ಪೇತ್ರನೆಂದು ಕರೆಯಲ್ಪಟ್ಟ ಸೀಮೋನ, ಅವನ ಸಹೋದರನಾದ ಅಂದ್ರೆಯ ಎಂಬ ಇಬ್ಬರು ಸಹೋದರರು ಸಮುದ್ರ ದಲ್ಲಿ ಬಲೆ ಬೀಸುವದನ್ನು ಕಂಡನು; ಯಾಕಂದರೆ ಅವರು ಬೆಸ್ತರಾಗಿದ್ದರು.

ಮತ್ತಾಯ 4:21

ಆತನು ಅಲ್ಲಿಂದ ಮುಂದೆ ಹೋಗಿ ಜೆಬೆದಾಯನ ಮಗನಾದ ಯಾಕೋಬ ಅವನ ಸಹೋದರನಾದ ಯೋಹಾನ ಎಂಬ ಬೇರೆ ಇಬ್ಬರು ಸಹೋದರರು ತಮ್ಮ ತಂದೆಯಾದ ಜೆಬೆದಾಯನ ಕೂಡ ದೋಣಿ ಯಲ್ಲಿ ತಮ್ಮ ಬಲೆಗಳನ್ನು ಸರಿಮಾಡುತ್ತಿದ್ದದ್ದನ್ನು ಕಂಡು ಅವರನ್ನು ಕರೆದನು.

ಮತ್ತಾಯ 17:1

ಆರು ದಿನಗಳಾದ ಮೇಲೆ ಯೇಸು ಪೇತ್ರನನ್ನೂ ಯಾಕೋಬನನ್ನೂ ಅವನ ಸಹೋದರನಾದ ಯೋಹಾನನನ್ನೂ ವಿಂಗಡವಾಗಿ ಕರಕೊಂಡು ಎತ್ತರವಾದ ಒಂದು ಬೆಟ್ಟಕ್ಕೆ ಹೋದನು.

ಮತ್ತಾಯ 20:20

ತರುವಾಯ ಜೆಬೆದಾಯನ ಮಕ್ಕಳ ತಾಯಿಯು ತನ್ನ ಕುಮಾರರೊಂದಿಗೆ ಆತನ ಬಳಿಗೆ ಬಂದು ಆತ ನನ್ನು ಆರಾಧಿಸುತ್ತಾ ಆತನನ್ನು ಏನೋ ಬೇಡಿಕೊಳ್ಳ ಬೇಕೆಂದು ಅಪೇಕ್ಷಿಸಿದಳು.

ಮಾರ್ಕ 5:37

ಆತನು ಪೇತ್ರ, ಯಾಕೋಬ, ಯಾಕೋಬನ ಸಹೋದರನಾದ ಯೋಹಾನ ಇವರನ್ನೇ ಹೊರತು ಬೇರೆ ಯಾರನ್ನೂ ತನ್ನ ಹಿಂದೆ ಬರಗೊಡಲಿಲ್ಲ.

ಮಾರ್ಕ 14:33

ಆತನು ಪೇತ್ರ ಯಾಕೋಬ ಯೋಹಾನರನ್ನು ತನ್ನೊಂದಿಗೆ ಕರಕೊಂಡು ಹೋಗಿ ಅತಿವಿಸ್ಮಯಗೊಂಡು ಬಹಳ ಮನಗುಂದಿದವನಾಗಿ--

ಲೂಕ 22:44

ಆತನು ವೇದನೆಯಲ್ಲಿದ್ದು ಬಹಳ ಆಸಕ್ತಿ ಯಿಂದ ಪ್ರಾರ್ಥಿಸಿದನು. ಆತನ ಬೆವರು ನೆಲಕ್ಕೆ ಬೀಳುತ್ತಿರುವ ದೊಡ್ಡ ರಕ್ತದ ಹನಿಗಳೋಪಾದಿಯಲ್ಲಿತ್ತು.

ಯೋಹಾನ 12:27

ಈಗ ನನ್ನ ಪ್ರಾಣವು ತತ್ತರಿಸುತ್ತದೆ. ನಾನು ಏನು ಹೇಳಲಿ? ತಂದೆಯೇ, ಈ ಗಳಿಗೆಯಿಂದ ನನ್ನನ್ನು ತಪ್ಪಿಸು; ಆದರೆ ಇದಕ್ಕಾಗಿಯೇ ನಾನು ಈ ಗಳಿಗೆಗೆ ಬಂದೆನು.

Interlinear

Choose Theme