ಅವನು ಪ್ರತ್ಯುತ್ತರವಾಗಿ--ನಾನು ಹೋಗುವದಿಲ್ಲ ಎಂದು ಹೇಳಿ ತರುವಾಯ ಪಶ್ಚಾ ತ್ತಾಪಪಟ್ಟು ಹೋದನು.
Cross references
ಆಗ ಮೋಶೆಯು ಆರೋನನಿಗೆ ತನ್ನನ್ನು ಕಳುಹಿಸಿದ ಕರ್ತನ ಎಲ್ಲಾ ಮಾತುಗಳನ್ನೂ ತನಗೆ ಆಜ್ಞಾಪಿಸಿದ ಎಲ್ಲಾ ಸೂಚಕಕಾರ್ಯಗಳನ್ನೂ ತಿಳಿಸಿದನು.
ಅದಕ್ಕೆ ಅವನು--ನಾನು ಬರುವದಿಲ್ಲ: ನಾನು ನನ್ನ ದೇಶಕ್ಕೂ ಬಂಧುಗಳ ಬಳಿಗೂ ಹೋಗು ತ್ತೇನೆ ಅಂದನು.
ಕರ್ತನು ಮನಸ್ಸೆಯೊಂದಿಗೂ ಅವನ ಜನ ರೊಂದಿಗೂ ಮಾತನಾಡಿದನು; ಆದರೆ ಅವರು ಆಲೈ ಸದೆ ಹೋದರು.
ನಿಮ್ಮನ್ನು ತೊಳೆದುಕೊಂಡು ಶುದ್ಧ ಮಾಡಿಕೊಳ್ಳಿರಿ; ನನ್ನ ಕಣ್ಣೆದುರಿನಿಂದ ನಿಮ್ಮ ದುಷ್ಟ ಕೃತ್ಯಗಳನ್ನು ತೆಗೆದುಹಾಕಿರಿ, ಕೆಟ್ಟದ್ದನ್ನು ನಿಲ್ಲಿಸಿಬಿಡಿರಿ;
ಕರ್ತನು ಸಿಕ್ಕುವ ಕಾಲದಲ್ಲಿ ಆತನನ್ನು ಹುಡುಕಿರಿ; ಆತನು ಸವಿಾಪವಾಗಿರುವಾಗಲೇ ಆತನನ್ನು ಕರೆಯಿರಿ.
ತಾನು ಆಲೋಚಿಸಿ ತಾನು ಮಾಡುವ ಎಲ್ಲಾ ದುಷ್ಕೃತ್ಯಗಳನ್ನು ಬಿಟ್ಟು ತಿರುಗಿ ಕೊಳ್ಳುವದರಿಂದ ಸಾಯದೆ ನಿಶ್ಚಯವಾಗಿ ಬದುಕು ವನು.
ಆ ಕೊನೆಯ ದಿನಗಳಲ್ಲಿ ನೆಬೂಕದ್ನೆಚ್ಚರನಾದ ನಾನು ನನ್ನ ಕಣ್ಣುಗಳನ್ನು ಪರ ಲೋಕದ ಕಡೆಗೆ ಎತ್ತಿದೆನು; ನನ್ನ ತಿಳುವಳಿಕೆ ನನಗೆ ತಿರುಗಿ ಬಂತು; ಆಗ ನಾನು ಮಹೋನ್ನತನನ್ನು ಸ್ತುತಿಸಿ ನಿರಂತರವಾಗಿ ಜೀವಿಸುವಾತನೂ ನಿತ್ಯವಾದ ಆಳ್ವಿಕೆ ಯನ್ನು ಆಳುವಾತನನ್ನು ತಲತಲಾಂತರಗಳ ವರೆಗೂ ರಾಜ್ಯ ಉಳ್ಳಾತನನ್ನು ಹೊಗಳಿ ಘನಪಡಿಸಿದೆನು.
ಏನಂದರೆ--ಎದ್ದು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ ನಾನು ನಿನಗೆ ಹೇಳಿದ ಪ್ರಕಟನೆಯನ್ನು ಅದಕ್ಕೆ ಸಾರು ಎಂದು ಹೇಳಿದನು.
ಹೌದು, ಅವರು ತಮ್ಮ ತಮ್ಮ ದುರ್ಮಾರ್ಗ ಗಳನ್ನೂ ತಾವು ನಡಿಸುತ್ತಿರುವ ಹಿಂಸೆಯನ್ನು ಬಿಟ್ಟು ತಿರುಗಲಿ.
