ಆಗ ಅಲ್ಲಿದ್ದ ಜನರು ಆತನ ಗುರುತು ಹಿಡಿದು ಸುತ್ತ ಮುತ್ತಲಿನ ಸೀಮೆಗೆಲ್ಲಾ ಹೇಳಿಕಳುಹಿಸಿ ರೋಗಿಗಳ ನ್ನೆಲ್ಲಾ ಆತನ ಬಳಿಗೆ ತಂದರು.ಅವರು ಆತನ ಉಡು ಪಿನ ಅಂಚನ್ನಾದರೂ ಮುಟ್ಟುವಂತೆ ಆತನನ್ನು ಬೇಡಿ ಕೊಂಡರು; ಮತ್ತು ಯಾರಾರು ಮುಟ್ಟಿದರೋ ಅವರು ಸಂಪೂರ್ಣವಾಗಿ ಸ್ವಸ್ಥರಾದರು.
Cross references
ಆತನ ಕೀರ್ತಿಯು ಸಿರಿಯದಲ್ಲೆಲ್ಲಾ ಹರಡಿತು; ಆಗ ನಾನಾ ವಿಧವಾದ ರೋಗಗಳಿಂದ ಮತ್ತು ಯಾತನೆಗಳಿಂದ ಅಸ್ವಸ್ಥರಾದವರೆಲ್ಲರನ್ನೂ ದೆವ್ವಗಳು ಹಿಡಿದವರನ್ನೂ ಮೂರ್ಛಾ ರೋಗಿಗಳನ್ನೂ ಪಾರ್ಶ್ವವಾಯುರೋಗಿ ಗಳನ್ನೂ ಆತನ ಬಳಿಗೆ ತಂದರು. ಆತನು ಅವರನ್ನು ಸ್ವಸ್ಥಪಡಿಸಿದನು.ಆಗ ಗಲಿಲಾಯದಿಂದಲೂ ದೆಕಪೊಲಿಯದಿಂದಲೂ ಯೆರೂಸಲೇಮಿನಿಂದಲೂ ಯೂದಾಯದಿಂದಲೂ ಯೊರ್ದನಿನ ಆಚೆಯಿಂದ ಲೂ ಜನರು ದೊಡ್ಡ ಸಮೂಹಗಳಾಗಿ ಆತನನ್ನು ಹಿಂಬಾಲಿಸಿದರು.
ಕೂಡಲೆ ಆತನ ಕೀರ್ತಿಯು ಗಲಿಲಾಯದ ಸುತ್ತಮುತ್ತಲಿನ ಎಲ್ಲಾ ಪ್ರದೇಶದಲ್ಲಿ ಹಬ್ಬಿತು.
ಕೆಲವು ದಿವಸಗಳಾದ ಮೇಲೆ ಆತನು ತಿರಿಗಿ ಕಪೆರ್ನೌಮಿಗೆ ಬಂದನು; ಆಗ ಆತನು ಮನೆಯಲ್ಲಿದ್ದ ಸುದ್ದಿಯು ಹರಡಿತು.
ಯೆರೂಸಲೇಮಿನಿಂದಲೂ ಇದೂಮಾಯದಿಂದಲೂ ಯೊರ್ದನಿನ ಆಚೆಯಿಂ ದಲೂ ಜನರು ದೊಡ್ಡ ಸಮೂಹವಾಗಿ ಆತನನ್ನು ಹಿಂಬಾಲಿಸಿದರು. ಆತನು ಮಾಡಿದ ಮಹತ್ಕಾರ್ಯ ಗಳನ್ನು ಕೇಳಿ ತೂರ್ ಸೀದೋನ್ ಸುತ್ತಲಿನ ಜನರು ದೊಡ್ಡ ಸಮೂಹವಾಗಿ ಆತನ ಬಳಿಗೆ ಬಂದರು.
ಸುತ್ತಲಿನ ಸೀಮೆಯಲ್ಲೆಲ್ಲಾ ಓಡಾಡಿ ಆತನು ಎಲ್ಲಿದ್ದಾನೆಂದು ಕೇಳಿ ಇದ್ದಲ್ಲಿಗೆ ಅಸ್ವಸ್ಥತೆಯುಳ್ಳವರನ್ನು ಹಾಸಿಗೆಗಳೊಂದಿಗೆ ಎತ್ತಿಕೊಂಡು ಹೋಗಲಾರಂಭಿಸಿದರು.ತರುವಾಯ ಆತನು ಯಾವ ಯಾವ ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ, ಸೀಮೆಯಲ್ಲಿ ಪ್ರವೇಶಿಸಿದನೋ ಅಲ್ಲೆಲ್ಲಾ ಅವರು ಅಸ್ವಸ್ಥ ವಾದವರನ್ನು ಬೀದಿಗಳಲ್ಲಿ ಮಲಗಿಸಿ ಆತನ ಉಡುಪಿನ ಅಂಚನ್ನಾದರೂ ಅವರು ಮುಟ್ಟಗೊಡಿಸಬೇಕೆಂದು ಆತನನ್ನು ಬೇಡಿಕೊಂಡರು; ಯಾರಾರು ಆತನನ್ನು ಮುಟ್ಟಿದರೋ ಅವರು ಸ್ವಸ