Home Bibles ಮತ್ತಾಯ 24:17 · ಕನ್ನಡ ಬೈಬಲ್
ಮತ್ತಾಯ 24:17 · ಕನ್ನಡ ಬೈಬಲ್

ಮಾಳಿಗೆಯ ಮೇಲಿರುವವನು ತನ್ನ ಮನೆಯೊಳಗಿಂದ ಏನಾದರೂ ತಕ್ಕೊಳ್ಳುವದಕ್ಕಾಗಿ ಕೆಳಗೆ ಇಳಿಯದಿರಲಿ;

Cross references

ದ್ವಿತೀಯೋಪದೇಶಕಾಂಡ 22:8

ನೀನು ಹೊಸ ಮನೆಯನ್ನು ಕಟ್ಟಿದಾಗ ಯಾವನಾ ದರೂ ಅದರ ಮೇಲಿನಿಂದ ಬೀಳುವ ಪಕ್ಷದಲ್ಲಿ ನೀನು ನಿನ್ನ ಮನೆಗೆ ರಕ್ತಾಪರಾಧ ಹೊರಿಸದ ಹಾಗೆ ನಿನ್ನ ಮಾಳಿಗೆಗೆ ಸಣ್ಣಗೋಡೆ ಕಟ್ಟಬೇಕು.

1 ಸಮುವೇಲ 9:25

ಅವರು ಗುಡ್ಡದಿಂದ ಇಳಿದು ಪಟ್ಟಣಕ್ಕೆ ಬಂದಾಗ ಸಮು ವೇಲನು ಮಾಳಿಗೆಯ ಮೇಲೆ ಸೌಲನ ಸಂಗಡ ಮಾತನಾಡಿದನು.

ಯೋಬ 2:4

ಸೈತಾನನು ಪ್ರತ್ಯುತ್ತರವಾಗಿ ಕರ್ತ ನಿಗೆ--ಹೌದು, ಚರ್ಮಕ್ಕೆ ಚರ್ಮ, ತನಗೆ ಉಂಟಾ ದದ್ದನ್ನೆಲ್ಲಾ ತನ್ನ ಪ್ರಾಣಕ್ಕೊಸ್ಕರ ಮನುಷ್ಯನು ಕೊಡು ವನು.

ಸಾಮೇತಿಗಳು 6:4

ನಿನ್ನ ಕಣ್ಣುಗಳಿಗೆ ನಿದ್ರೆಯನ್ನೂ ರೆಪ್ಪೆಗಳಿಗೆ ತೂಕಡಿಕೆಯನ್ನೂ ಕೊಡಬೇಡ.

ಮತ್ತಾಯ 6:25

ಆದಕಾರಣ ನಾನು ನಿಮಗೆ ಹೇಳುವದೇ ನಂದರೆ--ನಿಮ್ಮ ಪ್ರಾಣಕ್ಕೋಸ್ಕರ ನೀವು ಏನು ತಿನ್ನಬೇಕು ಮತ್ತು ಏನು ಕುಡಿಯಬೇಕು ಎಂಬದರ ವಿಷಯಕ್ಕಾಗಲೀ ಇಲ್ಲವೆ ನಿಮ್ಮ ಶರೀರಕ್ಕೆ ನೀವು ಏನು ಹೊದ್ದುಕೊಳ್ಳಬೇಕೆಂತಾಗಲೀ ಚಿಂತೆ ಮಾಡ ಬೇಡಿರಿ; ಊಟಕ್ಕಿಂತ ಪ್ರಾಣವೂ ಉಡುಪಿಗಿಂತ ಶರೀರವೂ ಹೆ

ಮತ್ತಾಯ 10:27

ನಾನು ನಿಮಗೆ ಕತ್ತಲೆಯಲ್ಲಿ ಯಾವದನ್ನು ಹೇಳುತ್ತೇನೋ ಅದನ್ನು ನೀವು ಬೆಳಕಿನಲ್ಲಿ ಮಾತನಾಡಿರಿ; ನೀವು ಕಿವಿಯಲ್ಲಿ ಯಾವದನ್ನು ಕೇಳುತ್ತೀರೋ ಅದನ್ನು ಮಾಳಿಗೆಗಳ ಮೇಲೆ ಸಾರಿರಿ.

