Home Bibles ಮತ್ತಾಯ 13:31 · ಕನ್ನಡ ಬೈಬಲ್
ಮತ್ತಾಯ 13:31 · ಕನ್ನಡ ಬೈಬಲ್

ಆತನು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದ್ದೇನಂದರೆ--ಒಬ್ಬ ಮನುಷ್ಯನು ತಕ್ಕೊಂಡು ಹೋಗಿ ತನ್ನ ಹೊಲದಲ್ಲಿ ಬಿತ್ತಿದ್ದ ಸಾಸಿವೆ ಕಾಳಿಗೆ ಪರಲೋಕರಾಜ್ಯವು ಹೋಲಿಕೆಯಾಗಿದೆ.

Cross references

ಯೆಹೆಜ್ಕೇಲ 47:5

ಇನ್ನೂ ಸಾವಿರ ಅಳೆದ ಮೇಲೆ ಅದು ನಾನು ದಾಟಲಾಗದಂತ ನದಿಯಾಗಿತ್ತು; ನೀರು ಹೆಚ್ಚಿ, ಈಜುವಷ್ಟಾಗಿ ದಾಟಲಾಗದಷ್ಟು ನದಿಯಾಗಿತ್ತು.

ಮತ್ತಾಯ 13:24

ಆತನು ಮತ್ತೊಂದು ಸಾಮ್ಯವನ್ನು ಹೇಳಿದ್ದೇ ನಂದರೆ--ಪರಲೋಕ ರಾಜ್ಯವು ಒಳ್ಳೇ ಬೀಜವನ್ನು ತನ್ನ ಹೊಲದಲ್ಲಿ ಬಿತ್ತಿದ್ದ ಒಬ್ಬ ಮನುಷ್ಯನಿಗೆ ಹೋಲಿಕೆ ಯಾಗಿದೆ.

ಮತ್ತಾಯ 17:20

ಯೇಸು ಅವರಿಗೆ--ನಿಮ್ಮ ಅಪನಂಬಿಕೆಯ ದೆಸೆಯಿಂದಲೇ; ನಾನು ನಿಮಗೆ ನಿಜವಾಗಿ ಹೇಳುವದೇನಂದರೆ--ಸಾಸಿವೆ ಕಾಳಷ್ಟು ನಂಬಿಕೆ ನಿಮಗಿರುವದಾದರೆ ನೀವು ಈ ಬೆಟ್ಟಕ್ಕೆ--ಇಲ್ಲಿಂದ ಆ ಸ್ಥಳಕ್ಕೆ ಹೋಗು ಎಂದು ಹೇಳಿದರೆ ಅದು ಹೋಗುವದು; ಮತ್ತು ಯಾವದೂ ನಿಮಗೆ ಅಸಾಧ್ಯವಾಗಿರುವದಿಲ್ಲ.

ಮಾರ್ಕ 4:30

ಆತನು--ದೇವರ ರಾಜ್ಯವನ್ನು ನಾವು ಯಾವ ದಕ್ಕೆ ಹೋಲಿಸೋಣ? ಇಲ್ಲವೆ ಯಾವ ಹೋಲಿಕೆಗೆ ಅದನ್ನು ಹೋಲಿಸೋಣ?

ಲೂಕ 13:18

ಇದಲ್ಲದೆ ಆತನು--ದೇವರ ರಾಜ್ಯವು ಯಾವ ದಕ್ಕೆ ಹೋಲಿಕೆಯಾಗಿದೆ? ನಾನು ಯಾವದಕ್ಕೆ ಅದನ್ನು ಹೋಲಿಸಲಿ?

ಲೂಕ 17:6

ಕರ್ತನು ಅವರಿಗೆ-- ನಿಮಗೆ ಸಾಸಿವೆ ಕಾಳಿನಷ್ಟು ನಂಬಿಕೆ ಇರುವದಾದರೆ ನೀವು ಈ ಆಲದ ಮರಕ್ಕೆ--ನೀನು ಬೇರು ಸಹಿತ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ನಾಟಿಕೋ ಎಂದು ಹೇಳುವದಾದರೆ ಅದು ನಿಮಗೆ ವಿಧೇಯ ವಾಗುವದು.

ಲೂಕ 19:11

ಅವರು ಈ ಮಾತುಗಳನ್ನು ಕೇಳುತ್ತಿರಲಾಗಿ ಯೇಸು ತಾನು ಯೆರೂಸಲೇಮಿಗೆ ಸವಿಾಪವಾಗಿದ್ದದ ರಿಂದಲೂ ದೇವರ ರಾಜ್ಯವು ಕೂಡಲೆ ಪ್ರತ್ಯಕ್ಷವಾಗು ವದೆಂದು ಅವರು ಭಾವಿಸಿದ್ದದರಿಂದಲೂ ಆತನು ಇನ್ನೂ ಒಂದು ಸಾಮ್ಯವನ್ನು ಹೇಳಿದನು.

ಲೂಕ 20:9

ಇದಲ್ಲದೆ ಆತನು ಜನರಿಗೆ ಈ ಸಾಮ್ಯವನ್ನು ಹೇಳುವದಕ್ಕೆ ಪ್ರಾರಂಭಿಸಿ--ಒಬ್ಬಾನೊಬ್ಬ ಮನುಷ್ಯನು ದ್ರಾಕ್ಷೇತೋಟವನ್ನು ನೆಟ್ಟು ಅದನ್ನು ಒಕ್ಕಲಿಗರಿಗೆ ವಾರಕ್ಕೆ ಕೊಟ್ಟು ಬಹುಕಾಲದ ವರೆಗೆ ಒಂದು ದೂರ ದೇಶಕ್ಕೆ ಹೊರಟುಹೋದನು.

Interlinear

Choose Theme