ನೀವು ಮಾನಸಾಂತರ ಪಡಿರಿ; ಯಾಕಂದರೆ ಪರಲೋಕರಾಜ್ಯವು ಸಮಾಪ ವಾಗಿದೆ ಎಂದು ಹೇಳಿದನು.
ಈ ಇಬ್ಬರಲ್ಲಿ ಯಾವನು ತನ್ನ ತಂದೆಯ ಇಷ್ಟದಂತೆ ಮಾಡಿದನು ಎಂದು ಕೇಳಲು ಅವರು ಆತನಿಗೆ--ಮೊದಲನೆಯವನು ಅಂದರು. ಆಗ ಯೇಸು ಅವರಿಗೆ --ಸುಂಕದವರೂ ಸೂಳೆಯರೂ ನಿಮಗಿಂತ ಮೊದಲು ದೇವರರಾಜ್ಯದೊಳಗೆ ಸೇರುವರೆಂದು ನಿಮಗೆ ನಿಜವಾಗಿ ಹೇಳುತ್ತೇನೆ.
ಅವನಿಗೆ ಬುದ್ದಿ ಬಂದಾಗ ಅವನು--ನನ್ನ ತಂದೆಯ ಎಷ್ಟೋ ಕೂಲಿಯಾಳುಗಳಿಗೆ ಸಾಕಾಗಿ ಉಳಿಯುವಷ್ಟು ಆಹಾರವಿದೆಯಲ್ಲಾ! ನಾನಾದರೋ ಹಸಿವೆಯಿಂದ ಸಾಯುತ್ತಿದ್ದೇನೆ.
ಆದರೆ ಅವರು ಮಾನಸಾಂತರಪಟ್ಟು ದೇವರ ಕಡೆಗೆ ತಿರುಗಿ ಕೊಂಡು ಮಾನಸಾಂತರಪಟ್ಟದ್ದಕ್ಕಾಗಿ ಯೋಗ್ಯವಾದ ಕ್ರಿಯೆಗಳನ್ನು ಮಾಡಬೇಕೆಂದು ಮೊದಲನೆಯದಾಗಿ ದಮಸ್ಕದವರಿಗೂ ಯೆರೂಸಲೇಮಿನಲ್ಲಿಯೂ ಯೂದಾಯದ ಎಲ್ಲಾ ಕಡೆಯ ತೀರಗಳಲ್ಲಿಯೂ ಅನ್ಯಜನಾಂಗದವರಿಗೂ ಪ್ರಕಟಿಸಿದೆನು.
ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ; ಆದರೂ ಕರ್ತನಾದ ಯೇಸುವಿನ ಹೆಸರಿನಲ್ಲಿಯೂ ನಮ್ಮ ದೇವರ ಆತ್ಮನಲ್ಲಿಯೂ ತೊಳೆಯಲ್ಪಟ್ಟಿರಿ; ಶುದ್ಧೀಕರಿಸಲ್ಪಟ್ಟಿರಿ ಮತ್ತು ನೀತಿವಂತರೆಂಬ ನಿರ್ಣಯವನ್ನು ಹೊಂದಿದಿರಿ.
ಇದಲ್ಲದೆ ಅಪರಾಧಗಳ ಮತ್ತು ಪಾಪಗಳ ದೆಸೆಯಿಂದ ಸತ್ತವರಾಗಿದ್ದ ನಿಮ್ಮನ್ನು ಆತನು ಬದುಕಿಸಿದನು.
ಆದದರಿಂದ ಅನ್ಯಜನರು ನಡೆದುಕೊಳ್ಳುವ ಪ್ರಕಾರ ನೀವು ಇನ್ನು ಮೇಲೆ ನಡೆದುಕೊಳ್ಳಬಾರ ದೆಂದು ಕರ್ತನಲ್ಲಿರುವವನಾಗಿ ನಾನು ನಿಮಗೆ ಖಂಡಿತವಾಗಿ ಹೇಳುತ್ತೇನೆ. ಅವರು ನಿಷ್ಪ್ರಯೋಜನ ವಾದ ಬುದ್ಧಿಯುಳ್ಳವರಾಗಿ ನಡೆದುಕೊಳ್ಳುತ್ತಾರೆ;