ಅದಕ್ಕೆ ಅವರು ಆತನಿಗೆ--ಹೀಗಾದರೆ ತ್ಯಾಗ ಪತ್ರವನ್ನು ಕೊಟ್ಟು ಆಕೆಯನ್ನು ಬಿಟ್ಟುಬಿಡಬೇಕೆಂದು ಮೋಶೆಯು ಯಾಕೆ ಅಪ್ಪಣೆಕೊಟ್ಟನು ಎಂದು ಕೇಳಿದರು.
Cross references
ಒಬ್ಬನು ಹೆಂಡತಿಯನ್ನು ತಕ್ಕೊಂಡು ಅವಳಿಗೆ ಗಂಡನಾದ ಮೇಲೆ ಅವಳಲ್ಲಿ ಅಶುದ್ಧ ವಾದದ್ದನ್ನು ನೋಡುವದರಿಂದ ಅವಳಿಗೆ ಅವನಿಂದ ಕಟಾಕ್ಷವಾಗದಿದ್ದರೆ ಅವಳಿಗೆ ತ್ಯಾಗಪತ್ರವನ್ನು ಬರೆದು ಅವಳ ಕೈಯಲ್ಲಿ ಕೊಟ್ಟು ಅವಳನ್ನು ತನ್ನ ಮನೆಯಿಂದ ಕಳುಹಿಸಿಬಿಡಬೇಕು.
ಕರ್ತನು ಹೀಗನ್ನುತ್ತಾನೆ--ನಾನು ಬಿಟ್ಟು ಬಿಟ್ಟದ್ದಕ್ಕೆ ನಿನ್ನ ತಾಯಿಯ ತ್ಯಾಗಪತ್ರವು ಎಲ್ಲಿ? ಇಲ್ಲವೆ ನಾನು ನನ್ನ ಸಾಲಗಾರರಲ್ಲಿ ಯಾರಿಗೆ ನಿಮ್ಮನ್ನು ಮಾರಿಬಿಟ್ಟೇನು? ಇಗೋ, ನಿಮ್ಮ ಅಕ್ರಮ ಗಳ ನಿಮಿತ್ತ ನಿಮ್ಮನ್ನು ನೀವೇ ಮಾರಿಕೊಂಡಿದ್ದೀರಿ; ನಿಮ್ಮ ದ್ರೋಹಗಳ ನಿಮಿತ್ತವೇ ನಿಮ್ಮ ತಾಯಿಯನ್ನು ಬಿಟ್ಟಿದ್ದೇನೆ.
ಆಗ ನಾನು ನೋಡಿದ್ದೇ ನಂದರೆ, ಹಿಂದಿರುಗಿದ ಇಸ್ರಾಯೇಲು ವ್ಯಭಿಚಾರ ಮಾಡಿದ ಎಲ್ಲಾ ಕಾರಣಗಳ ನಿಮಿತ್ತ ನಾನು ಅವಳನ್ನು ಬಿಟ್ಟುಬಿಟ್ಟು ತ್ಯಾಗಪತ್ರವನ್ನು ಕೊಟ್ಟಿದ್ದಾಗ್ಯೂ ವಂಚನೆ ಯುಳ್ಳ ಅವಳ ಸಹೋದರಿಯಾದ ಯೆಹೂದಳು ಭಯಪಡದೆ ತಾನು ಕೂಡ ಹೋಗಿ ಸೂಳೆತನವನ್ನು ಮಾಡಿದಳು.
ಇಸ್ರಾಯೇಲಿನ ದೇವರಾದ ಕರ್ತನು--ನಾನು ತಳ್ಳಿಬಿಡುವದನ್ನೂ ಒಬ್ಬನು ತನ್ನ ವಸ್ತ್ರವನ್ನು ಬಲಾತ್ಕಾರದಿಂದ ಮುಚ್ಚುವದನ್ನೂ ಹಗೆಮಾಡುತ್ತೇನೆಂದು ಸೈನ್ಯಗಳ ಕರ್ತನು ಹೇಳು ತ್ತಾನೆ; ಹೀಗಿರುವದರಿಂದ ನೀವು ವಂಚಿಸದ ಹಾಗೆ ನಿಮ್ಮ ಆತ್ಮವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿರಿ.ನಿಮ್ಮ ಮಾತುಗಳಿಂದ ಕರ್ತನಿಗೆ ಬೇಸರಮಾಡಿ ದ್ದೀರಿ; ಆದಾಗ್ಯೂ--ನಾವು ಯಾವದರಲ್ಲಿ ಆತನಿಗೆ ಬೇಸರಮಾಡಿದ್ದೇವೆ ಎಂದು ಅನ್ನುತ್ತೀರಿ; ಕೆಟ್ಟದ್ದನ್ನು ಮಾಡುವವರೆಲ್ಲರೂ ಕರ್ತನ ದೃಷ್ಟಿಯಲ್ಲಿ ಒಳ್ಳೆಯವರು, ಅವರಲ್ಲಿ ಆತನು ಮೆಚ್ಚುತ್ತಾನೆಂದೂ ನ್ಯಾಯದ ದೇವರು ಎಲ್ಲಿ ಎಂದೂ ನೀವು ಹೇಳುವದರಿಂದಲೇ.
ಆದರೆ ಆಕೆಯ ಗಂಡನಾದ ಯೋಸೇಫನು ನೀತಿವಂತನಾಗಿದ್ದು ಆಕೆಯನ್ನು ಬೈಲಿಗೆ ತರುವದಕ್ಕೆ ಮನಸ್ಸಿಲ್ಲದೆ ರಹಸ್ಯವಾಗಿ ಆಕೆಯನ್ನು ಬಿಟ್ಟುಬಿಡಬೇಕೆಂದು ಆಲೋಚಿಸುತ್ತಿದ್ದನು.
ಯಾವನಾದರೂ ತನ್ನ ಹೆಂಡತಿಯನ್ನು ಬಿಟ್ಟುಬಿಡಬೇಕೆಂದಿದ್ದರೆ ಅವನು ಆಕೆಗೆ ತ್ಯಾಗಪತ್ರ ಕೊಡಲಿ ಎಂದು ಹೇಳಿಯದೆ;
ಅದಕ್ಕೆ ಅವರು--ತ್ಯಾಗಪತ್ರವನ್ನು ಬರೆದುಕೊಟ್ಟು ಆಕೆಯನ್ನು ಬಿಟ್ಟುಬಿಡಬೇಕೆಂದು ಮೋಶೆಯು ಅಪ್ಪಣೆಕೊಟ್ಟನು ಅಂದರು.