Home Bibles ಮತ್ತಾಯ 17:24 · ಕನ್ನಡ ಬೈಬಲ್
ಮತ್ತಾಯ 17:24 · ಕನ್ನಡ ಬೈಬಲ್

ತರುವಾಯ ಅವರು ಕಪೆರ್ನೌಮಿಗೆ ಬಂದಾಗ ತೆರಿಗೆ ಹಣವನ್ನು ವಸೂಲಿಮಾಡುವವರು ಪೇತ್ರನ ಬಳಿಗೆ ಬಂದು--ನಿಮ್ಮ ಬೋಧಕನು ತೆರಿಗೆಯನ್ನು ಸಲ್ಲಿಸುವದಿಲ್ಲವೋ ಎಂದು ಕೇಳಿದರು. ಅದಕ್ಕೆ ಅವನು--ಸಲ್ಲಿಸುವನು ಅಂದನು.

Cross references

ನಿರ್ಗಮಕಾಂಡ 30:13

ಎಣಿಸಲ್ಪಟ್ಟವರಲ್ಲಿ ಸೇರುವ ಪ್ರತಿ ಮನುಷ್ಯನು ಕೊಡಬೇಕಾದದ್ದು ಏನಂದರೆ: ಶೆಕೆಲಿಗೆ ಇಪ್ಪತ್ತು ಗೇರಾ ಪ್ರಕಾರವಾಗಿ ಪರಿಶುದ್ಧ ಆಲಯದ ಶೆಕೆಲಿನ ಮೇರೆಗೆ ಅರೆ ಶೆಕೆಲ್‌ ಕೊಡಬೇಕು. ಅರೆ ಶೆಕೆಲ್‌ ಕರ್ತನಿಗೆ ಅರ್ಪಿಸುವ ಕಾಣಿಕೆಯಾಗಿರಬೇಕು.

ನಿರ್ಗಮಕಾಂಡ 38:26

ಪರಿಶುದ್ಧಾಲಯ ನಿಯಮದ ಮೇರೆಗೆ ತಲಾ ಒಂದು ಬೆಕಾ, ಅಂದರೆ ಅರ್ಧ ಶೆಕೆಲಿನಂತೆ ಇಪ್ಪತ್ತು ಮೊದಲುಗೊಂಡು ಅದಕ್ಕೆ ಮೇಲಿನ ಪ್ರಾಯ ದವರನ್ನು ಲೆಕ್ಕ ಮಾಡಲಾಗಿ ಆರು ಲಕ್ಷ ಮೂರು ಸಾವಿರದ ಐದು ನೂರ ಐವತ್ತು ಗಂಡಸರ ಸಂಖ್ಯೆ ಇತ್ತು.

ಮಾರ್ಕ 9:33

ಆತನು ಕಪೆರ್ನೌಮಿಗೆ ಬಂದು ಮನೆಯಲ್ಲಿದ್ದಾಗ ಅವರಿಗೆ--ದಾರಿಯಲ್ಲಿ ನಿಮ್ಮೊಳಗೆ ನೀವು ಏನು ವಾಗ್ವಾದ ಮಾಡಿದಿರಿ ಎಂದು ಕೇಳಿದನು.

Interlinear

Choose Theme