Home Bibles ☰ Books ಮತ್ತಾಯ 18:27 · ಕನ್ನಡ ಬೈಬಲ್
ಮತ್ತಾಯ 18:27 · ಕನ್ನಡ ಬೈಬಲ್

ಆ ಸೇವಕನ ಧಣಿಯು ಅವನ ಮೇಲೆ ಕನಿಕರಪಟ್ಟು ಅವನನ್ನು ಬಿಡಿಸಿ ಅವನ ಸಾಲವನ್ನೆಲ್ಲಾ ಬಿಟ್ಟು ಬಿಟ್ಟನು.

Cross references

ನ್ಯಾಯಾಧಿಪತಿಗಳು 10:16

ಅವರು ಅನ್ಯದೇವರುಗಳನ್ನು ತಮ್ಮ ಮಧ್ಯದಲ್ಲಿಂದ ತೊರೆದುಬಿಟ್ಟು ಕರ್ತನನ್ನು ಸೇವಿಸಿ ದರು. ಆಗ ಆತನ ಮನಸ್ಸು ಇಸ್ರಾಯೇಲಿನ ಕಷ್ಟ ಕ್ಕೋಸ್ಕರ ನೊಂದುಕೊಂಡಿತು.

ನೆಹೆಮ್ಯ 9:17

ಕೇಳದೆಯೂ ನೀನು ಅವರ ಮಧ್ಯದಲ್ಲಿ ಮಾಡಿದ ಅದ್ಭುತಕಾರ್ಯಗಳನ್ನು ಜ್ಞಾಪಕ ಮಾಡದೆಯೂ ತಮ್ಮ ಕುತ್ತಿಗೆಯನ್ನು ಕಠಿಣ ಮಾಡಿ ಎದುರುಬಿದ್ದು ತಮ್ಮ ದಾಸತ್ವಕ್ಕೆ ತಿರಿಗಿ ಹೋಗುವ ಹಾಗೆ ಅಧಿಪತಿಯನ್ನು ನೇಮಿಸಿದರು. ಆದರೆ ನೀನು ಮನ್ನಿಸುವ ದೇವರಾಗಿಯೂ ಕೃಪಾಪೂರ್ಣನೂ ಅಂತಃ ಕರಣವೂ ದೀರ್ಘಶಾಂತಿಯೂ ಮಹಾದಯೆಯೂ ಆಗಿರುವವನಾಗಿಯೂ ಇರುವದರಿಂದ ಅವರನ್ನು ಕೈ ಬಿಡಲಿಲ್ಲ.

ಕೀರ್ತನೆಗಳು 78:38

ಆದಾಗ್ಯೂ ಆತನು ಅಂತಃಕರಣವುಳ್ಳವನಾಗಿ, ಅವರ ಅಕ್ರಮವನ್ನು ಕ್ಷಮಿಸಿ, ನಾಶಮಾಡದೆ ಹೌದು, ಆತನು ಅನೇಕ ಸಾರಿ ತನ್ನ ಕೋಪವನ್ನು ತೋರಿಸದೆ ಕೋಪೋದ್ರೇಕವನ್ನೂ ಮಾಡಿಕೊಳ್ಳಲಿಲ್ಲ.

ಕೀರ್ತನೆಗಳು 86:5

ಕರ್ತನೇ, ನೀನು ಒಳ್ಳೆಯವನೂ ಕ್ಷಮಿಸುವದಕ್ಕೆ ಸಿದ್ಧನೂ ಆಗಿದ್ದೀ; ನಿನಗೆ ಮೊರೆಯಿಡುವವರೆಲ್ಲರಿಗೆ ಬಹು ಕೃಪೆಯುಳ್ಳವನೂ ಆಗಿದ್ದೀ.

ಕೀರ್ತನೆಗಳು 86:15

ಆದರೆ ನೀನು ಓ ಕರ್ತನೇ, ಅಂತಃಕರುಣೆಯೂ ದಯೆಯೂ ಉಳ್ಳ ದೇವರು ದೀರ್ಘಶಾಂತನೂ ಬಹಳ ಕೃಪೆಯೂ ಸತ್ಯವೂ ಉಳ್ಳವನೂ ಆಗಿದ್ದೀ.

ಕೀರ್ತನೆಗಳು 145:8

ಕರ್ತನು ಕೃಪಾಳುವೂ ಅಂತಃಕರಣವೂ ದೀರ್ಘಶಾಂತಿಯೂ ಮಹಾಕರುಣೆಯುಳ್ಳವನೂ ಆಗಿದ್ದಾನೆ.

ಹೊಶೇಯ 11:8

ಎಫ್ರಾಯಾಮೇ, ನಾನು ನಿನ್ನನ್ನು ಬಿಟ್ಟು ಬಿಡುವದು ಹೇಗೆ? ಇಸ್ರಾಯೇಲೇ, ನಿನ್ನನ್ನು ನಾನು ಬಿಡಿಸುವದು ಹೇಗೆ? ನಾನು ನಿನ್ನನ್ನು ಅದ್ಮದ ಹಾಗೆ ಮಾಡುವದು ಹೇಗೆ? ನಾನು ನಿನ್ನನ್ನು ಜೆಬೋಯಾಮಿನ ಹಾಗೆ ಸ್ಥಾಪಿಸುವದು ಹೇಗೆ? ನನ್ನ ಹೃದಯವು ನನ್ನಲ್ಲಿ ತಿರುಗಿಕೊಂಡಿದೆ. ನನ್ನ ಪಶ್ಚಾತ್ತಾಪಗಳು ಒಟ್ಟಿಗೆ ಹತ್ತಿ ಕೊಂಡಿವೆ.

Interlinear

Choose Theme