Home Bibles ಮತ್ತಾಯ 2:15 · ಕನ್ನಡ ಬೈಬಲ್
ಮತ್ತಾಯ 2:15 · ಕನ್ನಡ ಬೈಬಲ್

ಅದು--ನಾನು ನನ್ನ ಮಗನನ್ನು ಐಗುಪ್ತದಿಂದ ಕರೆದೆನು ಎಂದು ಪ್ರವಾದಿಯ ಮುಖಾಂತರ ಕರ್ತನಿಂದ ಹೇಳಲ್ಪಟ್ಟ ಮಾತು ನೆರವೇರುವಂತೆ ಹೀಗಾಯಿತು.

Cross references

ನಿರ್ಗಮಕಾಂಡ 4:22

ಆಗ ನೀನು ಫರೋಹನಿಗೆ--ಕರ್ತನು ಹೀಗೆ ಹೇಳುತ್ತಾನೆ; ಇಸ್ರಾಯೇಲು ನನ್ನ ಮಗನು. ಅವನು ನನ್ನ ಚೊಚ್ಚಲ ಮಗನೇ ಎಂದು ಹೇಳಬೇಕು.

ಅಂಕೆಗಳ ಪುಸ್ತಕ 24:8

ದೇವರು ಅವನನ್ನು ಐಗುಪ್ತದಿಂದ ಹೊರಗೆ ತಂದನು. ಒಂದು ಕೊಂಬುಳ್ಳ ಪ್ರಾಣಿಯಂತೆ ಬಲ ಅವನಿಗೆ ಉಂಟು. ಅವನು ತನ್ನ ವೈರಿಗಳಾಗಿರುವ ಜನಾಂಗಗಳನ್ನು ತಿಂದು ಅವರ ಎಲುಬುಗಳನ್ನು ಚೂರು ಮಾಡಿ ತನ್ನ ಬಾಣ ಗಳಿಂದ ಗಾಯಮಾಡುವನು.

ಹೊಶೇಯ 11:1

ಇಸ್ರಾಯೇಲನು ಮಗುವಾಗಿದ್ದಾಗ ನಾನು ಅವನನ್ನು ಪ್ರೀತಿಮಾಡಿದೆನು, ಮತ್ತು ನನ್ನ ಮಗನನ್ನು ಐಗುಪ್ತದೊಳಗಿಂದ ಕರೆದೆನು.

ಮತ್ತಾಯ 1:22

ಪ್ರವಾದಿಯ ಮುಖಾಂತರ ಕರ್ತನು ಹೇಳಿದ ಮಾತು ನೆರವೇರುವಂತೆ ಇದೆಲ್ಲಾ ನಡೆಯಿತು.

ಮತ್ತಾಯ 2:17

ಆಗ ಪ್ರವಾದಿಯಾದ ಯೆರೆವಿಾಯ ನಿಂದ ಹೇಳಲ್ಪಟ್ಟದ್ದು ನೆರವೇರಿತು;

ಮತ್ತಾಯ 2:19

ಹೆರೋದನು ಸತ್ತ ಮೇಲೆ ಇಗೋ, ಐಗುಪ್ತದಲ್ಲಿ ಕರ್ತನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿ ಕೊಂಡು--

ಮತ್ತಾಯ 2:23

ಅವನು ನಜರೇತೆಂಬ ಪಟ್ಟಣಕ್ಕೆ ಬಂದು ಅಲ್ಲಿ ವಾಸಿಸಿದನು; ಇದರಿಂದ--ಆತನು ನಜರಾಯನೆಂದು ಕರೆಯಲ್ಪ ಡುವನು ಎಂಬದಾಗಿ ಪ್ರವಾದಿಗಳಿಂದ ಹೇಳಲ್ಪಟ್ಟದ್ದು ನೆರವೇರುವಂತೆ ಹೀಗಾಯಿತು.

ಮತ್ತಾಯ 4:14

ಹೀಗೆ ಪ್ರವಾದಿಯಾದ ಯೆಶಾಯನಿಂದ ಹೇಳಲ್ಪಟ್ಟದ್ದು ನೆರವೇರುವಂತೆ ಇದಾಯಿತು; ಅದೇನಂದರೆ--

ಮತ್ತಾಯ 8:17

ಹೀಗೆ--ಆತನು ತಾನೇ ನಮ್ಮ ಬಲಹೀನತೆಗಳನ್ನು ತಕ್ಕೊಂಡು ರೋಗಗಳನ್ನು ಹೊತ್ತನು ಎಂಬದಾಗಿ ಪ್ರವಾದಿಯಾದ ಯೆಶಾಯನಿಂದ ಹೇಳಲ್ಪಟ್ಟದ್ದು ನೆರವೇರುವಂತೆ ಇದಾಯಿತು.

ಮತ್ತಾಯ 12:16

ಯೇಸು ತನ್ನನ್ನು ಯಾರಿಗೂ ಪ್ರಕಟಿಸ ಬಾರದೆಂದು ಅವರಿಗೆ ಆಜ್ಞಾಪಿಸಿದನು;

ಮತ್ತಾಯ 21:4

ಇದೆಲ್ಲವೂ ಪ್ರವಾದಿಯಿಂದ ಹೇಳಲ್ಪಟ್ಟದ್ದು ನೆರವೇರು ವಂತೆ ಆಯಿತು; ಅದೇನಂದರೆ--

ಮತ್ತಾಯ 26:54

ಹಾಗಾದರೆ ಇವುಗಳು ಹೀಗೆ ಆಗಬೇಕೆಂಬ ಬರಹಗಳು ನೆರವೇರು ವದು ಹೇಗೆ ಅಂದನು.