ಮಾರ್ಕ 13:15

ಮನೇಮಾಳಿಗೆಯ ಮೇಲಿದ್ದವನು ಕೆಳಗೆ ಇಳಿದು ಮನೆಯೊಳಕ್ಕೆ ಹೋಗದೆ ಯೂ ಇಲ್ಲವೆ ತನ್ನ ಮನೆಯೊಳಗೆ ಪ್ರವೇಶಿಸಿ ಅದರೊ ಳಗಿಂದ ಏನನ್ನೂ ತಕ್ಕೊಳ್ಳದೆಯೂ ಇರಲಿ.

ಲೂಕ 5:19

ಆದರೆ ಅಲ್ಲಿದ್ದ ಜನಸಮೂಹದವರ ನಿಮಿತ್ತ ಅವರು ಅವನನ್ನು ಒಳಗೆ ತರುವ ಯಾವ ವಿಧಾನವನ್ನೂ ಕಾಣದೆ ಮನೆಯಮೇಲೆ ಹೋಗಿ ಹಂಚುಗಳನ್ನು ತೆಗೆದು ಅವನನ್ನು ಹಾಸಿಗೆಯೊಂದಿಗೆ ನಡುವೆ ಯೇಸುವಿನ ಮುಂದೆ ಇಳಿಸಿದರು.

ಲೂಕ 12:3

ಆದದರಿಂದ ನೀವು ಕತ್ತಲೆಯಲ್ಲಿ ಯಾವದನ್ನು ಮಾತನಾಡಿದ್ದೀರೋ ಅದು ಬೆಳಕಿನಲ್ಲಿ ಕೇಳಲ್ಪಡುವದು; ಕೋಣೆಗಳೊಳಗೆ ನೀವು ಕಿವಿಯಲ್ಲಿ ಮಾತನಾಡಿದ್ದು ಮಾಳಿಗೆಗಳ ಮೇಲೆ ಪ್ರಕಟಿಸ ಲ್ಪಡುವದು ಎಂದು ಹೇಳಲಾರಂಭಿಸಿದನು.

ಲೂಕ 17:31

ಆ ದಿನದಲ್ಲಿ ಮನೆಯ ಮಾಳಿಗೆಯ ಮೇಲೆ ಇದ್ದವನು ಮನೆಯಲ್ಲಿದ್ದ ತನ್ನ ಸಾಮಾನುಗಳನ್ನು ತೆಗೆದುಕೊಳ್ಳಲು ಕೆಳಗಿಳಿದು ಬಾರ ದಿರಲಿ. ಹಾಗೆಯೇ ಹೊಲದಲ್ಲಿದ್ದವನು ಹಿಂದಿರುಗಿ ಬಾರದಿರಲಿ.

ಅಪೋಸ್ತಲರ ಕೃತ್ಯಗಳು 10:9

ಮರುದಿನ ಅವರು ಪ್ರಯಾಣಮಾಡಿ ಆ ಊರಿನ ಹತ್ತಿರಕ್ಕೆ ಬರುತ್ತಿರುವಾಗ ಪೇತ್ರನು ಸುಮಾರು ಆರನೇ ತಾಸಿನಲ್ಲಿ (ಹನ್ನೆರಡು ಘಂಟೆಗೆ) ಪ್ರಾರ್ಥನೆ ಮಾಡು ವದಕ್ಕಾಗಿ ಮಾಳಿಗೆಯನ್ನು ಹತ್ತಿದನು.

Interlinear

Choose Theme