Home Bibles ಮತ್ತಾಯ 21:10 · ಕನ್ನಡ ಬೈಬಲ್
ಮತ್ತಾಯ 21:10 · ಕನ್ನಡ ಬೈಬಲ್

ಆತನು ಯೆರೂಸಲೇಮಿಗೆ ಬಂದಾಗ ಪಟ್ಟಣ ವೆಲ್ಲಾ ಕದಲಿ--ಈತನು ಯಾರು ಎಂದು ಕೇಳಿದರು.

Cross references

ರೂತ 1:19

ಹಾಗೆಯೇ ಇಬ್ಬರೂ ಬೇತ್ಲೆಹೇಮಿನವರೆಗೂ ಹೋದರು. ಅವರು ಬೇತ್ಲೆಹೇಮಿನಲ್ಲಿ ಪ್ರವೇಶಿಸುವಾಗ ಆ ಪಟ್ಟಣವೆಲ್ಲಾ ಇವರಿಗೋಸ್ಕರ ಗದ್ದಲವಾಗಿ ಅವರು ಇವಳು ನೊವೊ ಮಿಯೋ? ಅಂದರು.

1 ಸಮುವೇಲ 16:4

ಕರ್ತನು ಹೇಳಿದ ಪ್ರಕಾರ ಸಮುವೇಲನು ಮಾಡಿ ಬೇತ್ಲೆಹೇಮಿಗೆ ಬಂದನು. ಆಗ ಊರಿನ ಹಿರಿಯರು ಅವನ ಬರುವಿಕೆಯನ್ನು ಕಂಡು ನಡುಗಿ ಅವನಿಗೆ--ಸಮಾಧಾನವೋ ಅಂದರು.

ಪರಮಗೀತ 3:6

ರಕ್ತಬೋಳ ಸಾಂಬ್ರಾಣಿಗಳಿಂದಲೂ ವರ್ತಕರ ಸಕಲ ಸುಗಂಧ ದ್ರವ್ಯಗಳಿಂದಲೂ ಧೂಮ ಸ್ತಂಭ ಗಳ ಹಾಗೆಯೂ ಅಡವಿಯಿಂದ ಬರುವ ಇವಳಾರು?

ಯೆಶಾಯ 63:1

ಎದೋಮಿನಿಂದಲೂ ರಕ್ತಾಂಬರ ಧರಿಸಿಕೊಂಡು ಬೊಚ್ರದಿಂದಲೂ ಬರುವ ಇವನ್ಯಾರು? ಪ್ರಭೆಯುಳ್ಳ ವಸ್ತ್ರಗಳನ್ನು ತೊಟ್ಟುಕೊಂಡ ವನಾಗಿ ತನ್ನ ಮಹಾಪರಾಕ್ರಮದಲ್ಲಿ ಸಂಚಾರ ಮಾಡುವ ಇವನ್ಯಾರು? ನೀತಿಯಲ್ಲಿ ಮಾತನಾಡು ವವನೂ ರಕ್ಷಿಸಲು ಬಲಿಷ್ಠನೂ ಆಗಿರುವ ನಾನೇ.

ಮತ್ತಾಯ 2:3

ಅರಸನಾದ ಹೆರೋದನು ಇವುಗಳನ್ನು ಕೇಳಿ ಅವನು ಯೆರೂಸ ಲೇಮಿನವರೆಲ್ಲರೊಂದಿಗೆ ಕಳವಳಪಟ್ಟನು.

ಲೂಕ 5:21

ಆಗ ಶಾಸ್ತ್ರಿಗಳೂ ಫರಿ ಸಾಯರೂ--ದೇವದೂಷಣೆಗಳನ್ನು ಮಾಡುವದಕ್ಕೆ ಇವನು ಯಾರು? ದೇವರೊಬ್ಬನೇ ಹೊರತು ಪಾಪಗಳನ್ನು ಕ್ಷಮಿಸುವವರು ಯಾರು ಎಂದು ತಮ್ಮಲ್ಲಿ ಮಾತನಾಡಿಕೊಂಡರು.

ಲೂಕ 7:49

ಆತನ ಸಂಗಡ ಊಟಕ್ಕೆ ಕೂತವರು ತಮ್ಮೊಳಗೆ--ಪಾಪಗಳನ್ನು ಸಹ ಕ್ಷಮಿಸುವದಕ್ಕೆ ಈತನು ಯಾರು ಎಂದು ತಮ್ಮಲ್ಲಿ ಅಂದುಕೊಳ್ಳಲಾರಂಭಿಸಿದರು.ಆಗ ಆತನು ಆ ಸ್ತ್ರೀಗೆ--ನಿನ್ನ ನಂಬಿಕೆಯು ನಿನ್ನನ್ನು ರಕ್ಷಿಸಿಯದೆ, ಸಮಾಧಾನದಿಂದ ಹೋಗು ಅಂದನು.

ಲೂಕ 9:9

ಆಗ ಹೆರೋದನು--ನಾನು ಯೋಹಾನನ ತಲೆ ಹೊಯ್ಸಿದ್ದೇನೆ; ಆದರೆ ನಾನು ಯಾರನ್ನು ಕುರಿತು ಈ ವಿಷಯಗಳನ್ನು ಕೇಳು ತ್ತೇನೋ ಇವನು ಯಾರು ಎಂದು ಹೇಳಿ ಅವನು ಆತನನ್ನು ನೋಡಲು ಅಪೇಕ್ಷಿಸಿದನು.

ಲೂಕ 20:2

ಆತನೊಂದಿಗೆ ಮಾತನಾ ಡುತ್ತಾ--ನೀನು ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತೀ? ಇಲ್ಲವೆ ನಿನಗೆ ಈ ಅಧಿಕಾರವನ್ನು ಕೊಟ್ಟವನು ಯಾರು? ನಮಗೆ ಹೇಳು ಅಂದರು.

ಯೋಹಾನ 2:18

ಆಗ ಯೆಹೂದ್ಯರು ಆತನಿಗೆ--ನೀನು ಇವುಗಳನ್ನು ಮಾಡುವದಕ್ಕೆ ಯಾವ ಸೂಚಕಕಾರ್ಯ ವನ್ನು ನಮಗೆ ತೋರಿಸುತ್ತೀ ಎಂದು ಕೇಳಿದರು.

ಯೋಹಾನ 12:16

ಇವು ಗಳನ್ನು ಆತನ ಶಿಷ್ಯರು ಮೊದಲು ತಿಳಿದಿರಲಿಲ್ಲ; ಆದರೆ ಯೇಸು ಮಹಿಮೆ ಹೊಂದಿದಾಗ ಇವು ಆತನ ವಿಷಯವಾಗಿ ಬರೆಯಲ್ಪಟ್ಟಿವೆಯೆಂದೂ ಇವುಗಳನ್ನು ಅವರು ಆತನಿಗೆ ಮಾಡಿದರೆಂದೂ ಜ್ಞಾಪಕಮಾಡಿ ಕೊಂಡರು.

ಅಪೋಸ್ತಲರ ಕೃತ್ಯಗಳು 9:5

ಅವನು--ಕರ್ತನೇ, ನೀನಾರು ಎಂದು ಕೇಳಿದ್ದಕ್ಕೆ ಕರ್ತನು--ನೀನು ಹಿಂಸೆಪಡಿಸುವ ಯೇಸುವೇ ನಾನು; ಮುಳ್ಳು ಗೋಲುಗಳನ್ನು ಒದೆಯುವದು ನಿನಗೆ ಕಷ್ಠವಾಗಿದೆ ಅಂದನು.

Interlinear

Choose Theme