ಮತ್ತಾಯ 26:56

ಆದರೆ ಪ್ರವಾದಿಗಳ ಬರಹಗಳು ನೆರವೇರುವಂತೆ ಇದೆಲ್ಲಾ ಆಯಿತು ಎಂದು ಹೇಳಿದನು. ಆಗ ಶಿಷ್ಯರೆಲ್ಲರೂ ಆತನನ್ನು ಬಿಟ್ಟು ಓಡಿಹೋದರು.

ಮತ್ತಾಯ 27:35

ತರುವಾಯ ಅವರು ಆತನನ್ನು ಶಿಲುಬೆಗೆ ಹಾಕಿದ ಮೇಲೆ ಆತನ ಬಟ್ಟೆಗಳಿಗಾಗಿ ಚೀಟು ಹಾಕಿ ಹಂಚಿಕೊಂಡರು; ಇದು ಪ್ರವಾದಿಯ ಮುಖಾಂತರ ಹೇಳಲ್ಪಟ್ಟದ್ದು ನೆರವೇರುವಂತೆ ಆಯಿತು. ಅದೇನಂದರೆ--ಅವರು ನನ್ನ ಬಟ್ಟೆಗಳನ್ನು ತಮ್ಮಲ್ಲಿ ಪಾಲುಮಾಡಿಕೊಂಡರು; ಮತ್ತು ನನ್ನ ಅಂಗಿಗೋಸ್ಕರ ಚೀಟು ಹಾಕಿ

ಲೂಕ 24:44

ಆಗ ಆತನು ಅವರಿಗೆ--ಮೋಶೆಯ ನ್ಯಾಯ ಪ್ರಮಾಣದಲ್ಲಿಯೂ ಪ್ರವಾದನೆಗಳಲ್ಲಿಯೂ ಕೀರ್ತನೆ ಗಳಲ್ಲಿಯೂ ನನ್ನನ್ನು ಕುರಿತಾಗಿ ಬರೆಯಲ್ಪಟ್ಟವು ಗಳೆಲ್ಲವು ನೆರವೇರುವದು ಅಗತ್ಯವಾಗಿದೆ ಎಂಬ ಈ ಮಾತುಗಳನ್ನು ನಾನು ನಿಮ್ಮೊಂದಿಗೆ ಇದ್ದಾಗಲೇ ಹೇಳಿದ್ದೆನು ಅಂದನು.

ಯೋಹಾನ 19:28

ಇದಾದ ಮೇಲೆ ಯೇಸು ಆಗ ಎಲ್ಲವೂ ಪೂರೈಸಲ್ಪಟ್ಟಿತೆಂದು ತಿಳಿದು ಬರಹವು ನೆರವೇರು ವಂತೆ--ನನಗೆ ನೀರಡಿಕೆಯಾಗಿದೆ ಅಂದನು.

ಯೋಹಾನ 19:36

ಯಾಕಂದರೆ--ಆತನ ಒಂದು ಎಲುಬಾದರೂ ಮುರಿಯಲ್ಪಡಬಾರದು ಎಂಬ ಬರಹವು ನೆರವೇರುವಂತೆ ಇವುಗಳು ಸಂಭವಿಸಿದವು.

ಅಪೋಸ್ತಲರ ಕೃತ್ಯಗಳು 1:16

ಜನರೇ, ಸಹೋದ ರರೇ, ಯೇಸುವನ್ನು ಹಿಡಿದವರಿಗೆ ದಾರಿ ತೋರಿಸಿದ ಯೂದನ ವಿಷಯವಾಗಿ ಮೊದಲು ದಾವೀದನ ಬಾಯಿಂದ ಪವಿತ್ರಾತ್ಮನು ಹೇಳಿದ್ದ ಬರಹವು ನೆರ ವೇರುವದು ಅವಶ್ಯವಾಗಿತ್ತು.

ಅಪೋಸ್ತಲರ ಕೃತ್ಯಗಳು 12:1

ಆ ಕಾಲದಲ್ಲಿ ಅರಸನಾದ ಹೆರೋದನು ಸಭೆಯಲ್ಲಿ ಕೆಲವರನ್ನು ಬಾಧಿಸುವದಕ್ಕಾಗಿ ತನ್ನ ಕೈ ಎತ್ತಿ

ಅಪೋಸ್ತಲರ ಕೃತ್ಯಗಳು 12:23

ಅವನು ದೇವರಿಗೆ ಮಹಿಮೆ ಸಲ್ಲಿಸದೆ ಹೋದದರಿಂದ ಕರ್ತನ ದೂತನು ಆ ಕ್ಷಣದಲ್ಲೇ ಅವನನ್ನು ಹೊಡೆದನು; ಆಗ ಅವನನ್ನು ಹುಳಗಳು ತಿಂದದ್ದರಿಂದ ಅವನು ಪ್ರಾಣ ಬಿಟ್ಟನು.

Interlinear

Choose Theme